ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Summer Cricket: ಗೌರಿಬಿದನೂರಿನಲ್ಲಿ ಬೇಸಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ಬಿಸಿಸಿ ಅಧ್ಯಕ್ಷರಾದ ಯೂನಿಯನ್ ಬ್ಯಾಂಕ್ ಚಂದ್ರಶೇಖರ್ ವಿಜೇತರಾದ ಕ್ರಿಕೆಟ್ ಕ್ರೀಡಾಪಟುಗಳಿಗೆ ಪಾರಿತೋಷಕಗಳನ್ನು ಪ್ರದಾನ ಮಾಡಿ ಮಾತನಾಡಿ, ಗೌರಿಬಿದನೂರಿನಲ್ಲಿ ಸುಮಾರು ಮೂರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸುತ್ತಿದ್ದು, ಆಸಕ್ತ ಸಮಾನ ಮನಸ್ಕ ಕ್ರಿಕೆಟ್ ಪ್ರೇಮಿಗಳನ್ನು ಸೇರಿಸಿಕೊಂಡು ಭಾನುವಾರದ ಬಿಡುವು ಕಾರ್ಯಕ್ರಮದ ಶೀರ್ಷಿಕೆಯ ಅಡಿಯಲ್ಲಿ ನಿರಂತರವಾಗಿ ಕ್ರೀಡಾಭ್ಯಾಸ ಮತ್ತು ಕ್ರೀಡಾಕೂಟಗಳನ್ನು ಮುಂದುವರಿಸುತ್ತಿದ್ದೇವೆ

ಗೌರಿಬಿದನೂರಿನಲ್ಲಿ ಬೇಸಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

-

Profile
Ashok Nayak Apr 20, 2026 11:44 PM

ಗೌರಿಬಿದನೂರು : ಪಟ್ಟಣದ ಆಚಾರ್ಯ ಕೃಷಿ ಮೈದಾನದಲ್ಲಿ ಬೇಸಿಗೆಯ ಕ್ರಿಕೆಟ್ ಪಂದ್ಯಾವಳಿ ಗಳನ್ನು ಆಯೋಜಿಸಲಾಗಿತ್ತು.

ಬಿಸಿಸಿ ಅಧ್ಯಕ್ಷರಾದ ಯೂನಿಯನ್ ಬ್ಯಾಂಕ್ ಚಂದ್ರಶೇಖರ್ ವಿಜೇತರಾದ ಕ್ರಿಕೆಟ್ ಕ್ರೀಡಾಪಟುಗಳಿಗೆ ಪಾರಿತೋಷಕಗಳನ್ನು ಪ್ರದಾನ ಮಾಡಿ ಮಾತನಾಡಿ, ಗೌರಿಬಿದನೂರಿನಲ್ಲಿ ಸುಮಾರು ಮೂರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸುತ್ತಿದ್ದು, ಆಸಕ್ತ ಸಮಾನ ಮನಸ್ಕ ಕ್ರಿಕೆಟ್ ಪ್ರೇಮಿಗಳನ್ನು ಸೇರಿಸಿಕೊಂಡು ಭಾನುವಾರದ ಬಿಡುವು ಕಾರ್ಯಕ್ರಮದ ಶೀರ್ಷಿಕೆಯ ಅಡಿಯಲ್ಲಿ ನಿರಂತರವಾಗಿ ಕ್ರೀಡಾಭ್ಯಾಸ ಮತ್ತು ಕ್ರೀಡಾಕೂಟಗಳನ್ನು ಮುಂದುವರಿಸುತ್ತಿದ್ದೇವೆ ಎಂದರು.

ಇದರ ಉದ್ದೇಶ ಯುವಕರಲ್ಲಿ ಕ್ರೀಡಾಸಕ್ತಿ ಮತ್ತು ಸ್ನೇಹಮಯ ವಾತಾವರಣದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು. ಇದರ ಜೊತೆಗೆ ಜೀವನದಲ್ಲಿ ಉಳಿತಾಯ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.

ಇದನ್ನೂ ಓದಿ: IPL 2026; ಡೆಲ್ಲಿ-ಸನ್‌ರೈಸರ್ಸ್‌ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ರೀಡಾ ಪ್ರೇಮಿ ತೀರ್ಥಶಾಲೆಯ ಮುಖ್ಯಸ್ಥರಾದ ಡಾ. ಕೆ.ವಿ. ಪ್ರಕಾಶ್ ಮಾತನಾಡಿ, ಪ್ರತಿದಿನ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಜಡತ್ವ ತೊಲಗಿಸಿ ಕ್ರಿಯಾಶೀಲತೆ ಉಂಟಾಗುತ್ತದೆ. ನಮಗೆ ಕ್ರೀಡೆಗಳು ದೈಹಿಕ ಸ್ವಾಸ್ಥ್ಯವನ್ನು ನೀಡುತ್ತವೆ. ಇದರ ಜೊತೆಗೆ ನಾವುಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಸಾಮಾಜಿಕ ರಚನಾತ್ಮಕ ಚಟುವಟಿಕೆಗಳಾದ ಪರಿಸರ ಸಂರಕ್ಷಣೆ, ರಕ್ತದಾನ, ನೇತ್ರದಾನ, ಆರೋಗ್ಯ ಶಿಬಿರಗಳು, ಸ್ವಚ್ಛತಾ ಅಭಿಯಾನ ಮತ್ತಿತರ ಕಾರ್ಯ ಕ್ರಮಗಳನ್ನು ಆಯೋಜಿಸಬೇಕೆಂದು ಕರೆಕೊಟ್ಟ ಅವರು ಕ್ರೀಡೆ ಆರೋಗ್ಯ ಸಂವರ್ಧನೆಯ ಸಂಜೀವಿನಿ ಎಂದು ಅಭಿಪ್ರಾಯಪಟ್ಟರು.

ಕ್ರಿಕೆಟ್ ತಂಡದ ನಾಯಕರಾದ ಶಿಕ್ಷಣ ಇಲಾಖೆಯ ಕೃಷ್ಣಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಈ ರೀತಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ನಿರಂತರವಾಗಿ ಮುಂದುವರಿಸಬೇಕು. ನಿಯಮಿತವಾಗಿ ಕ್ರಿಕೆಟ್ ಕ್ರೀಡಾಪಟುಗಳು ಸಕಾಲಕ್ಕೆ ಭಾಗವಹಿಸಿ, ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ಕ್ರಿಯಾಶೀಲ ಕ್ರಿಕೆಟ್ ಕ್ರೀಡಾಪಟು ಹಾಗೂ ಮೂಳೆ ತಜ್ಞರಾದ ಆರೋಗ್ಯ ಇಲಾಖೆಯ ಡಾ. ಹರಿಕೃಷ್ಣ ರವರು ಮಾತನಾಡಿ, ಕ್ರೀಡೆಗಳು ನಮಗೆ ಮನೋಲ್ಲಾಸ ಮತ್ತು ದೈಹಿಕ ಸದೃಢತೆಯನ್ನು ಹೆಚ್ಚುಸು ತ್ತವೆ. ಜಾಗರೂಕತೆಯಿಂದ, ಕುಶಲತೆಯಿಂದ ಆಟವಾಡಬೇಕೆಂದು ತಿಳಿಸಿದರು. 

ಕ್ರೀಡಾಕೂಟದಲ್ಲಿ ಕೃಷ್ಣಕುಮಾರ್ ತಂಡ, ಬಾಬಾ ಜಾನ್ ತಂಡ, ಕೃಷ್ಣ ತಂಡ ಮತ್ತು ಕಮಲ್ ತಂಡಗಳು ಭಾಗವಹಿಸಿದ್ದವು. ಸ್ನೇಹ ಮಯವಾಗಿ ಕ್ರೀಡಾ ಮನೋಭಾವನೆಯೊಂದಿಗೆ ಪಂದ್ಯಾವಳಿ ಗಳು ನಡೆದವು. 

ಕ್ರಿಕೆಟ್ ಕ್ರೀಡಾಕೂಟದಲ್ಲಿ ಸಂಯುಕ್ತ ಕರ್ನಾಟಕ ವರದಿಗಾರರಾದ ಅಶ್ವಥ್, ಕನ್ನಡಪ್ರಭ ವರದಿಗಾರರಾದ ಅರುಣ್ ಕುಮಾರ್, ಅರಣ್ಯ ಇಲಾಖೆಯ ಎಲ್ಲಪ್ಪ ಕೆರೂರ, ಆರೋಗ್ಯ ಇಲಾಖೆಯ ಚಂದ್ರಶೇಖರ್, ನಗರಸಭೆಯ ನವೀನ್, ಶಿಕ್ಷಣ ಇಲಾಖೆಯ ಪ್ರಶಾಂತ್, ಶ್ರೀ ಸ್ಟುಡಿಯೋ ಶ್ರೀನಿವಾಸ್, ಶ್ರೀ ವೈಷ್ಣವಿ ಟ್ರೇಡರ್ಸ್ ವೇಳಪಿ ಆನಂದ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಇಲಾಖೆ, ಪಂಚಾಯತ್ ರಾಜ್, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಮತ್ತಿತರ ಕ್ರಿಕೆಟ್ ಕ್ರೀಡಾಸಕ್ತರು ಭಾಗವಹಿಸಿದ್ದರು.