Andhra Pradesh DCM Pawan Kalyan: ಸಾಮಾಜಿಕ ಮತ್ತು ನ್ಯಾಯಪರ ತೀರ್ಪುಗಳ ಮೇರು ವ್ಯಕ್ತಿ : ನ್ಯಾಯಮೂರ್ತಿ ವಿ.ಗೋಪಾಲಗೌಡ - ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬಣ್ಣನೆ
ಚಿಂತಾಮಣಿಯ ಸಹೋದರ ಸಹೋದರಿಯರೇ ಜನಸೇನಾ ಸೇನಾನಿಗಳೇ ಹಾಗೂ ನೆಚ್ಚಿನ ಅಭಿಮಾನಿ ದೇವರುಗಳೇ ಕರ್ನಾಟಕದ ಜನತೆ ಪುಣ್ಯವಂತರು, ಶ್ರಮ, ಸೃಜನಶೀಲತೆ, ಚಲನಶೀಲತೆ ಯಿಂದ ಕೂಡಿದ ಈ ಮಣ್ಣಿನ ಮಗನಾಗಿರುವ ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿರುವುದು ಒಂದು ಸುದೈವ.

ಚಿಂತಾಮಣಿಯಲ್ಲಿ ನಡೆದ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ ಜನ್ಮದಿನದಲ್ಲಿ ಆಂದ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ ಭಾಗವಹಿಸಿ ಮಾತನಾಡಿದರು. -

ಚಿಂತಾಮಣಿ: ಕನ್ನಡ ನಾಡು ಅದ್ಭುತ ಪರಂಪರೆ ಮತ್ತು ಸಂಸ್ಕೃತಿಗಳ ತವರು. ಸಾಮರಸ್ಯದ ಈ ನಾಡು ಹಲವು ಕವಿಗಳ ನೆಲೆಬೀಡು.ದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿ ನಲ್ಲಿ ಕಾರ್ಯನಿರ್ವಹಿಸಿದ ಮೋಕ್ಷಂಗುಂಡಂ ವಿಶ್ವೇಶ್ವರಯ್ಯ, ತಮ್ಮ ರಚನೆಗಳ ಮೂಲಕ ಮಾನವೀಯ, ಸಮಾನತೆ ನೆಲೆಗಟ್ಟುಗಳು, ಸಾಮಾಜಿಕ ನ್ಯಾಯದ ದೃಷ್ಟಿಕೋನ ಮತ್ತು ವಿಶ್ವ ಮಾನವ ತತ್ವಗಳನ್ನು ಸಾರಿದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇಂತಹ ಮಹನೀಯ ರನ್ನು ಪಡೆದಿರುವ ಕರ್ನಾಟಕದ ಜನತೆ ನಿಜಕ್ಕೂ ಪುಣ್ಯವಂತರು ಎಂದು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬಣ್ಣಿಸಿದರು.
ಲಿಯೋ ಕ್ಲಬ್ ಆಫ್ ಮಾರ್ಗ ಮತ್ತು ಅನಿತ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ ೭೫ನೇ ಹುಟ್ಟು ಹಬ್ಬದ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ದೀಪಬೆಳಗುವ ಮೂಲಕ ಅವರು ಮಾತನಾಡಿದರು.
ಇದನ್ನೂ ಓದಿ: Pawan Kalyan: ʼಕಾಂತಾರ: ಚಾಪ್ಟರ್ 1' ಬೆಂಬಲಕ್ಕೆ ಬಂದ ಪವನ್ ಕಲ್ಯಾಣ್; ರಿಷಬ್ ಶೆಟ್ಟಿ ಚಿತ್ರದ ಬಗ್ಗೆ ಹೇಳಿದ್ದೇನು?
ಚಿಂತಾಮಣಿಯ ಸಹೋದರ ಸಹೋದರಿಯರೇ ಜನಸೇನಾ ಸೇನಾನಿಗಳೇ ಹಾಗೂ ನೆಚ್ಚಿನ ಅಭಿಮಾನಿ ದೇವರುಗಳೇ ಕರ್ನಾಟಕದ ಜನತೆ ಪುಣ್ಯವಂತರು, ಶ್ರಮ, ಸೃಜನಶೀಲತೆ, ಚಲನಶೀಲತೆ ಯಿಂದ ಕೂಡಿದ ಈ ಮಣ್ಣಿನ ಮಗನಾಗಿರುವ ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿರುವುದು ಒಂದು ಸುದೈವ. ಇವರು ನೀಡಿರುವ ತೀರ್ಪುಗಳು ಜನಪರ, ಸಾಮಾಜಿಕ, ಪರಿಸರ, ಕಾರ್ಮಿಕ, ಮಹಿಳೆಯರ, ರೈತ ಮತ್ತು ಶೋಷಿತರ ಪರವಾಗಿ ಧ್ವನಿ ಎತ್ತುವ ಮಹಾನ್ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದಾರೆಂದರು.
ಇವರು ನೀಡಿದ ತೀರ್ಪುಗಳಲ್ಲಿ ದೇಶದ ಇತಿಹಾಸದಲ್ಲೇ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು ವೈದ್ಯರ ನಿರ್ಲಕ್ಷ್ಯದಲ್ಲಿ ಗಂಡ ಸಾವಿಗೆ ತುತ್ತಾದಾಗ ಆತನ ಹೆಂಡತಿಗೆ ೬ಕೋಟಿ ೮ ಲಕ್ಷ ಹಣ ನಷ್ಟ ಪರಿಹಾರದ ಹಣವನ್ನು ಒದಗಿಸಿದ್ದು ಅವರ ನ್ಯಾಯ ತೀರ್ಪುಗಳಲ್ಲಿ ಒಂದಾಗಿದೆ. ಮಾತ್ರವಲ್ಲದೆ ಕಾರ್ಮಿಕರಿಗೆ ರಕ್ಷಣೆಗೆ ಸಂಬAಧಿಸಿದAತೆ ಹೈಕೋರ್ಟ್ ನೀಡಿದ ತೀರ್ಪನ್ನು ತೊಡೆದು ಹಾಕಿ ಕಾರ್ಮಿಕರಿಗೆ ಪರಿಹಾರ ನೀಡುವುದು ಎಷ್ಟು ಮುಖ್ಯವೇ ಆತನಿಗೆ ಉದ್ಯೋಗವು ಅಷ್ಟೇ ಮುಖ್ಯ ವಾಗಿದೆ. ಕಾರ್ಮಿಕ ಕಾಯ್ದೆಗಳ ಮೂಲಕ ಕಾರ್ಮಿಕರಿಗೆ ಕೇವಲ ಕೂಲಿ ನೀಡುವುದು ಮಾತ್ರವಲ್ಲ ಕಾರ್ಮಿಕರಿಗೆ ಗೌರವ ಮತ್ತು ಭದ್ರತೆಯು ಮುಖ್ಯವಾಗಿದೆ ಎಂಬುದನ್ನು ತೋರಿಸಿ ಕೊಟ್ಟವರು ಸುಪ್ರಿಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರೆಂದು ಸ್ಮರಿಸಿದರು.
ಹಳೆಯ ಕಾನೂನಿನ ಪ್ರಕಾರ ರೈತರ ಭೂಮಿಗಳನ್ನು ಕಿತ್ತುಕೊಳ್ಳುವುದು ಎಷ್ಟು ಅಸಮಂಜಸ ವೆಂದು ತಿಳಿದಾಗ ೨೦೧೦ ಮತ್ತು ೨೦೧೩ ೨೪ರ ಕಾಯ್ದೆಯ ಪ್ರಕಾರ ರೈತರ ಭೂಮಿಗಳನ್ನು ಕಿತ್ತು ಕೊಳ್ಳುವುದು ಸರಿಯಲ್ಲವೆಂದು ಅದನ್ನು ಪುನ: ರೈತರಿಗೆ ಹಿಂದಿರುಗಿಸುವಂತೆ ತೀರ್ಪು ನೀಡಿದ್ದು ಅವರ ಸಾಮಾಜಿಕ ನ್ಯಾಯದ ಪರವಾದ ನಿಲುವನ್ನು ತೋರಿಸಿದೆ. ನಿರ್ಭಯವಾಗಿ ತೀರ್ಪು ನೀಡುವುದರಲ್ಲಿ ನಿಸ್ಸೀಮರಾಗಿದ್ದವರು ಗೋಪಾಲಗೌಡರು ಎಂದರು.
ಕೇಂದ್ರ ರೈಲ್ವೆ ಮತ್ತು ರಾಜ್ಯ ಜಲಶಕ್ತಿ ಸಚಿವ ವಿ.ಸೋಮಣ್ಣ ಮಾತನಾಡಿ ಯುವ ಚಿಂತನೆ, ಮಾರ್ಗದರ್ಶನ, ಅನುಭವ, ದೂರದೃಷ್ಟಿ ಸರ್ವಕಾಲಕ್ಕೂ ಅಗತ್ಯವಿದೆ. ಅದನ್ನು ಒದಗಿಸುವ ಆಧಾರವಾಗಿದ್ದವರು ನಿವೃತ್ತ ನ್ಯಾಯಮೂರ್ತಿಗಳು. ರಾಜ್ಯ, ರಾಷ್ಟçಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾಗಿದ್ದು, ಬಡ ಕುಟುಂಬದಿAದ ಬಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಾಗಿ ಉನ್ನತ ಹುದ್ದೆಗೇರಿ ಸಮಾಜಕ್ಕೆ ಕೊಡುಗೆಯನ್ನು ನೀಡಿದ ಧೀಮಂತ ವ್ಯಕ್ತಿತ್ವವನ್ನು ಹೊಂದಿರುವ ಮೇರು ವ್ಯಕ್ತಿತ್ವ ಗೋಪಾಲಗೌಡರೆಂದರು.
ಬಾಬಾ ಸಾಹೇಬ್ ಅಂಬೇಡ್ಕರ್‌ರ ಪುತ್ಥಳಿ ಸ್ಥಾಪನೆಗೆ ಅವಕಾಶ ಮಾಡಿಕೊಡದಿರುವುದು ಹಾಗೂ ಅವರ ಪುತ್ಥಳಿಯನ್ನು ತೆರವುಗೊಳಿಸಿರುವುದು ಅಕ್ಷöಮ್ಯ ಅಪರಾಧವಾಗಿದೆ.ಇನ್ನದರೂ ಸರಿಯೆ ರಾಜ್ಯ ಸರ್ಕಾರ ಇತ್ತ ಗಮನ ಹರಿಸಬೇಕೆಂದರು.
ನ್ಯಾಯಮೂರ್ತಿಗಳು ೭೫ರ ಇಳಿವಯಸ್ಸಿನಲ್ಲೂ ೨೫ ವರ್ಷದ ಯುವಕರಂತೆ ಯೋಚಿಸುವವರಾಗಿ ದ್ದು, ತಾವು ಇನ್ನೂ ೨೫ ವರುಷಗಳ ಕಾಲ ಬದುಕಬೇಕು ಸಮಾಜದ ಅಭಿವೃದ್ಧಿಗೆ ನೆರವಾಗ ಬೇಕೆಂದರು.
ಸುಪ್ರಿಂಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ ಚಿಂತನೆಗಳು, ದೂರದೃಷ್ಟಿ ಹಾಗೂ ಪರಿಸರ ಮತ್ತು ರೈತ ಪರ, ಕಾರ್ಮಿಕ ಪರ, ಜನಪರ ಉದ್ದೇಶಗಳಿಗೆ, ಸಾಮಾಜಿಕ ನ್ಯಾಯಕ್ಕೆ ತುಡಿಯುವ ಮನಸ್ಸು ಮತ್ತು ಹೋರಾಟ ಮಾಡುವ ಧೀಮಂತನಾಯಕನೆAದರೆ ಅದು ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಿದ್ದಾರೆ ಎಂದರು.
ನಟನಾಗಿ ಯಶಸ್ವಿಯಾದಂತೆ ರಾಜಕಾರಣಿಯಾಗಿಯೂ ಯಶಸ್ಸಿನ ಹಾದಿಯಲ್ಲಿದ್ದಾರೆ. ದೂರ ದೃಷ್ಟಿಯುಳ್ಳ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ಪವನ್ ಕಲ್ಯಾಣ್ ಕೃಷ್ಣಾನದಿ ೀಞರಿನ ರಾಯಭಾರಿಯಾಗಲಿ ಎಂದು ಆಶಿಸಿದರು.
ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ಮಾತನಾಡಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ದೇಶದ ಸವೋಚ್ಛ ನ್ಯಾಯಾಲಯದ ನ್ಯಾಯಾ ಧೀಶರಾಗಿ ಕೆಲಸ ನಿರ್ವಹಿಸಿರುವ ವಿ.ಗೋಪಾಲಗೌಡರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ನಾವೆಲ್ಲರೂ ಪಾಲ್ಗೊಂಡಿರುವುದು ಅಪಾರ ಸಂತೋಷವನ್ನುಂಟು ಮಾಡಿದೆ. ಕೇವಲ ಇದೊಂದು ಹುಟ್ಟುಹಬ್ಬದ ಆಚರಣೆಯ ಸಮಾರಂಭವಾಗಿರದೇ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ವೇದಿಕೆ ಮೂಲಕ ಹಮ್ಮಿಕೊಳ್ಳಲಾಗಿದೆ. ಲ್ಯಾಪ್‌ಟ್ಯಾಪ್, ಹೊಲಿಗೆಯಂತ್ರ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸುವ ವೇದಿಕೆಯಾಗಿದ್ದು, ಆಂಧ್ರದ ಉಪಮುಖ್ಯಮಂತ್ರಿ ಪವನ್‌ಕಲ್ಯಾಣ್ ದಕ್ಷಿಣ ಭಾರತದಲ್ಲಿ ಹಿಂದೂ ಧರ್ಮದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದರು.
ಈ ವೇದಿಕೆಗೆ ಅವರನ್ನು ಕರೆಸಿ ಅವರಿಗೆ ಮನವಿ ಸಲ್ಲಿಸಿದ್ದು ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ ೬೦ ಲಕ್ಷ ಮಂದಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಮಳೆಯನ್ನೇ ಅವಲಂಬಿಸಿ ಬೇಸಾಯ ಮಾಡುತ್ತಿರುವ ಇಲ್ಲಿನ ಜನತೆ ಒಂದೊಮ್ಮೆ ನೀವುಗಳು ಕೃಷ್ಣಾ ನದಿ ನೀರನ್ನು ಈ ಭಾಗದ ಜನತೆಯ ಬದುಕು ಬಂಗಾರವಾಗಲಿದೆ ಎಂದರು. ನೀಡಿದಲ್ಲಿ ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ ೬೦ ಲಕ್ಷ ಜನರ ಬದುಕಿನ ಪ್ರಶ್ನೆಯಾಗಿರುವ ಈ ಸಮಸ್ಯೆ ಪರಿಹಾರಕ್ಕೆ ಕೇಂದ್ರದ ಜಲಶಕ್ತಿ ಸಚಿವ ವಿ.ಸೋಮಣ್ಣ, ನಮ್ಮ ಪಕ್ಷದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಷ್ಟಾçಧ್ಯಕ್ಷ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರೊಂದಿಗೆ ಚರ್ಚಿಸಿ ಕೃಷ್ಣಾ ನದಿ ನೀರು ಬಯಲು ಜಿಲ್ಲೆಗಳಿಗೆ ಹರಿಸಲು ಆಂಧ್ರದ ಉಪಮುಖ್ಯಮಂತ್ರಿಗಳಾದ ನೀವು, ಮುಖ್ಯಮಂತ್ರಿಗಳಾದ ಚಂದ್ರಬಾಬುನಾಯುಡುರೊಂದಿಗೆ ಚರ್ಚಿಸಿ ಬಯಲು ಜಿಲ್ಲೆಗಳಿಗೆ ನೀರು ಹರಿಸಲು ನೆರವಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಸಂಸದ ಎಂ.ಮಲ್ಲೇಶ್‌ಬಾಬು, ಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್, ನವೀನ್.ಜಿ.ಕೃಷ್ಣಾ, ಯುಧೀಷ್ಠಿರಾ, ಕೊಂಗನಹಳ್ಳಿ ಶಿವಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.