ಚಿಕ್ಕಬಳ್ಳಾಪುರ : ಮಂಚೇನಹಳ್ಳಿ ತಾಲೂಕು ಆಡಳಿತ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಚರಿಸಿದ 77ನೇ ಗಣರಾಜ್ಯೋತ್ಸವದ ವೇಳೆ ಶಿಕ್ಷಕರ ಕರ್ತವ್ಯ ಲೋಪ ದಿಂದಾಗಿ ರಾಷ್ಟ್ರಧ್ವಜವನ್ನು ತಲೆ ಕೆಳಕಾಗಿ ಹಾರಿಸಿರುವ ಅಹಿತಕರ ಘಟನೆ ನಡೆದಿದೆ.
ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜವನ್ನು ಕೇಸರಿ ಬಿಳಿಹಸಿರು ಬಣ್ಣಯಿರುವಂತೆ ಕಟ್ಟುವ ಬದಲಿಗೆ ಹಸಿರು, ಬಿಳಿ ಕೇಸರಿ ಇರುವಂತೆ ಕಟ್ಟಿರುವ ಈ ಘಟನೆ ನಡೆದಿದ್ದು ತಪ್ಪಿನ ಅರಿವಾಗುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ ಧ್ವಜವನ್ನು ಕೆಳಗಿಳಿಸಿ ಮತ್ತೆ ನಿಯಮ ದಂತೆ ಹಾರಿಸಲಾಗಿದೆ.
ಇದನ್ನೂ ಓದಿ: Republic Day Tableau: ಗಣರಾಜ್ಯೋತ್ಸವಕ್ಕೆ ಮೆರಗು ತಂದ ಸ್ತಬ್ಧಚಿತ್ರಗಳು; ಇಲ್ಲಿದೆ ನೋಡಿ ಫೋಟೊ ಗ್ಯಾಲರಿ
ಮಂಚನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಧ್ವಜಕಟ್ಟುವ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ವಹಿಸಲಾಗಿತ್ತು ಎನ್ನಲಾಗಿದೆ.
ಈ ಸುದ್ದಿ ಕಾಡ್ಗಿಚ್ಚಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಂದಿತು.
ಇದಕ್ಕೆ ಪ್ರತಿಕ್ರಯಿಸಿದ ಅವರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು. ಆದರೆ ಇದಕ್ಕೂ ಮೊದಲೇ ತಹಶೀಲ್ದಾರ್ ಧ್ವಜ ಉಲ್ಟಾ ಕಟ್ಟಿದ ಶಿಕ್ಷಕನನ್ನು ಕರ್ತವ್ಯಲೋಪದ ಕಾರಣ ನೀಡಿ ಅಮಾನತು ಮಾಡಲಾಗಿದೆ ಎನ್ನಲಾಗಿದೆ.