ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಸರ್ಕಾರಿ ಭೂಗಳ್ಳರ ವಿರುದ್ಧ ಹೋರಾಟ, ಸಮುದಾಯದ ವಿರುದ್ಧವಲ್ಲ: ಜೆ.ಕೆ.ಕೃಷ್ಣಾರೆಡ್ಡಿ

ಶಾಸಕ ಎಂ.ಸಿ.ಸುಧಾಕರ್ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸರ್ಕಾರಿ ಜಮೀನುಗಳನ್ನು ನಿಯಮಬಾಹಿರವಾಗಿ ವಿವಿಧ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡಿಸಲು ಮುಂದಾಗಿದ್ದಾರೆ ಎಂದು ಕೃಷ್ಣಾರೆಡ್ಡಿ ಆರೋಪಿಸಿದರು. ನಲ್ಲಗುಟ್ಟಹಳ್ಳಿ ಸೇರಿದಂತೆ ಹಲವು ಕಡೆ ಸರ್ಕಾರಿ ಗೋಮಾಳ ಹಾಗೂ ಬಿ-ಖರಾಬ್ ಜಮೀನುಗಳ ವಿಚಾರದಲ್ಲೂ ಅಕ್ರಮ ನಡೆದಿದೆ ಎಂದು ದೂರಿದರು.

ಸರ್ಕಾರಿ ಭೂಗಳ್ಳರ ವಿರುದ್ಧ ಹೋರಾಟ, ಸಮುದಾಯದ ವಿರುದ್ಧವಲ್ಲ

-

Profile
Ashok Nayak Sep 1, 2026 11:29 PM

ಚಿಂತಾಮಣಿ: ತಾವು ಯಾವುದೇ ಸಮುದಾಯ ಅಥವಾ ಮಠದ ವಿರೋಧಿಯಲ್ಲ. ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಕಬಳಿಸುವವರ ವಿರುದ್ಧ ಮಾತ್ರ ಹೋರಾಟ ನಡೆಸುತ್ತಿದ್ದೇವೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಸ್ಪಷ್ಟಪಡಿಸಿದರು.

ಚಿಂತಾಮಣಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಬಡ ವಿದ್ಯಾರ್ಥಿಗಳಿಗಾಗಿ ಮೀಸಲಾಗಿದ್ದ ಜಾಗದಲ್ಲಿ ಹಾಸ್ಟೆಲ್ ನಿರ್ಮಿಸುವ ಬದಲು ಕಲ್ಯಾಣ ಮಂಟಪ ನಿರ್ಮಿಸಲಾಗಿದೆ ಎಂದು ಆರೋಪಿಸಿದರು. 1943ರಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆದಿದ್ದು, 1953ರಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಹಾಸ್ಟೆಲ್ ಕಟ್ಟಡ ಉದ್ಘಾಟಿಸಿದ್ದರು. ಇದೀಗ ಆ ಜಾಗವನ್ನು ಎಂ.ಸಿ. ಆಂಜನೇಯರೆಡ್ಡಿ ಕಲ್ಯಾಣ ಮಂಟಪ ವಾಗಿ ಬಳಸಲಾಗುತ್ತಿದೆ ಎಂದು ದೂರಿದರು.

ಇದನ್ನೂ ಓದಿ: Chikkaballapur News: 2,806 ಮಂಜೂರಿದಾರರ ಹೆಸರಿಗೆ ಖಾತೆ–ಪಹಣಿ ಇಂಡೀಕರಣ: ಬಾಕಿ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಅದೇ ರೀತಿ ಮಾಳಪಲ್ಲಿ ಗ್ರಾಮದ ಸರ್ವೆ ನಂ.39ರಲ್ಲಿ 1993ರಲ್ಲಿ ಸುಮಾರು ನಾಲ್ಕು ಎಕರೆ ಸರ್ಕಾರಿ ಜಮೀನನ್ನು ಬಡ ಒಕ್ಕಲಿಗ ವಿದ್ಯಾರ್ಥಿಗಳ ಹಾಸ್ಟೆಲ್, ವೃತ್ತಿಪರ ತರಬೇತಿ ಸಂಸ್ಥೆ, ರೈತರಿಗೆ ತಾಂತ್ರಿಕ ಸಲಹಾ ಕೇಂದ್ರ ಹಾಗೂ ಕೌಶಲ್ಯಾಭಿವೃದ್ಧಿ ಸಂಸ್ಥೆಗಾಗಿ ಮಂಜೂರು ಮಾಡಲಾಗಿತ್ತು. ಆದರೆ ನಿಗದಿತ ಉದ್ದೇಶಗಳಿಗೆ ಜಾಗ ಬಳಕೆಯಾಗದೆ ಶಾಲೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಶಾಸಕ ಎಂ.ಸಿ.ಸುಧಾಕರ್ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸರ್ಕಾರಿ ಜಮೀನುಗಳನ್ನು ನಿಯಮಬಾಹಿರವಾಗಿ ವಿವಿಧ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡಿಸಲು ಮುಂದಾಗಿದ್ದಾರೆ ಎಂದು ಕೃಷ್ಣಾರೆಡ್ಡಿ ಆರೋಪಿಸಿದರು. ನಲ್ಲಗುಟ್ಟಹಳ್ಳಿ ಸೇರಿದಂತೆ ಹಲವು ಕಡೆ ಸರ್ಕಾರಿ ಗೋ ಮಾಳ ಹಾಗೂ ಬಿ-ಖರಾಬ್ ಜಮೀನುಗಳ ವಿಚಾರದಲ್ಲೂ ಅಕ್ರಮ ನಡೆದಿದೆ ಎಂದು ದೂರಿದರು.

ಒಕ್ಕಲಿಗರ ಹಾಸ್ಟೆಲ್‌ಗೆ ಮೀಸಲಾದ ಜಾಗದಲ್ಲೇ ಹಾಸ್ಟೆಲ್ ನಿರ್ಮಾಣವಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದರು.

ನಗರಸಭೆ ಮಾಜಿ ಸದಸ್ಯ ವೆಂಕಟರವಣಪ್ಪ ಮಾತನಾಡಿ, ಬಡ ಒಕ್ಕಲಿಗ ವಿದ್ಯಾರ್ಥಿಗಳ ಹಿತಕ್ಕಾಗಿ ನೀಡಲಾಗಿದ್ದ ಜಾಗವನ್ನು ಹಾಸ್ಟೆಲ್ ಉದ್ದೇಶಕ್ಕೇ ಬಳಸಬೇಕು ಎಂದು ಒತ್ತಾಯಿಸಿದರು.

ದಿನ್ನಮಿಂದಹಳ್ಳಿ ಬೈರೆಡ್ಡಿ, ಕೆ.ಅವುಲಪ್ಪ, ಕೆ.ಎನ್.ಕೃಷ್ಣಾರೆಡ್ಡಿ, ಕುರುಬೂರು ನಟರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.