Shidlaghatta News: ಜನರ ಪ್ರೀತಿ, ವಿಶ್ವಾಸವೇ ಪುಟ್ಟು ಅಂಜಿನಪ್ಪ ಅವರ ಬಲ
ಗೌಡನಹಳ್ಳಿ ಮಂಜುನಾಥ್ ಮಾತನಾಡಿ, ಪುಟ್ಟು ಅಂಜಿನಪ್ಪ ಅವರ ನಾಯಕತ್ವದ ಗುಣ ಹಾಗೂ ಜನರೊಂದಿಗೆ ಬೆರೆಯುವ ರೀತಿ ಉತ್ತಮ ಜನಪ್ರತಿನಿಧಿಯಾಗುವ ಭರವಸೆ ಮೂಡಿಸಿದೆ. 2028ರ ವಿಧಾನ ಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದೊಂದಿಗೆ ಶಾಸಕರಾಗಿ ಆಯ್ಕೆಯಾಗುವ ವಿಶ್ವಾಸವಿದೆ
-
ಶಿಡ್ಲಘಟ್ಟ: ಪುಟ್ಟು ಅಂಜಿನಪ್ಪ ಅವರು ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲಪಡಿಸು ವುದರ ಜೊತೆಗೆ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಮುಖಂಡರಾಗಿದ್ದಾರೆ ಎಂದು ಎಸ್. ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಪೂಸಗಾನದೊಡ್ಡಿ ಎಂ. ಮಂಜುನಾಥ್ ಹೇಳಿದರು.
ನಗರದ ಅಂಧಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಪುಟ್ಟು ಅಂಜಿನಪ್ಪ ಅವರ 50ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಚಟುವಟಿಕೆಗಳಿಗೆ ಸೀಮಿತ ವಾಗದೆ ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಅವರ ವಿಶೇಷತೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯ ಸಂದರ್ಭದಲ್ಲಿ ನೆರವಿಗೆ ನಿಲ್ಲುವ ಗುಣ ಹೊಂದಿ ದ್ದಾರೆ ಎಂದರು.
ಇದನ್ನೂ ಓದಿ: Shidlaghatta News: ಎಫ್‌ಎಸ್‌ಟಿಪಿ ಘಟಕದ ಬಾಕಿ ಕಾಮಗಾರಿ ಮೂರು ವಾರದಲ್ಲಿ ಪೂರ್ಣಗೊಳಿಸಲು ಸೂಚನೆ
ಕ್ಷೇತ್ರದ ಜನರು, ಯುವಕರು ಹಾಗೂ ಕಾರ್ಯಕರ್ತರೊಂದಿಗೆ ಆತ್ಮೀಯವಾಗಿ ಬೆರೆಯುವ ಮೂಲಕ ವಿಶ್ವಾಸ ಗಳಿಸಿದ್ದಾರೆ. ಅವರ ಸರಳ ನಡೆ ಹಾಗೂ ಜನಸಂಪರ್ಕವೇ ಬಲವಾಗಿದೆ ಎಂದು ಹೇಳಿದರು.
ಗೌಡನಹಳ್ಳಿ ಮಂಜುನಾಥ್ ಮಾತನಾಡಿ, ಪುಟ್ಟು ಅಂಜಿನಪ್ಪ ಅವರ ನಾಯಕತ್ವದ ಗುಣ ಹಾಗೂ ಜನರೊಂದಿಗೆ ಬೆರೆಯುವ ರೀತಿ ಉತ್ತಮ ಜನಪ್ರತಿನಿಧಿಯಾಗುವ ಭರವಸೆ ಮೂಡಿಸಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದೊಂದಿಗೆ ಶಾಸಕರಾಗಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಕುಮಾರ್, ಶೇಖರ್ ರೆಡ್ಡಿ, ದಾಮೋದರ್, ರಾಮಾಂಜನೇಯ, ವರದರಾಜು, ಗೌಸ್ ಖಾನ್, ಸಂತೋಷ್, ರಮೇಶ್, ಮುನಿರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.