ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Congress into power in Chimul: ಕುಬೇರರ ಚುನಾವಣೆಗೆ ಸವಾಲು ಹಾಕುವಂತೆ ನಡೆದ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

ಚಿಮುಲ್ ಚುನಾವಣೆಯಲ್ಲಿ ಉಡುಗೊರೆಗಳದ್ದೆ ದೊಡ್ಡ ಸದ್ದು ಮಾಡಿದ್ದು ಸುಳ್ಳಲ್ಲ. ಚುನಾವಣೆ ಪ್ರಕಟ ವಾದ ಬೆನ್ನಲ್ಲೇ ಡೆಲಿಗೇಟ್ಸ್ಗಳ ಮನೆ ಬಾಗಿಲಿಗೆ ಅಭ್ಯರ್ಥಿಗಳು ಎಡತಾಕುತ್ತಿದ್ದ ದೃಶ್ಯಗಳು ಸಾಮಾನ್ಯ ವಾಗಿದ್ದವು. ಸಾಲದ್ದಕ್ಕೆ ದೇವರ ಪ್ರಸಾದ, ಆಣೆ ಪ್ರಮಾಣ, ಹಣ ಉಡುಗೊರೆಗಳ ಭರಾಟೆ ಜೋರಾಗಿತ್ತು.

ಚಿಮುಲ್‌: ಪ್ರಥಮ ಚುನಾವಣೆಯಲ್ಲಿಯೇ ಗೆದ್ದು ಬೀಗಿದ ʼಕೈʼ ಅಭ್ಯರ್ಥಿಗಳು

-

Ashok Nayak
Ashok Nayak Feb 1, 2026 10:19 PM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ 13 ಚುನಾಯಿತ ನಿರ್ದೇಶಕ ಸ್ಥಾನಗಳಿಗೆ ನಡೆದ ಪ್ರಥಮ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬೀಗಿದ್ದರೆ, 5 ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುವ ಮೂಲಕ ಮಿಶ್ರ ಫಲಿತಾಂಶದ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಯಿತು.

ನಗರದ ಹೃದಯ ಭಾಗದಲ್ಲಿರುವ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಚಿಮುಲ್ ಚುನಾವಣೆಯನ್ನು ಜಿಲ್ಲಾಡಳಿತ ಬಹಳ ಶಿಸ್ತುಬದ್ದವಾಗಿ ಮತ್ತು ಪಾರದರ್ಶಕವಾಗಿ ನಡೆಸುವಲ್ಲಿ ಸಂಪೂರ್ಣವಾಗಿ ಯಶಸ್ಸನ್ನು ಕಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಉಡುಗೊರೆಗಳ ಭರಾಟೆ: ಚಿಮುಲ್ ಚುನಾವಣೆಯಲ್ಲಿ ಉಡುಗೊರೆಗಳದ್ದೆ ದೊಡ್ಡ ಸದ್ದು ಮಾಡಿದ್ದು ಸುಳ್ಳಲ್ಲ.ಚುನಾವಣೆ ಪ್ರಕಟವಾದ ಬೆನ್ನಲ್ಲೇ ಡೆಲಿಗೇಟ್ಸ್ಗಳ ಮನೆ ಬಾಗಿಲಿಗೆ ಅಭ್ಯರ್ಥಿ ಗಳು ಎಡತಾಕುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಸಾಲದ್ದಕ್ಕೆ ದೇವರ ಪ್ರಸಾದ, ಆಣೆ ಪ್ರಮಾಣ, ಹಣ ಉಡುಗೊರೆಗಳ ಭರಾಟೆ ಜೋರಾಗಿತ್ತು. ಒಂದು ಅಂದಾಜಿನ ಪ್ರಕಾರ ಕೆಲ ಅಭ್ಯರ್ಥಿ ಗಳು ಕೆ.ಜಿಗಟ್ಟಲೆ ಬೆಳ್ಳಿ, ಕೈತುಂಬಾ ಲಕ್ಷಗಟ್ಟಲೆ ಹಣ ಕೊಟ್ಟಿದ್ದಾರೆ ಎಂಬ ಮಾತಿದೆ. ಏನೇನೂ ಲಾಭ ವಿಲ್ಲದ ಸ್ಥಾನಕ್ಕೆ ಇಷ್ಟೊಂದು ಹಣ ಉಡುಗೊರೆ ಕೊಡುವ ಅಗತ್ಯವೇನಿತ್ತು ಎಂಬ ಮಾತು ಜೋರಾ ಗಿಯೇ ಕೇಳಿ ಬಂದಿದೆ.

ಇದನ್ನೂ ಓದಿ: Chimul Election: ಚಿಮುಲ್ ಚುನಾವಣೆ: ಗುಡಿಬಂಡೆ ಕ್ಷೇತ್ರದಲ್ಲಿ ಹಣಾಹಣಿ, ಮತದಾರರಿಗೆ ಆಮಿಷದ ಸುರಿಮಳೆ

ಲಾಠಿ ಚಾರ್ಚ್ ಘಟನೆ?
ಗೌರಿಬಿದನೂರು ಕ್ಷೇತ್ರದ ಡೆಲಿಗೇಟ್ಸ್ ಮತಚಲಾಯಿಸಲು ಬಸ್ಸಿನಲ್ಲಿ ಬಂದ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆಯಾಗಿತ್ತು. ತಮ್ಮ ಜನಪ್ರತಿನಿಧಿಯನ್ನು ಕಂಡಕೂಡಲೇ ಜೈಕಾರ ಹಾಕಲು ಪ್ರಾರಂಭಿಸಿದರು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೂ ಕೂಡ ಸಫಲ ವಾಗದೆ ಅಂತಿಮವಾಗಿ ಲಾಠಿ ಚಾರ್ಜ್ ಮಾಡಿ ಗುಂಪನ್ನು ಚೆದುರಿಸುವ ಕೆಲಸ ಮಾಡಿದ್ದು ಈ ಚುನಾವಣೆಯ ಮಟ್ಟಿಗೆ ಕಪ್ಪುಚುಕ್ಕೆಯಾಗಿ ಉಳಿಯಿತು.

ಸಂಚಾರ ಕಿರಿಕಿರಿ: ಚಿಮುಲ್ ಚುನಾವಣೆ ನಡೆಯುತ್ತಿದ್ದ ಜೂನಿಯರ್ ಕಾಲೇಜು ಆವರಣದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸ್ಪರ್ಧಾಳುಗಳು ಟೆಂಟೆಎಗಳನ್ನು ಹಾಕಿದ್ದ ಪರಿಣಾಮ ರಸ್ತೆ ಕಿರಿದಾಯಿತು. ಇದರಲ್ಲೇ ವಾಹನ ಸಂಚಾರಕ್ಕೂ ಅವಕಾಶ ಮಾಡಿಕೊಟ್ಟಿದ್ದರಿಂದ ಬೆಳಗಿನಿಂದ ಸಂಜೆಯ ತನಕ ಈ ಮಾರ್ಗದುದ್ದಕ್ಕೂ  ಸಂಚಾರ ಕಿರಿಕಿರಿ ಎದುರಾಗಿದ್ದು ಜನತೆ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿಕೊಂಡೇ ಸಂಚರಿಸುತ್ತಿದ್ದು ಕಂಡು ಬಂತು.

1cbpm2o ok

ವಿಜಯೋತ್ಸವ: ಸಂಜೆ 5 ಗಂಟೆ ವೇಳೆಗೆ ಒಂದೊಂದೇ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಗೆದ್ದವರು ನಡೆಸಿದ ವಿಜಯೋತ್ಸವದ ಪರಿಣಾಮ ಬಿ.ಬಿ.ರಸ್ತೆಯಲ್ಲಿ ಸಂಜೆ 6.30 ರ ತನಕ ವಾಹನ ಸಂಚಾರಕ್ಕೆ ಭಾರೀ ವ್ಯತ್ಯಯ ಉಂಟಾಗಿತ್ತು. ಸಂಪೂರ್ಣ ಫಲಿತಾಂಶ ಪ್ರಕಟವಾದ ಬಳಿಕವೇ ಬಿಬಿ ರಸ್ತೆ ಜನಸಂಚಾರಕ್ಕೆ ಮುಕ್ತವಾಯಿತು. ವಿಜಯೋತ್ಸವದ ವೇಳೆ ತಮ್ಮ ನಾಯಕರನ್ನು ಅನಾಮತ್ತು ಹೆಗಲ ಮೇಲೆ ಹೊತ್ತುಕೊಂಡೇ ಜನಕಾರಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಮಾರಕ ಎಂಬ ಮಾತಿದೆ!!!
ಸಹಕಾರಿ ಕ್ಷೇತ್ರದಲ್ಲಿ ಕೂಡ ಹಣ ಉಡುಗೊರೆ ಪ್ರವಾಸ, ಆನೆ ಪ್ರಮಾಣಗಳ ಮಹಾ ಹೊಳೆ ನಡೆ ದಿದ್ದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು ಎನ್ನುವುದು ಹಿರಿಯ ಸಹಕಾರಿಗಳ ಮಾತಾಗಿದೆ. ಹೈನೋದ್ಯಮಕ್ಕೆ ಚೈತನ್ಯ ತುಂಬಬೇಕಾದ ಸ್ಥಳದಲ್ಲಿ ಹಾಲು ಉತ್ಪಾದಕರ ಹಿತವನ್ನು ಕಾಯುವ ನಿರ್ದೇಶಕರು ಲಕ್ಷ ಲಕ್ಷ ಹಣ, ಬೆಳ್ಳಿಯ ಉಡುಗೊರೆಗಳನ್ನು ಡೆಲಿಗೇಟ್ಸ್ಗಳಿಗೆ ನೀಡಿ ಅವರಿಂದ ಮತ ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿಯಾಗಿದೆ ಎಂಬುದನ್ನು ಹೆಸರು ಹೇಳದ ಚುನಾಯಿತ ನಿರ್ದೇಶಕರು ಹೇಳಿದ್ದು ಇಂದಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿತ್ತು.

chimul election

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ 13 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಂದಿ ಹೋಬಳಿಯಲ್ಲಿ ಎನ್.ಸಿ.ವೆಂಕಟೇಶ್ 24 ಮತಗಳ ಅಂತರದ- ಗೆಲುವು ಕಂಡಿದ್ದಾರೆ. 84 ಮತಗಳಲ್ಲಿ ವೆಂಕಟೇಶ್ ಎನ್.ಸಿ -54 ಮತ, ಎಲುವಹಳ್ಳಿ ರಮೇಶ್-30 ಪಡೆದಿ ದ್ದಾರೆ. ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ.ನಾಗರಾಜ್-62 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಒಟ್ಟು 84 ಮತಗಳ ಪೈಕಿ ಕೆ.ವಿ.ನಾಗರಾಜ್-72 ಮತಗಳು, ಕೆ.ಆರ್.ರಾಜಣ್ಣ-12 ಮತಗಳನ್ನು ಪಡೆದಿದ್ದಾರೆ. ಮಂಚೇನಹಳ್ಳಿ ಕ್ಷೇತ್ರದಲ್ಲಿ ಜೆ.ಕಾಂತರಾಜ್ 41 ಮತ ಪಡೆದು 12 ಮತಗಳ ಅಂತರ ದಿಂದ ಎದುರಾಳಿ ಹೆಚ್.ವಿ.ಶ್ರೀನಾಥ್ ವಿರುದ್ಧ ಗೆಲುವು ಕಂಡಿದ್ದಾರೆ.

ಗೌರಿಬಿದನೂರು ಕ್ಷೇತ್ರದಲ್ಲಿ ಜಿ.ಎಲ್.ದಿನೇಶ್ 38 ಮತಗಳನ್ನು ಪಡೆದು 1 ಮತದ ಅಂತರದಿಂದ ವೆಂಕಟರೆಡ್ಡಿ ವಿರುದ್ದ ಗೆಲುವು ಕಂಡಿದ್ದಾರೆ. ಗುಡಿಬಂಡೆ ಕ್ಷೇತ್ರದಿಂದ ಆದಿನಾರಾಯಣರೆಡ್ಡಿ 27 ಮತಗಳನ್ನು ಪಡೆದು ಸಮೀಪ ಸ್ಪರ್ಧಿ ಬೈರಾರೆಡ್ಡಿ ವಿರುದ್ದ 9 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಕೈವಾರ ಕ್ಷೇತ್ರದಲ್ಲಿ ಕೆ.ಎನ್.ಆವುಲಪ್ಪ 37 ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಎಸ್.ಎನ್.ಚಿನ್ನಪ್ಪ ವಿರುದ್ಧ 4 ಮತಗಳ ಅಂತರಿಂದ ವಿಜಯಶಾಲಿಯಾಗಿದ್ದಾರೆ.

ಚಿಂತಾಮಣಿ ಕಸಬಾದಲ್ಲಿ ವೈ.ಬಿ.ಅಶ್ವತ್ಥ್‌ ನಾರಾಯಣ-70 ಮತಗಳನ್ನು ಪಡೆದು ಅವರು ತಮ್ಮ ಪ್ರತಿಸ್ಪರ್ಧಿ ಶ್ರೀನಿವಾಸಪ್ಪ ವಿರುದ್ದ 65 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಚೇಳೂರು ಕ್ಷೇತ್ರದಲ್ಲಿ ಕೆ.ಎನ್.ಕೃಷ್ಣಾರೆಡ್ಡಿ- 46 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಶೇಖರ್ ವಿರುದ್ಧ 20 ಮತಗಳ ಅಂತರದಲ್ಲಿ ಗೆಲುವು, ಬಾಗೇಪಲ್ಲಿ ಕ್ಷೇತ್ರದಲ್ಲಿ ಮಂಜುನಾಥರೆಡ್ಡಿ-44 ಮತಗಳನ್ನು ಪಡೆದು ಪ್ರತಿಸ್ಪರ್ಧಿ ವೆಂಕಟರಮಣರೆಡ್ಡಿ ವಿರುದ್ದ 25 ಮತಗಳ ಅಂತರದಿಂದ ಗೆಲುವು, ಶಿಡ್ಲಘಟ್ಟ ಕ್ಷೇತ್ರದಲ್ಲಿ ಮುನಿಯಪ್ಪ-56 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಚೊಕ್ಕೇಗೌಡ ವಿರುದ್ಧ 33 ಮತಗಳ ಅಂತರದ ಗೆಲುವು, ಜಂಗಮಕೋಟೆ ಕ್ಷೇತ್ರದಲ್ಲಿ ಎಂ.ರಾಮಯ್ಯ-49 ಮಗಳನ್ನು ಪಡೆದು ಪ್ರತಿಸ್ಪರ್ಧಿ ಆರ್.ಶ್ರೀನಿವಾಸ್ ವಿರುದ್ಧ 18 ಮತಗಳ ಅಂತರರಿಂದ ಗೆದ್ದಿದ್ದಾರೆ.

ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿ ಸುಧಾ-26 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಸುನಂದಮ್ಮ ವಿರುದ್ಧ 3 ಮತಗಳ ಅಂತರದಿಂದ ಗೆಲುವು. ಚಿಂತಾಮಣಿ ಮಹಿಳಾ ಕ್ಷೇತ್ರದಲ್ಲಿ ಎಂ.ಸುಮಾ-36 ಮತಗಳನ್ನು ಪಡೆದು ಅವರು ತಮ್ಮ ಪ್ರತಿಸ್ಪರ್ಧಿ ರೂಪ ವಿರುದ್ಧ 12 ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ.