ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು, ಸ್ವಸಹಾಯ ಸಂಘಗಳ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ಉದ್ದೇಶ: ಡಾ.ವೈ. ನವೀನ್ ಭಟ್
ಸಂತೆಯ ವಿಶೇಷ ಆಕರ್ಷಣೆಯಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ 'ದೀಪ ಸಂಜೀವಿನಿ ಕಿಟ್' ಅನ್ನು ಪರಿಚಯಿಸಲಾಗಿದೆ. ಮರುಬಳಕೆ ಮಾಡಬಹುದಾದ ಸಂಜೀವಿನಿ ಲಾಂಛನ ಹೊಂದಿರುವ ಚೀಲದಲ್ಲಿ ಮಣ್ಣಿನ ಹಣತೆಗಳು, ದೀಪದ ಎಣ್ಣೆ, ಸಿಹಿ, ಖಾರ ಸೇರಿದಂತೆ ದೀಪಾವಳಿ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಅನ್ನು 499ಕ್ಕೆ ಮಾರಾಟ ಮಾಡಲಾಗುತ್ತಿದೆ.
-
ಚಿಕ್ಕಬಳ್ಳಾಪುರ: ಸ್ಥಳೀಯ ಉತ್ಪಾದಕರನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಬ್ಬದ ಸಾಮಗ್ರಿಗಳನ್ನು ಒದಗಿಸುವ ಉದ್ದೇಶದಿಂದ ದೀಪ ಸಂಜೀವಿನಿ ಮಾಸಿಕ ಸಂತೆ(Deepa Sanjeevini Monthly Market) ಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವೈ. ನವೀನ್ ಭಟ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ–ಡೇ-ಎನ್‌ಆರ್‌ಎಲ್‌ಎಂ ವತಿಯಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಆಯೋಜಿಸಿದ್ದ ದೀಪ ಸಂಜೀವಿನಿ ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂತೆಯ ವಿಶೇಷ ಆಕರ್ಷಣೆಯಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ 'ದೀಪ ಸಂಜೀವಿನಿ ಕಿಟ್' ಅನ್ನು ಪರಿಚಯಿಸಲಾಗಿದೆ. ಮರುಬಳಕೆ ಮಾಡಬಹುದಾದ ಸಂಜೀವಿನಿ ಲಾಂಛನ ಹೊಂದಿರುವ ಚೀಲದಲ್ಲಿ ಮಣ್ಣಿನ ಹಣತೆಗಳು, ದೀಪದ ಎಣ್ಣೆ, ಸಿಹಿ, ಖಾರ ಸೇರಿದಂತೆ ದೀಪಾವಳಿ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಅನ್ನು 499ಕ್ಕೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: Chikkaballapur News: ನ.12ರಂದು ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಗ್ರಾಮೀಣ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು, ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸುವುದು ಹಾಗೂ ಸಾರ್ವಜನಿಕರಿಗೆ ಕೈಗೆಟು ಕುವ ದರದಲ್ಲಿ ಗುಣಮಟ್ಟದ ಹಬ್ಬದ ಸಾಮಗ್ರಿಗಳನ್ನು ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ಸ್ಥಳೀಯ ಮಣ್ಣಿನ ಹಣತೆಗಳು ಮತ್ತು ನಂದಿನಿ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡುವ ಮೂಲಕ ಸ್ಥಳೀಯ ಉತ್ಪಾದಕರಿಗೂ ಉತ್ತೇಜನ ನೀಡಲಾಗುತ್ತಿದೆ ಎಂದರು.
'2026ರ ದೀಪಾವಳಿ ಹಬ್ಬದ ಶುಭಾಶಯಗಳು' ಎಂಬ ಸಂದೇಶದೊಂದಿಗೆ ಸಿದ್ಧಪಡಿಸಿರುವ ಕಿಟ್‌ನಲ್ಲಿ ಮುದ್ರಿತ ಚೀಲ, 12 ಸಣ್ಣ ಮಣ್ಣಿನ ಹಣತೆಗಳು, 500 ಮಿ.ಲೀ. ದೀಪದ ಎಣ್ಣೆ, ದೀಪದ ಬತ್ತಿ ಮತ್ತು ಬೆಂಕಿಪೊಟ್ಟಣ, 100 ಗ್ರಾಂ ನಂದಿನಿ ಪೇಡಾ, 200 ಗ್ರಾಂ ಮಿಕ್ಸ್ಚರ್ ಹಾಗೂ ವಿವಿಧ ಪಟಾಕಿಗಳನ್ನು ಸೇರಿಸಲಾಗಿದೆ.
ಕಿಟ್ ಖರೀದಿಸಲು ಆಸಕ್ತ ಸಾರ್ವಜನಿಕರು ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಯ ಎನ್‌ಆರ್‌ಎಲ್‌ಎಂ ವಿಭಾಗವನ್ನು ಸಂಪರ್ಕಿಸಬಹುದು ಅಥವಾ ದೀಪ ಸಂಜೀವಿನಿ ಮಾಸಿಕ ಸಂತೆಗೆ ಭೇಟಿ ನೀಡಿ ಖರೀದಿಸಬಹುದು ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಬ್ಬಂದಿ, ಗ್ರಾಮೀಣ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.