Bagepally News: ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತಾಗಿದೆ ಮಣ್ಣನ್ನು ನಂಬಿಕೊಂಡವರ ಸ್ಥಿತಿ
ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿನ ಪ್ರಮಾಣ ದಲ್ಲಿ ಉಚಿತ ಗಣೇಶ ವಿಗ್ರಹಗಳನ್ನು ವಿತರಿಸಲಾಗುತ್ತಿದ್ದು, ಇದರಿಂದ ಸ್ಥಳೀಯವಾಗಿ ತಯಾರಿಸಿರುವ ವಿಗ್ರಹಗಳಿಗೆ ಬೇಡಿಕೆ ಕುಸಿದಿದೆ. ವರ್ಷವಿಡೀ ಶ್ರಮಪಟ್ಟು ತಯಾರಿಸಿರುವ ನೂರಾರು ವಿಗ್ರಹಗಳು ಖರೀದಿಯಾಗದೆ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಪರಿಸ್ಥಿತಿ ನಿರ್ಮಾಣ ವಾಗಿದೆ.
-
ಬಾಗೇಪಲ್ಲಿ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ರಾಜಕೀಯ ಆಕಾಂಕ್ಷಿಗಳು ಹಾಗೂ ವಿವಿಧ ಮುಖಂಡರು ಉಚಿತವಾಗಿ ಗಣೇಶ ವಿಗ್ರಹಗಳನ್ನು ಹಂಚಿಕೆ ಮಾಡುತ್ತಿರುವ ಪರಿಣಾಮ, ಮಣ್ಣನ್ನು ನಂಬಿಕೊಂಡು ವಿಗ್ರಹ ತಯಾರಿಸುವ ಸ್ಥಳೀಯ ಕುಂಬಾರ ಸಮುದಾಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಚಿತ ಗಣೇಶ ವಿಗ್ರಹಗಳನ್ನು ವಿತರಿಸಲಾಗುತ್ತಿದ್ದು, ಇದರಿಂದ ಸ್ಥಳೀಯವಾಗಿ ತಯಾರಿಸಿರುವ ವಿಗ್ರಹಗಳಿಗೆ ಬೇಡಿಕೆ ಕುಸಿದಿದೆ. ವರ್ಷವಿಡೀ ಶ್ರಮಪಟ್ಟು ತಯಾರಿಸಿರುವ ನೂರಾ ರು ವಿಗ್ರಹಗಳು ಖರೀದಿಯಾಗದೆ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಪರಿಸ್ಥಿತಿ ನಿರ್ಮಾಣ ವಾಗಿದೆ.
ಇದನ್ನೂ ಓದಿ: Bagepally News: ಗ್ರಾಮೀಣ ಭಾಗದಲ್ಲಿ ಹೊಸ ಶ್ರೀಮಂತರ ವಿರುದ್ಧ ಹೋರಾಟ ಅಗತ್ಯ: ಡಾ. ಅನಿಲ್ ಆವುಲಪ್ಪ
ಈ ಕುರಿತು ವಿಗ್ರಹ ತಯಾರಿಕೆ ವೃತ್ತಿಯಲ್ಲಿರುವ ಸ್ಥಳೀಯ ನಂದೀಶ್ ಮಾತನಾಡಿ, “ನಾವು ವಂಶಪಾ ರಂಪರ್ಯವಾಗಿ ಗಣೇಶ ವಿಗ್ರಹ ತಯಾರಿಸುವ ಕಸುಬನ್ನು ಮಾಡಿಕೊಂಡು ಜೀವನ ನಡೆಸು ತ್ತಿದ್ದೇವೆ. ಆದರೆ ಬೆಂಗಳೂರಿನಿಂದ ಬರುವ ಕೆಲ ರಾಜಕೀಯ ನಾಯಕರು ತಮ್ಮ ಹೆಸರಿಗಾಗಿ ಕಡಿಮೆ ದರದಲ್ಲಿ, ಕಡಿಮೆ ಗುಣಮಟ್ಟದ ವಿಗ್ರಹಗಳನ್ನು ತಂದು ಇಲ್ಲಿ ಉಚಿತವಾಗಿ ಹಂಚಿಕೆ ಮಾಡು ತ್ತಿದ್ದಾರೆ. ಇದರಿಂದ ನಮ್ಮಂತಹ ಸ್ಥಳೀಯ ವಿಗ್ರಹ ತಯಾರಕರಿಗೆ ತೀವ್ರ ನಷ್ಟವಾಗಿದ್ದು, ಜೀವನೋ ಪಾಯವೇ ಕಸಿದುಕೊಂಡಂತಾಗಿದೆ” ಎಂದು ಅಳಲು ತೋಡಿಕೊಂಡರು.
ಸ್ಥಳೀಯ ಕುಂಬಾರರ ಬದುಕು ಉಳಿಸುವ ನಿಟ್ಟಿನಲ್ಲಿ ಉಚಿತ ವಿಗ್ರಹಗಳ ಹಂಚಿಕೆಗೆ ಬದಲಾಗಿ ಸ್ಥಳೀಯ ಕಲಾವಿದರಿಂದಲೇ ವಿಗ್ರಹ ಖರೀದಿಸುವಂತೆ ಸಾರ್ವಜನಿಕರು ಹಾಗೂ ರಾಜಕೀಯ ಮುಖಂಡರು ಮುಂದಾಗಬೇಕೆಂಬ ಒತ್ತಾಯ ಕೇಳಿಬಂದಿದೆ.