PBKS vs CSK: ಸೋಲಿಗೆ ಬೌಲರ್‌ಗಳನ್ನು ದೂಷಿಸಿದ ಚೆನ್ನೈ ನಾಯಕ ಗಾಯಕ್ವಾಡ್
IPL 2026: ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 207 ರನ್ ಬಾರಿಸಿತು. ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡ, ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳ ಆಟದ ನೆರವಿನಿಂದ 18.4 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 210 ರನ್‌ಗಳಿಸಿ ಗೆದ್ದು ಬೀಗಿತು.
Ruturaj Gaikwad -
ಚೆನ್ನೈ, ಎ.4: ಪಂಜಾಬ್ ಕಿಂಗ್ಸ್(Ruturaj Gaikwad) ವಿರುದ್ಧ 200 ಪ್ಲಸ್ ಮೊತ್ತ ಬಾರಿಸಿಯೂ ಸೋಲು ಕಂಡ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್(Ruturaj Gaikwad) ಈ ಸೋಲಿಗೆ ಬೌಲರ್‌ಗಳ ಕಳಪೆ ಪ್ರದರ್ಶನವೇ ಕಾರಣ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಗಾಯಕ್ವಾಡ್, "ನಿಜ ಹೇಳಬೇಕೆಂದರೆ, ಇದು ನಿಜವಾಗಿಯೂ ಉತ್ತಮ ಸ್ಕೋರ್ ಎಂದು ನಾನು ಭಾವಿಸಿದೆ. ವಿಕೆಟ್, ವೇಗದ ಬೌಲರ್‌ಗಳಿಗೆ ಉತ್ತಮವಾಗಿತ್ತು. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತಿರಲಿಲ್ಲ. ನಿಧಾನಗತಿಯ ಚೆಂಡು ಕೂಡ ಹಿಡಿತ ಹೊಂದಿತ್ತು. ಮೈದಾನದಲ್ಲಿ, ವಿಶೇಷವಾಗಿ ಬೌಂಡರಿ ಬಾರಿಸುವುದು ಅಷ್ಟು ಸುಲಭವಲ್ಲ. ಇದು ನಿಜವಾಗಿಯೂ ಉತ್ತಮ ಸ್ಕೋರ್ ಎಂದು ನಾನು ಭಾವಿಸಿದೆ. ಆದರೆ ನಮ್ಮ ಬೌಲರ್‌ಗಳು ವಿಫಲರಾದರು" ಎಂದು ಸೋಲಿಗೆ ಬೌಲರ್‌ಗಳನ್ನು ದೂಷಿಸಿದರು.
"ನಾವು ಸರಿಯಾದ ಸಮಯದಲ್ಲಿ ಪ್ರದರ್ಶನ ನೀಡಲಿಲ್ಲ ಎಂದು ನಾನು ಹೇಳುತ್ತೇನೆ. ನಾವು ಸತತ ಬೌಂಡರಿಗಳನ್ನು ಬಿಟ್ಟುಕೊಟ್ಟೆವು. ಆದ್ದರಿಂದ ಒತ್ತಡ ನಿಜವಾಗಿಯೂ ಹೆಚ್ಚಾಗಲಿಲ್ಲ ಎಂದು ನಾನು ಭಾವಿಸುತ್ತೇನೆ. ಒಂದು ಓವರ್‌ಗೆ 11 ರನ್‌ಗಳಂತೆ ನಮ್ಮ ಬೌಲರ್‌ಗಳು ಬಿಟ್ಟುಕೊಟ್ಟರು" ಎಂದರು. ಚೆನ್ನೈ ತಂಡವು ಏಪ್ರಿಲ್ 11 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರಿನಲ್ಲಿ ಆಡಲಿದೆ.
IPL 2026: 2 ಬಾರಿ ಬ್ಯಾಟ್ ಟೆಸ್ಟ್‌ನಲ್ಲಿ ವಿಫಲರಾದ ಆಯುಷ್ ಮ್ಹಾತ್ರೆ! ಮುಂದೇನಾಯ್ತು ಗೊತ್ತೆ?
ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 207 ರನ್ ಬಾರಿಸಿತು. ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡ, ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳ ಆಟದ ನೆರವಿನಿಂದ 18.4 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 210 ರನ್‌ಗಳಿಸಿ ಗೆದ್ದು ಬೀಗಿತು.
ನಾಯಕ ಶ್ರೇಯಸ್ ಅಯ್ಯರ್ 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 50 ರನ್ ಗಳಿಸಿದರು. ಆ ಮೂಲಕ ಪಂಜಾಬ್ ಕಿಂಗ್ಸ್‌ನ ಚೇಸಿಂಗ್‌ನಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಚೆನ್ನೈ ಪರ ಆಯುಷ್ ಮ್ಹಾತ್ರೆ (73 ರನ್) , ಶಿವಂ ದುಬೆ (43 ರನ್) ಹಾಗೂ ಸರ್ಫರಾಝ್ ಖಾನ್ (32) ರನ್ ಗಳಿಸಿದರು.