ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MNarega Bajau Movement: ಚಿಕ್ಕಬಳ್ಳಾಪುರ ನರೇಗಾ ಬಚಾವ್ ಆಂದೋಲನಕ್ಕೆ ವೇದಿಕೆ ಸಜ್ಜು: ಎಲ್ಲೆಲ್ಲೂ ಕಾರ್ಯಕ್ರಮದ್ದೇ ಗುಲ್ಲು

ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿಜಿರಾಮ್‌ಜಿ(VBG Ramji) ಯೋಜನೆ ವಿರೋಧಿಸಿ ನಡೆಯಲಿರುವ ನರೇಗಾ ಬಚಾವ್ ಆಂದೋಲನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಮುಗಿದಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಮತ್ತು ತಂಡದ ಉಸ್ತುವಾರಿಯಲ್ಲಿ, ಜಿಲ್ಲಾ ಉಸ್ತು ವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಇದರ ನೇತೃತ್ವ ವಹಿಸಿದ್ದು ಎಲ್ಲೂ ಅಚಾತುರ್ಯ ವಾಗದಂತೆ ನೋಡಿಕೊಳ್ಳುತ್ತಿದ್ದರು

ಚಿಕ್ಕಬಳ್ಳಾಪುರ ನರೇಗಾ ಬಚಾವ್ ಆಂದೋಲನಕ್ಕೆ ವೇದಿಕೆ ಸಜ್ಜು

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಸಮೀಪ ನಡೆಯುತ್ತಿರುವ ನರೇಗಾ ಬಚಾವ್ ಕಾರ್ಯಕ್ರಮದ ತಯಾರಿಯ ಪೋಟೋಗಳು. -

Ashok Nayak
Ashok Nayak Feb 22, 2026 11:21 PM

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ 1 ಲಕ್ಷ ಮಂದಿಗೆ ಕೂರುವ ಆಸನ, ಕುಡಿವ ನೀರು ಸೌಲಭ್ಯ ಸಿದ್ಧ

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಗಲಗುರ್ಕಿ ಸಮೀಪದ ಪ್ರಧಾಣ ವೇದಿಕೆಯಲ್ಲಿ ಸೋಮವಾರ ನಡೆಯಲಿರುವ ಅಖಿಲ ಭಾರತ ಮಟ್ಟದ ನರೇಗಾ ಬಜಾವ್ ಆಂದೋಲನ(MNarega Bajau Movement)ಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಮುಗಿದಿದ್ದು ವಿಧಾನಸೌಧವೇ ಧರೆಗಿಳಿದು ಬಂದಂತೆ ಭಾಸವಾಗುತ್ತಿದೆ.

ತಾಲೂಕಿನ ಅಗಲಗುರ್ಕಿ ಗ್ರಾಮದ ಹೊರವಲಯ ರಾಷ್ಟ್ರೀಯ 44ರ ಸಮೀಪ ನಿರ್ಮಾಣ ಗೊಂಡಿರುವ ಬೃಹತ್ ವೇದಿಕೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(National President Mallikarjun Kharge, Chief Minister Siddaramaiah, Deputy Chief Minister D.K. Shivakumar) ಸಹಿತ ಸರಕಾರದ ಸಚಿವರ ದಂಡೇ ಇಲ್ಲಿ ನೆರೆಯಲಿದೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿಜಿರಾಮ್‌ಜಿ(VBG Ramji) ಯೋಜನೆ ವಿರೋಧಿಸಿ ನಡೆಯಲಿರುವ ನರೇಗಾ ಬಚಾವ್ ಆಂದೋಲನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಮುಗಿದಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಮತ್ತು ತಂಡದ ಉಸ್ತುವಾರಿಯಲ್ಲಿ, ಜಿಲ್ಲಾ ಉಸ್ತು ವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಇದರ ನೇತೃತ್ವ ವಹಿಸಿದ್ದು ಎಲ್ಲೂ ಅಚಾತುರ್ಯವಾಗದಂತೆ ನೋಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: Chikkaballapur News: 10 ಸಾವಿರ ಮಂದಿಗೆ ಉಚಿತ ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಮಾಜ ಸೇವಕ ಸಿ.ಎಂ. ಬೈರೇಗೌಡ

ಮುಖ್ಯಮಂತ್ರಿಗಳ ಆಗಮನದ ಹಿನ್ನೆಯಲ್ಲಿ ಡಿಜಿಪಿ ಡಾ.ಎನ್.ಎ.ಸಲೀಂ ಭೇಟಿ ನೀಡಿದ್ದು ಇವರೊಟ್ಟಿಗೆ ಎಸ್ಪಿ ಕುಶಾಲ್ ಚೌಕ್ಸೆ,ಎಸ್ಪಿ ಜಗನ್ನಾಥ್ ರೈ ಮತ್ತಿತರರು ಇದ್ದು ಕಾರ್ಯಕ್ರಮ ದ ಸಿದ್ಧತೆ ರೂಪುರೇಷೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಹೌದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಪ್ರತಿಷ್ಠೆಯ ಕಾರ್ಯಕ್ರಮ ವಾಗಲಿದ್ದು ಒಂದು ಲಕ್ಷ ಮಂದಿ ಕೂರುವಷ್ಟು ಬೃಹತ್ ವೇದಿಕೆ ಸಿದ್ಧವಾಗಿದ್ದು ಪ್ರಧಾನ ವೇದಿಕೆಯನ್ನು ವಿಧಾನಸೌಧದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಇದಕ್ಕೆ ಹೊಂದಿಕೊಂಡಂತೆ ಮತ್ತೆರಡು ಸಮಾನಾಂತರವಾಗಿ ಬೃಹತ್ ಜರ್ಮನ್ ಟೆಂಟು ಗಳು ತಲೆಯೆತ್ತಿದ್ದು ಇಲ್ಲಿಯೂ ಕೂಡ ಸಾವಿರಾರು ಕುರ್ಚಿಗಳನ್ನು ಹಾಕಲಾಗಿದೆ. ಪ್ರಧಾನ ವೇದಿಕೆ ಪಕ್ಕವೇ ಮುಖ್ಯಮಂತ್ರಿಗಳ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.

ಈ ವೇದಿಕೆಯ ಎಡಕ್ಕೆ ಊಟದ ಕೌಂಟರ್‌ಗಳ್ನು ನಿರ್ಮಿಸಲಾಗಿದ್ದು ಬಲಕ್ಕೆ 200 ಮೀಟರ್ ದೂರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 10 ಎಕರೆಗೂ ಮೀರಿದ ವಿಶಾಲ ಮೈದಾನ ದಲ್ಲಿ ನಡೆಯಲಿರುವ ನರೇಗಾ ಬಚಾವ್ ಆಂದೋಲನದ ಸ್ಥಳದಲ್ಲಿ ಹೀಗೆ ಸಕಲ ಸಿದ್ಧತೆ ಗಳು ಪೂರ್ಣಗೊಂಡಿದ್ದು, ಜನರನ್ನು ಸೇರಿರುವುದೇ ಸವಾಲಾಗಲಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬಂದಿವೆ.

cbpm2l

ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡಂತೆ ನಡೆಯುತ್ತಿರುವ ಮನರೇಗಾ ಫಲಾನುಭವಿಗಳ ಬೃಹತ್ ಸಮಾವೇಶವಾದ ನರೇಗಾ ಬಚಾವ್ ಕಾರ್ಯಕ್ರಮ ಶಾಸಕ ಪ್ರದೀಪ್ ಈಶ್ವರ್, ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಪಾಲಿಗೆ ಪ್ರತಿಷ್ಟೆಯ ಕಾರ್ಯಕ್ರಮವಾಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನತೆಯನ್ನು ಸೇರಿಸಲು ಸಿದ್ಧತೆಗಳು ಜೋರಾಗಿ ಸಾಗಿವೆ.

ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಎಲ್ಲೂ ಕೂಡ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಡಿಜಿಪಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಚಿಕ್ಕಬಳ್ಳಾಪುರದ ಸಿಹಿಖ್ಯಾಧ್ಯ ವೆಂಕಟೇಶ್ವರ ಬೇಕರಿ ದೊಮ್ಮರೊಟ್ಟಿ, ಚಿಂತಾಮಣಿ ಕಡಲೆಬೀಜ ಹೋಳಿಗೆ ನೀಡಲಾಗುವುದು.ಕಾರ್ಯಕ್ರಮದ ಹಿರಿಮೆಯನ್ನು ಸಾರುವ ಬ್ಯಾನರ್ ಕಟೌಟ್‌ಗಳು ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ರಾರಾಜಿಸುತ್ತಿದ್ದು ನಾಯಕರ ಪೋಟೋಗಳು ನಾಗರೀಕರ ಗಮನ ಸೆಳೆಯುತ್ತಿವೆ.

ಹೀಗೆ ಚಿಕ್ಕಬಳ್ಳಾಪುರದ ನರೇಗಾ ಬಚಾವ್ ಕಾರ್ಯಕ್ರಮ ಹತ್ತು ಹಲವು ಕಾರಣಗಳಿಗಾಗಿ ವಿಶೇಷವಾಗಿದ್ದು ಈ ವೇದಿಕೆಯು ರಾಜ್ಯ ಸರಕಾರದ ಸಾಧನೆಯನ್ನು ಬಿಂಬಿಸುವ, ಕೇಂದ್ರ ಸರಕಾರದ ಯೋಜನೆಗಳನ್ನು ಟೀಕಿಸುವ, ಜನತೆಗೆ ಸತ್ಯದರ್ಶನ ಮಾಡಿಸುವ ಪ್ರತಿಷ್ಟೆಯ ಕಾರ್ಯಕ್ರಮವಾಗಲಿದೆ ಎನ್ನುವುದು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯಾಗಿದೆ.