ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA KH Puttaswamy Gowda: ಕಾರ್ಮಿಕ ಇಲಾಖೆಯಲ್ಲಿ ಅನೇಕ ಸೌಲಭ್ಯಗಳಿದ್ದು ಸರಿಯಾಗಿ ಬಳಸಿಕೊಳ್ಳಿ : ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ

ಅರ್ಹ ಫಲಾನುಭವಿಗಳು ಈ ಯೋಜನೆಗಳನ್ನು ಸದ್ಭಳಕೆಮಾಡಿಕೊಳ್ಳಬೇಕು, ಇದರ ಜೊತೆಗೆ ಕೆಲಸ ಮಾಡುವ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಕಾರ್ಮಿಕರ ಸುರಕ್ಷಿತೆಗೋಸ್ಕರ ಎಲ್ಲಾ ವಿಧದ ಕಾರ್ಮಿಕರಿಗೂ ಸಹ ಸುರಕ್ಷ ಪರಿಕರಗಳನ್ನು ನೀಡಲಾಗುತ್ತಿದೆ, ಎಲ್ಲರೂ ತಪ್ಪದೆ ಸುರಕ್ಷಿತೆ ದೃಷ್ಟಿಯಿಂದ ಸುರಕ್ಷಿತ ಪರಿಕರಗಳನ್ನು ಬಳಸಿಕೊಳ್ಳಬೇಕಾಗಿದೆ

ಕಾರ್ಮಿಕ ಇಲಾಖೆಯಲ್ಲಿ ಅನೇಕ ಸೌಲಭ್ಯಗಳಿದ್ದು ಸರಿಯಾಗಿ ಬಳಸಿಕೊಳ್ಳಿ

-

Ashok Nayak
Ashok Nayak Dec 7, 2025 4:01 PM

ಗೌರಿಬಿದನೂರು: ನಗರದ ಸಮಾನತಾ ಸೌಧದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಸುರಕ್ಷಿತಾ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಸಕ ಕೆ ಎಚ್ ಪುಟ್ಟಸ್ವಾಮಿಗೌಡರು ಕಾರ್ಮಿಕರಿಗೆ ಸುರಕ್ಷಿತಾ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕರ ಕಲ್ಯಾಣ ಕ್ಕಾಗಿ ಅನೇಕ ಸೌಲಭ್ಯಗಳನ್ನು ಯೋಜನೆಗಳನ್ನು ಜಾರಿಗೆ ತಂದಿದೆ, ಪಿಂಚಣಿ, ಮದುವೆ, ಹೆರಿಗೆ, ಅಂತ್ಯಕ್ರಿಯೆ, ವಿದ್ಯಾಭ್ಯಾಸ ಸೇರಿದಂತೆ ಅನೇಕ ಸೌಲಭ್ಯಗಳು ಕಾರ್ಮಿಕರಿಗೆ ನೀಡುತ್ತಿದೆ ಎಂದರು.

ಅರ್ಹ ಫಲಾನುಭವಿಗಳು ಈ ಯೋಜನೆಗಳನ್ನು ಸದ್ಭಳಕೆಮಾಡಿಕೊಳ್ಳಬೇಕು, ಇದರ ಜೊತೆಗೆ ಕೆಲಸ ಮಾಡುವ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಕಾರ್ಮಿಕರ ಸುರಕ್ಷಿತೆಗೋಸ್ಕರ ಎಲ್ಲಾ ವಿಧದ ಕಾರ್ಮಿಕರಿಗೂ ಸಹ ಸುರಕ್ಷ ಪರಿಕರಗಳನ್ನು ನೀಡಲಾಗುತ್ತಿದೆ, ಎಲ್ಲರೂ ತಪ್ಪದೆ ಸುರಕ್ಷಿತೆ ದೃಷ್ಟಿಯಿಂದ ಸುರಕ್ಷಿತ ಪರಿಕರಗಳನ್ನು ಬಳಸಿಕೊಳ್ಳಬೇಕಾಗಿದೆ.

ಇದನ್ನೂ ಓದಿ:Gauribidanur News: ಕೇಂದ್ರ ಬಿಜೆಪಿ ಸರ್ಕಾರವು ಸಂವಿಧಾನ ಬಾಹಿರವಾಗಿ ಮೂರನೇ ಬಾರಿ ಚುನಾವಣಾ ಅಕ್ರಮ ನಡೆಸಿ ಅಧಿಕಾರಕ್ಕೆ ಬಂದಿದೆ : ಕೆ.ಪಿ.ಪದ್ಮರಾಜ್ ಜೈನ್

ನಾನು ಸಹ  ಕಾರ್ಮಿಕರಿಗೆ ಪರಿಕರಗಳನ್ನು ಒದಗಿಸುವಂತೆ ಕಾರ್ಮಿಕರಿಗೆ ಮನವಿ ಮಾಡಿದ್ದೆ, ನಮ್ಮ ಕೆಎಚ್.ಪಿ ಸಂಸ್ಥೆಯಿಂದ ಉಚಿತವಾಗಿ ಸಾವಿರಾರು ಕಾರ್ಮಿಕರಿಗೆ ಉಚಿತವಾಗಿ ಕಾರ್ಮಿಕ ಕಾರ್ಡ್ ಗಳನ್ನು ಮಾಡಿಸಿಕೊಡಲಾಗಿದೆ. ಎಲ್ಲಾ ಕಾರ್ಮಿಕರು ಕಾರ್ಮಿಕ ಇಲಾಖೆ ವತಿಯಿಂದ ಮಾಹಿತಿ ಪಡೆದು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಮಿಕ ನಿರೀಕ್ಷಕ ಟಿ ಬಿ ಸತೀಶ್ ಮಾತನಾಡಿ ಕಾರ್ಮಿಕರು ಸೌಲಭ್ಯಗಳನ್ನು ಪಡೆಯಲು ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಬೇಕು ಹಾಗೂ ಸಕಾಲದಲ್ಲಿ ಕಾರ್ಡುಗಳನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅರವಿಂದ್ ಕೆ ಎಂ, ನಗರಸಭೆ ಪೌರಾಯುಕ್ತ ರಮೇಶ್, ಸಮಾಜ. ಕಲ್ಯಾಣ ಸಹಾಯಕ. ನಿರ್ದೇಶಕ ಚನ್ನಪ್ಪ ಗೌಡ ನಾಯ್ಕರ್, ವೃತ್ತ ನಿರೀಕ್ಷಕ ಅಂಜನ್ ಕುಮಾರ್, ಅಭಕಾರಿ ನಿರೀಕ್ಷಕ ಮಂಜುನಾಥ್, ಸಿ ಡಿ ಪಿ ಒ ರವಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಶ್ರಮಿಕರ ಸಂಜೀವಿನಿ ಸೇವಾ ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ, ವೆಂಕಟಾದ್ರಿ, ರಮೇಶ್, ಪವನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.