ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

JDS: ತ್ಯಾಗ ಮುಖ್ಯವೆಂದು ನಂಬಿದ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ ಟಿ.ಎನ್.ರಾಜಗೋಪಾಲ್ : ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್

ಸಹಕಾರ ಕ್ಷೇತ್ರವಾದ ಹೈನುಗಾರಿಕೆ ಕ್ಷೇತ್ರದಲ್ಲಿ ಕ್ಷೀರ ಕ್ರಾಂತಿಯನ್ನು ಉಂಟು ಮಾಡಿದವರು ಹಾಗೂ ನಂದಿನಿ ಉತ್ಪನ್ನಗಳನ್ನು ದೇಶ ವಿದೇಶಕ್ಕೆ ಪರಿಚಯಿಸಿದವರು ಹಾಗೂ ಟೆಟ್ರಾ ಪ್ಯಾಕ್ ಮೂಲಕ ಹಾಲು ಹಲವುದಿನಗಳ ಕಾಲ ಕೆಡದಂತೆ ದಾಸ್ತಾನು ಮಾಡುವ ವಿಧಾನವನ್ನು ಪರಿಚಯಿಸಿದವ ರೆಂದರು.

ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ ಟಿ.ಎನ್.ರಾಜಗೋಪಾಲ್

-

Ashok Nayak
Ashok Nayak Dec 16, 2025 12:16 AM

ಚಿಕ್ಕಬಳ್ಳಾಪುರ : ರೈತರ,ಬಡವರ,ಬಲಹೀನರ ಸರ್ವರ ಪರವಾಗಿರುವಂತಹ ಜನಪರ ಕಾರ್ಯ ಗಳನ್ನು ಮಾಡಿದಂತಹ ಹಾಗೂ ಸಿ. ಬೈರೇಗೌಡರ ಗರಡಿಯಲ್ಲಿ ಪಳಗಿದಂತಹ ಮಹಾನ್ ನಾಯಕ ಟಿ.ಎನ್.ರಾಜಗೋಪಾಲ್ ರವರಾಗಿದ್ದರೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.

ತಾಲ್ಲೂಕಿನ ತಳಗವಾರದಲ್ಲಿ ನಡೆದ ಟಿ.ಎನ್.ರಾಜಗೋಪಾಲ್‌ರ ಜೀವನಗಾಥೆ ಕೃತಿ ಲೋಕಾರ್ಪಣೆ ಯಲ್ಲಿ ಭಾಗವಹಿಸಿ ಮಾತನಾಡಿ, ಟಿ.ಎನ್.ರಾಜಗೋಪಾಲ್‌ರವರು ರೈತರಿಗೆ,ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ಮಹಾದಂಬಲದೊAದಿಗೆ ತಮ್ಮ ೨೬ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿ ಗ್ರಾಮ.ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿ ಎಲ್ಲರನ್ನೂ ಸಮಸಮಾಜದಲ್ಲಿ ಕಂಡ ಅಜರಾಮರ ಅಜಾತಶತ್ರುವಾಗಿದ್ದವರೆಂದರು.

ನನ್ನ ಹಾಗೂ ರಾಜಣ್ಣನವರ ಸಂಬAಧ ೧೫ ವರ್ಷಗಳಷ್ಟು ಹಳೆಯದಾಗಿದ್ದು ಅವರು ಗ್ರಾಮ. ಪಂಚಾಯಿತಿ . ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷರಾಗಿ ಮಿಲ್ಕ್ ಯೂನಿ ಯನ್ ಮತ್ತು  ಕೋಮುಲ್ ನಲ್ಲಿ ನಿರ್ದೇಶಕರಾಗಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿ ಹಾಲು ಉತ್ಪಾದಕ ರಿಗೆ ಬೇರೆ ಬೇರೆ ಒಕ್ಕೂಟಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಹಾಲು ಉತ್ಪಾದಕರ ವಿಧಾನಗಳನ್ನು ಪರಿಚಯಿಸಿ ಅದನ್ನು ತಮ್ಮಲ್ಲೂ ಅಳವಡಿಸಿಕೊಳ್ಳುವಂತೆ ಮಾಡಿದ್ದು ಮಾತ್ರವಲ್ಲದೆ ಹೈನುಗಾರಿಕೆಯಲ್ಲಿ ಮೊಟ್ಟ ಮೊದಲಬಾರಿಗೆ ಹಾಲು ಕರೆಯುವ ಯಂತ್ರಗಳನ್ನು ಸ್ಥಳೀಯ ಡೈರಿಯಲ್ಲಿ ಅಳವಡಿಸಿ ಇತರೇ ಡೈರಿಗೆ ಮಾದರಿಯಾದರು.  

ಇದನ್ನೂ ಓದಿ: JDS Protest: ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ರೆ ತುಂಗಭದ್ರಾ ಡ್ಯಾಂಗೆ ಮುತ್ತಿಗೆ: ನಿಖಿಲ್‌ ಕುಮಾರಸ್ವಾಮಿ ಎಚ್ಚರಿಕೆ

ಸಹಕಾರ ಕ್ಷೇತ್ರವಾದ ಹೈನುಗಾರಿಕೆ ಕ್ಷೇತ್ರದಲ್ಲಿ ಕ್ಷೀರ ಕ್ರಾಂತಿಯನ್ನು ಉಂಟು ಮಾಡಿದವರು ಹಾಗೂ ನಂದಿನಿ ಉತ್ಪನ್ನಗಳನ್ನು ದೇಶ ವಿದೇಶಕ್ಕೆ ಪರಿಚಯಿಸಿದವರು ಹಾಗೂ ಟೆಟ್ರಾ ಪ್ಯಾಕ್ ಮೂಲಕ ಹಾಲು ಹಲವುದಿನಗಳ ಕಾಲ ಕೆಡದಂತೆ ದಾಸ್ತಾನು ಮಾಡುವ ವಿಧಾನವನ್ನು ಪರಿಚಯಿಸಿದವ ರೆಂದರು.

ಪ್ರಾಮಾಣಿಕ,ಪಾರದರ್ಶಕವಾಗಿ ಆಡಳಿತದ ಗನ್ನಡಿಯಾಗಿದ್ದ ಮಹಾನ್ ನಾಯಕರಾಗಿದ್ದ ಇವರು ಬಡವರ ಬಗ್ಗೆ ಅನುಕಂಪ,ಕಳಕಳಿ ಇತ್ತು.ಅಧಿಕಾರ ಹಣಕ್ಕಾಗಿ ಆಸೆ ಪಡುವಂತಹ ವ್ಯಕ್ತಿ ಯಾಗಿರಲಿಲ್ಲ, ತಾತಯ್ಯನವರ ಪರಮ ಭಕ್ತರಾಗಿದ್ದರೆಂದರು.

ಶ್ರೀಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನಿಗೆ ಎರಡು ಮುಖಗಳಿರುತ್ತವೆ ಅಂತರAಗ, ಬರ್ಹಿರಂಗ ವ್ಯಕ್ತಿತ್ವಗಳಿರುತ್ತವೆ. ಅಂತರ ಗಂಧದಿಂದ ಮಾಡುವಂತಹ ಪ್ರತಿಯೊಂದು ಕೆಲಸವು ಧೀಮಂತವಾಗಿರುತ್ತದೆ ಹಾಗೂ ಸಮ ಸಮಾಜದ ಒಳಿತಿಗಾಗಿ ರೂಪುಗೊಳ್ಳುವಂತಹವಾಗಿರುತ್ತ ವೆಂದರು,ವ್ಯಕ್ತಿಯ ಕುಟುಂಬ ಮತ್ತು ಮನೆತನದಿಂದಲೂ ವ್ಯಕ್ತಿಗೆ ಶಕ್ತಿ ಮತ್ತು ಅಂಶಗಳು ಲಭಿಸುತ್ತವೆ ಅಂತಹ ಮನೆತನದಿಂದ ಬಂದ ಟಿ.ಎನ್.ರಾಜಗೋಪಾಲ್ ಅಂತಹ  ಶಕ್ತಿಯನ್ನು ಹೊಂದಿರುವ ವ್ಯಕ್ತಿಯಾಗಿದ್ದರೆಂದರು.

ಕಲ್ವಮAಜರಿ ಗೋಪಾಲಗೌಡ ಟಿ.ಎನ್. ರಾಜಗೋಪಾಲ್‌ರ ಜೀವನ ಗಾಥೆಯ ಸಾರಾಂಶವನ್ನು ಸಂಕ್ಷಿಪ್ತವಾಗಿ ತಿಳಿಸಿದರು.ಕೃತಿ ರಚನಾಕಾರ ಟಿ.ವಿ.ನಾಗರಾಜಗೌಡ ಪ್ರಸ್ತಾವಿಕ ನುಡಿ ನುಡಿದರು. ಟಿ.ಆನಂದ್ ಮತ್ತು ತಂಡದವರಿಂದ ವಿವಿಧ ಕೀರ್ತನೆಗಳನ್ನು ಹಾಡಿ ಅರ್ಥೈಸಿ ನೆರದಿದ್ದವರಿಗೆ ಬಾಳ ಸಾಂಗತ್ಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ಕುರುಟಹಳ್ಳಿ ರಾಧಾಕೃಷ್ಣ,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಷೇಕ್ ಮೌಲಾ,ಸಂತೇಕಲ್ಲಹಳ್ಳಿ ಗೋವಿಂದಗೌಡ,ಸುಬ್ಬಾರೆಡ್ಡಿ,ಬನಹಳ್ಳಿ ರವಿ,ಗೋಪಾಲರೆಡ್ಡಿ, ತಳಗವಾರ ಆನಂದ್,ನಗರಸಭಾ ಮಾಜಿ ಸದಸ್ಯ ವೆಂಕಟರವಣಪ್ಪ, ಅಂಕಾಲಮಡಗು ಕೃಷ್ಣ ಮೂರ್ತಿ, ಸಂತೇಕಲ್ಲಹಳ್ಳಿ ಪ್ರಭಾಕರ್,ಪ್ರತಾಪ್,ಗ್ರಾಮ. ಪಂಚಾಯತಿ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು, ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.