ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salumarada Thimmakka: ಶತಾಯುಷಿ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ ಸಲ್ಲಿಕೆ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶತಾಯುಷಿ ಸಾಲುಮರದ ತಿಮ್ಮಕ್ಕ ಯಾವುದೇ ಪ್ರತಿ ಫಲಾ ಪೇಕ್ಷೆ ಇಲ್ಲದೆ ತನ್ನ ಕರ್ತವ್ಯವನ್ನು ಮಾಡಿದ್ದಾರೆ.ಇವರ ಈ ಸಾಧನೆ ವಿಶ್ವಾದ್ಯಂತ  ಛಾಪು ಮೂಡಿಸಿ ವನಸಂವರ್ಧನೆಗೆ ಪ್ರೇರಣೆಯಾಗಿದೆ.ಇವರ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ

ಸಾಲುಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ ಸಲ್ಲಿಕೆ

ಸಾಲುಮರದ ತಿಮ್ಮಕ್ಕ ಅವರ ಸಾವಿನ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ಶಿಕ್ಷಕಿ ಬಿ.ಎಂ.ಪ್ರಮೀಳ ಮಾತನಾಡಿ ಈ ಸಮಾಜವು ಯಾವತ್ತು ಸಾಲುಮರದ ತಿಮ್ಮಕ್ಕನಿಗೆ ಚಿರಋಣಿಯಾಗಿರುತ್ತದೆ ಎಂದರು. -

Ashok Nayak
Ashok Nayak Nov 15, 2025 12:22 AM

ಚಿಕ್ಕಬಳ್ಳಾಪುರ : ಸಾಲುಮರದ ತಿಮ್ಮಕ್ಕ (Salumarada Thimmakka) ಅವರ ಸಾವಿನ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ಶಿಕ್ಷಕಿ ಬಿ.ಎಂ.ಪ್ರಮೀಳ ಮಾತನಾಡಿ ಈ ಸಮಾಜವು ಯಾವತ್ತು ಸಾಲುಮರದ ತಿಮ್ಮಕ್ಕನಿಗೆ ಚಿರ ಋಣಿಯಾಗಿರುತ್ತದೆ ಎಂದರು.

ನಗರದ ಜಿಲ್ಲಾ ಕಸಾಪ ಕಛೇರಿಯಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶತಾಯುಷಿ ಸಾಲುಮರದ ತಿಮ್ಮಕ್ಕ ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ತನ್ನ ಕರ್ತವ್ಯವನ್ನು ಮಾಡಿದ್ದಾರೆ.ಇವರ ಈ ಸಾಧನೆ ವಿಶ್ವಾದ್ಯಂತ  ಛಾಪು ಮೂಡಿಸಿ ವನಸಂವರ್ಧನೆಗೆ ಪ್ರೇರಣೆಯಾಗಿದೆ.ಇವರ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಇದನ್ನೂ ಓದಿ: Saalumarada Thimmakka Death: ಸಾಲುಮರದ ತಿಮ್ಮಕ್ಕ ನಿಧನದ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿಲ್ಲ: ಸರ್ಕಾರ ಸ್ಪಷ್ಟನೆ

ಮಹಾತಾಯಿಯು ಮಕ್ಕಳಿಲ್ಲದ ಕೊರಗನ್ನು ನೀಗಿಸಲು 800 ಮರಗಳನ್ನು ನೆಟ್ಟು ಕಾಪಾ ಡಿದ ಕಾರಣ ವೃಕ್ಷ ಮಾತೆ ಎಂದೇ ಪ್ರಸಿದ್ಧಿಯಾಗಿದ್ದು, ದೇಶ ವಿದೇಶಗಳಲ್ಲಿ ಪುರಸ್ಕಾರ ಗಳನ್ನು ಗಳಿಸಿ ಸರಳ ಸಜ್ಜನಿಕೆಯಿಂದ ಸೇವೆ ಮಾಡಿ ತಮ್ಮ ಬದುಕು ಅಜರಾಮರವಾಗಿಸಿ ದ್ದಾರೆ. ಕರ್ನಾಟಕ ಸರ್ಕಾರವು ಅವರ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ.ಇವರ ಸೇವೆಯನ್ನು ಗುರ್ತಿಸಿದ ದೂರದ ಕ್ಯಾಲಿಫೋರ್ನಿಯಾ ಸರ್ಕಾರ  ಪುರಸ್ಕಾರ ವನ್ನು ನೀಡಿದ್ದು ಇವರ ಸೇವಗೆ ಸಂದ ಗೌರವ ಎಂದರು.

ಬಡತನದ ಬೇಗೆಯಲ್ಲಿ ಬೆಂದು ತಮಗೆ ಮಕ್ಕಳಿಲ್ಲ ಎಂಬ ಕೊರಗನ್ನು ನಿವಾರಿಸಲು ಸಸಿಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ, ಬೆಳೆಸಿ ಪ್ರಕೃತಿಗೆಗೆ ಕೊಡುಗೆ ನೀಡಿ ಸಾರ್ಥಕ ಭಾವಪಡೆದವರು. ಸಾಧನೆ ,ಸಜ್ಜನಿಕೆ ಸೇವೆಗೆ ಅವರೊಬ್ಬ ಪ್ರತಿರೂಪವಾಗಿದ್ದರು.

ಅವರೊಬ್ಬ ಅನರ್ಘ್ಯ ರತ್ನರಾಗಿ ಬಾಳಿ ಬೆಳಗಿ ಸದ್ದಿಲ್ಲದೆ ಸಾಧನೆ ಮಾಡಿ ಪದ್ಮಶ್ರೀ ಪ್ರಶಸ್ತಿ ಪಡೆದು ನಮಗೆಲ್ಲ ಆದರ್ಶವಾಗಿ ಬದುಕಿದರು, ಬೆಂಗಳೂರಿನ ಒಂದೆರಡು ಕಾರ್ಯಕ್ರಮ ಗಳಲ್ಲಿ ಅವರೊಡನೆ ವೇದಿಕೆ ಹಂಚಿಕೊಡಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಮೆಲಕು ಹಾಕಿದರು. ಮಹಾತಾಯಿಯ ಆಗಲಿಕೆಯು ನಾಡಿಗೆ ತುಂಬಲಾರದ ನಷ್ಟವಾಗಿದೆ, ಕೇಂದ್ರ  ಮತ್ತು ರಾಜ್ಯದ ಪಠ್ಯ ವಿಷಯಗಳಲ್ಲಿ ಸಾಲುಮರದ ತಿಮ್ಮಕ್ಕನ ಕುರಿತು ಪಠ್ಯ ವಿಷಯಗಳನ್ನು ಬೋಧಿಸುತ್ತಿರುವುದು ನಾಡು ಮತ್ತು ದೇಶ ಅವರಿಗೆ ಸಲ್ಲಿಸಿದ ಗೌರವ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶಂಕರ್ ಮಾತನಾಡಿ ಪ್ರಪಂಚದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಆದರೆ ಇವರು ಸಲ್ಲಿಸಿದ ಕ್ಷೇತ್ರದಲ್ಲಿ ಸ್ಪರ್ದೆಯೇ ಇಲ್ಲಾ, ಯಾಕೆಂದೆರೆ  ಸ್ವಾರ್ಥದಲ್ಲೇ ಎಲ್ಲರೂ ಮುಳುಗಿರುವಾಗ ನಿಸ್ವಾರ್ಥ ಸೇವೆ ಸಲ್ಲಿಸಿ ಪ್ರಕೃತಿಗೆ ಬಹು ದೊಡ್ಡ ಕೊಡುಗೆ ನೀಡಿ,ಅದರ ನೆನಪನ್ನು ನಾಡಿಗೆ ಬಿಟ್ಟು ಹೋಗಿದ್ದಾರೆಂದರು.  

ಈ ಸಂಧರ್ಭದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ,ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ,ಕೋಶಾಧ್ಯಕ್ಷ ಡಿ.ಎಂ.ಶ್ರೀರಾಮ,ಶ್ರೀನಿವಾಸ್,ನಟರಾಜ್,ಚರಣ್,ಲೋಕೇಶ್ ಇತರರು ಉಪಸ್ಥಿತರಿದ್ದರು.