ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vegetable Price Hike: ಗಗನಕ್ಕೇರಿದ ತರಕಾರಿ ಬೆಲೆ: ಬೆಳ್ಳುಳ್ಳಿ ಬೆಲೆ 600 ಗಡಿ ದಾಟಿದೆ

Vegetable Price Hike: ಗಗನಕ್ಕೇರಿದ ತರಕಾರಿ ಬೆಲೆ: ಬೆಳ್ಳುಳ್ಳಿ ಬೆಲೆ 600 ಗಡಿ ದಾಟಿದೆ

Ashok Nayak Ashok Nayak Dec 8, 2024 3:29 PM
ಬಾಗೇಪಲ್ಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಫೆಂಗಾಲ್ ಚಂಡಮಾರುತದಿAದಾಗಿ ವಿಪರೀತ ಮಳೆಯಾದ ಪರಿಣಾಮ ಗಡಿ ಭಾಗದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಕರ್ನಾಟಕ ಸೇರಿದಂತೆ ತಮಿಳುನಾಡು, ಚೆನ್ನೈನಲ್ಲಿ ಭಾರೀ ಮಳೆಯಾದ ಹಿನ್ನೆಲೆ ಬೆಳೆ ಹಾನಿಯಾಗುವುದರ ಜೊತೆಗೆ ಇಳುವರಿ ಕಡಿಮೆ ಯಾಗಿದೆ. ಇದರ ಪರಿಣಾಮ ತರಕಾರಿ ಬೆಲೆ ಹೆಚ್ಚಾಗುವಂತೆ ಮಾಡಿದೆ.
ಫೆಂಗಲ್ ಚಂಡಮಾರುತ ಈಗಿಲ್ಲವಾದರೂ ಇದು ಬಿತ್ತಿಹೋಗಿರುವ ಪರಿಣಾಮ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.ಸೊಪ್ಪು  ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು. ಮಧ್ಯಮ ವರ್ಗದ ಜನರ ಜೀವನ ಬೆಲೆಏರಿಕೆಯಿಂದಾಗಿ ದುಸ್ಥರವಾಗುವಂತೆ ಮಾಡಿದೆ.ಕ್ಯಾರೆಟ್ ೮೦, ಬೀನ್ಸ್ ೮೦,ಸೊಪ್ಪು ಒಂದು ಕಟ್ಟು ೩೦ ರೂಪಾಯಿ ಮಾರುತ್ತಿದ್ದಾರೆ.
ಮುಖ್ಯವಾಗಿ ಬೆಳ್ಳುಳ್ಳಿ ಕೆ.ಜಿಗೆ ೬೦೦ ರೂ. ಗಡಿ ದಾಟಿದ್ದು, ನುಗ್ಗೆಕಾಯಿ ಕೆ.ಜಿಗೆ ೫೦೦ರೂ. ತಲುಪಿದೆ. ಒಂದು ಪೀಸ್ ನುಗ್ಗೆಕಾಯಿ ೬೦ರೂ. ಆಗಿದೆ. ಈರುಳ್ಳಿ ಸೆಂಚುರಿಯಾದರೆ, ಟೊಮೆಟೋ ಅರ್ಧ ಸೆಂಚುರಿ ಬಾರಿಸಿದೆ. ಒಟ್ಟಾರೆ ತರಕಾರಿ ದರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.
ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಗಳಲ್ಲಿ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗದ ಕಾರಣ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನುವುದು ತರಕಾರಿ ವ್ಯಾಪಾರಿ ಚಿನ್ನಮ್ಮ ಅವರ ಅಭಿಪ್ರಾಯವಾಗಿದೆ.