ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bharat Seva Ratna Award: ಭಾರತ ಸೇವಾ ರತ್ನ ಪ್ರಶಸ್ತಿಗೆ ಸಾಹಿತಿ ಓಂಕಾರಪ್ರಿಯ ಭಾಜನ

ಸಾಮಾಜಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಸಾಂಸ್ಕೃ ತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ನೀಡಲಾಗುವ ಭಾರತ ಸೇವಾ ರತ್ನ ಪ್ರಶಸ್ತಿಗೆ ಬಾಗೇಪಲ್ಲಿ ತಾಲ್ಲೂಕಿನ  ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಕೃಷ್ಣಮಾಚಾರಿ ಅವರ ಸುಪುತ್ರ, ಸಾಹಿತಿ, ಕವಿ, ಸಂಶೋಧಕ, ವಿಮರ್ಶಕ ಓಂಕಾರಪ್ರಿಯ ಭಾಜನರಾಗಿದ್ದಾರೆ

ಭಾರತ ಸೇವಾ ರತ್ನ ಪ್ರಶಸ್ತಿಗೆ ಸಾಹಿತಿ ಓಂಕಾರಪ್ರಿಯ ಭಾಜನ

ಬಾಗೇಪಲ್ಲಿ: "ಚೇತನ ಪ್ರತಿಷ್ಠಾನ ಧಾರವಾಡ ಮತ್ತು ಗಡಿನಾಡ ಕನ್ನಡ ಸಾಂಸ್ಕೃತಿಕ ಸೇವಾ ಸಂಸ್ಥೆ ಕಾಸರಗೋಡು ವತಿಯಿಂದ ಸಾಮಾಜಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಸಾಂಸ್ಕೃ ತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ನೀಡಲಾಗುವ ಭಾರತ ಸೇವಾ ರತ್ನ ಪ್ರಶಸ್ತಿ( Bharat Seva Ratna Award)ಗೆ ಬಾಗೇಪಲ್ಲಿ ತಾಲ್ಲೂಕಿನ  ಹಿರಿಯ ಸ್ವಾತಂತ್ರ‍್ಯ ಹೋರಾಟ ಗಾರ ಕೃಷ್ಣಮಾಚಾರಿ ಅವರ ಸುಪುತ್ರ, ಸಾಹಿತಿ, ಕವಿ, ಸಂಶೋಧಕ, ವಿಮರ್ಶಕ ಓಂಕಾರ ಪ್ರಿಯ ಭಾಜನರಾಗಿದ್ದಾರೆ.

ಇದನ್ನೂ ಓದಿ: 77th Republic Day: 77ನೇ ಗಣರಾಜ್ಯೋತ್ಸವಕ್ಕೆ ಜಿಲ್ಲಾಕ್ರೀಡಾಂಗಣ ಸರ್ವರೀತಿಯಲ್ಲೂ ಸಜ್ಜು: ಗಮನ ಸೆಳೆಯಲಿದೆ ಫಲಪುಷ್ಪಪ್ರದರ್ಶನ

77ನೇ ಗಣರಾಜ್ಯೋತ್ಸವ(77th Republic Day)ದ ಅಂಗವಾಗಿ ಬೆಂಗಳೂರು ಚಾಮರಾಜ ಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಜ.24 ರಂದು ಆಯೋಜಿಸ ಲಾಗಿದ್ದ ಸಾಹಿತಿ ಡಾ.ಚಂದ್ರಶೇಖರ ಮಾಡಲಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಓಂಕಾರಪ್ರಿಯಾ ಅವರು ಕರ್ನಾಟಕ ರಾಜ್ಯಾದ್ಯಂತ ಕನ್ನಡ ಸಂಪದ ಕಾರ್ಯಕ್ರಮ ಹಾಗೂ ಸಾಮಾಜಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾ ಯಿತು.

ಈ ಕಾರ್ಯಕ್ರಮವನ್ನು ಲೇಖಕಿ ಡಾ.ಶ್ವೇತಾ ಪ್ರಕಾಶ್, ಸಮಾಜ ಸೇವಕ ಮಹೇಂದ್ರ ಮುಣ್ಣೋತ, ಚಲನಚಿತ್ರ ಗೀತ ರಚನೆಕಾರರಾದ ಡಾ.ವಿ.ನಾಗೇಂದ್ರ ಪ್ರಸಾದ್, ಭಾರತ ಸೇವಾರತ್ನ ಪ್ರಶಸ್ತಿ, ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಜ್ಞಾನ ಭಾರತಿ ರಾಷ್ಟ್ರೀಯ ಶಿಕ್ಷಕ/ಕಿಯರು ಹಾಜರಿದ್ದರು.