#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಎಸ್ ಡಿ ಎಂ ಕಾಲೇಜಿನ 30ನೇ ಘಟಿಕೋತ್ಸವ

ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕೈಗೆಟುಕುವ‌ ರೀತಿಯಲ್ಲಿ ಆರೋಗ್ಯ ರಕ್ಷಣೆ ಮತ್ತು ಜೀವನಶೈಲಿ ಔಷಧ ವನ್ನು ಉತ್ತೇಜಿಸುವಲ್ಲಿ ಸಂಸ್ಥೆಯ ಪಾತ್ರವನ್ನು ಶ್ಲಾಘಿಸಿದರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕ್ಷೇತ್ರದಲ್ಲಿ ಪದವೀಧರರಿಗೆ ಉತ್ತಮ ಭವಿಷ್ಯವಿದೆ ಎಂಬ ಭರವಸೆ ನೀಡಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಜಾಗತಿಕ ಮಹತ್ವ ಸಾರಿದ ಕೇಂದ್ರ ಆಯುಷ್ ಸಚಿವ ಶ್ರೀ ಪ್ರತಾಪ್ ರಾವ್ ಜಾಧವ್

Profile Ashok Nayak Jan 29, 2025 11:14 AM

ಧರ್ಮಸ್ಥಳ: ಎಸ್. ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ (SDMCNYS) ಪ್ರತಿ ಷ್ಠಿತ 30ನೇ ಘಟಿಕೋತ್ಸವ ಸಮಾರಂಭ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆ ಯಿತು.

ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಘಟಿಕೋ ತ್ಸವವನ್ನು ಉದ್ಘಾಟಿಸಿದರು. ಭಾರತ ಸರ್ಕಾರದ ಆಯುಷ್ ಸಚಿವರಾದ ಶ್ರೀ ಪ್ರತಾಪ್‌ರಾವ್ ಗಣ ಪತ್‌ರಾವ್ ಜಾಧವ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕೈಗೆಟುಕುವ‌ ರೀತಿಯಲ್ಲಿ ಆರೋಗ್ಯ ರಕ್ಷಣೆ ಮತ್ತು ಜೀವನಶೈಲಿ ಔಷಧವನ್ನು ಉತ್ತೇಜಿಸುವಲ್ಲಿ ಸಂಸ್ಥೆಯ ಪಾತ್ರವನ್ನು ಶ್ಲಾಘಿ ಸಿದರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕ್ಷೇತ್ರದಲ್ಲಿ ಪದವೀಧರರಿಗೆ ಉತ್ತಮ ಭವಿಷ್ಯವಿದೆ ಎಂಬ ಭರವಸೆ ನೀಡಿದರು.

ಇದನ್ನೂ ಓದಿ: Mysore News: ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಗೋಡೆ ಕುಸಿತ; ಅವಶೇಷಗಳಡಿ ಸಿಲುಕಿದ ಕಾರ್ಮಿಕ

ಘಟಿಕೋತ್ಸವ ಭಾಷಣದಲ್ಲಿ, ಶ್ರೀ ಜಾಧವ್ ಅವರು ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚುತ್ತಿರುವ ಹೊರೆಯನ್ನು ಜಾಗತಿಕವಾಗಿ ಪರಿಹರಿಸುವಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಒತ್ತಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಾದಿಸಿದ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ಧ್ಯಾನ ದಿನಗಳ ಪಾತ್ರವನ್ನು ಶ್ಲಾಘಿಸಿದ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಸ್ವಚ್ಛತೆಯ ಮಹತ್ವ ಹಾಗೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿ ದರು. ಅಲ್ಲದೇ ರಾಷ್ಟ್ರೀಯ ನಿಯಂತ್ರಣ ಚೌಕಟ್ಟನ್ನು ಸ್ಥಾಪಿಸೋದಾಗಿ ಹೇಳಿದ್ರು.

ಸಮಾರಂಭದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು

  1. ಡಾ. ಶ್ವೇತಾ ಆರ್.ಜೆ. : ಎಂಡಿಯಲ್ಲಿ 1 ನೇ ಶ್ರೇಯಾಂಕಕ್ಕಾಗಿ ಸೀತಾರಾಮ್ ಜಿಂದಾಲ್ ಫೌಂಡೇ ಶನ್ ಚಿನ್ನದ ಪದಕ, ದಿವಂಗತ ಡಾ. ಗುರುಬಸಪ್ಪ ಗಣಗಪ್ಪ ಹುವಿನ್ ದತ್ತಿ ನಗದು ಪ್ರಶಸ್ತಿ.
  2. ಡಾ. ಶ್ರದ್ಧಾ ಆರ್. - ಯೋಗ (ಕ್ಲಿನಿಕಲ್) ನಲ್ಲಿ ಎಂಡಿಯಲ್ಲಿ ಅತ್ಯಧಿಕ ಅಂಕಗಳಿಕೆಗಾಗಿ ಸೀತಾ ರಾಮ್ ಜಿಂದಾಲ್ ಫೌಂಡೇಶನ್ ಚಿನ್ನದ ಪದಕ.
  3. ಡಾ. ತನ್ಮಯಿ ಕೃಷ್ಣ - ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ಯಲ್ಲಿ ಎಂಡಿಯಲ್ಲಿ ಪ್ರಥಮ ರ್ಯಾಂಕ್‌ಗಾಗಿ ರಾಷ್ಟ್ರಪತಿ ಪದಕ.
  4. ಡಾ. ಗನ್ಯಾಶ್ರೀ - ಬಿಎನ್‌ವೈಎಸ್‌ನಲ್ಲಿ ಪ್ರಥಮ ರ್ಯಾಂಕ್‌ಗಾಗಿ ಸೀತಾರಾಮ್ ಜಿಂದಾಲ್ ಫೌಂಡೇಶನ್ ಚಿನ್ನದ ಪದಕ ಸೇರಿದಂತೆ ನಾಲ್ಕು ದತ್ತಿ ಬಹುಮಾನಗಳೊಂದಿಗೆ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ ಪ್ರಶಸ್ತಿ.
  5. ಡಾ.ಅಭಿಷೇಕ್ ಪಿ.ಎ. - ಬಿಎನ್‌ವೈಎಸ್‌ನಲ್ಲಿ 3 ನೇ ಸ್ಥಾನ ಪಡೆದಿದ್ದಕ್ಕಾಗಿ ಡಾ. ಎಂ. ಗಾಯತ್ರಿ ಬೆಳ್ಳಿ ಪದಕ ಮತ್ತು ಶ್ರೀ ಬಿ.ಆರ್. ರಾಜಶೇಖರ್ ದತ್ತಿ ನಗದು ಬಹುಮಾನ.
  6. ಡಾ. ನಂದಜ - 2023-24ರ ಅತ್ಯುತ್ತಮ ಹೊರಹೋಗುವ ವೈದ್ಯೆಗಾಗಿ ಡಾ. ವೈ. ರುದ್ರಪ್ಪ ದತ್ತಿ ನಗದು ಬಹುಮಾನ.

ಈ ಕಾರ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸಾ ವಿಭಾಗದ ಉಪ ಪ್ರಾಂಶುಪಾಲರು ಮತ್ತು ಡೀನ್ ಡಾ. ಸುಜಾತಾ ಕೆ.ಜೆ. ನೇತೃತ್ವದಲ್ಲಿ ಪ್ರಮಾಣ ವಚನ ಭೋಧಿಸಲಾಯಿತು. ಸಮಾರಂಭದಲ್ಲಿ ಎಸ್‌ಡಿ ಎಂಇ(ರಿ) ಕಾರ್ಯದರ್ಶಿ ಹರ್ಷೇಂದ್ರ ಕುಮಾರ್‌, ಡಾ. ರಾಘವೇಂದ್ರ ರಾವ್‌, ನಿರ್ದೇಶಕರು, ಸಿಸಿಆರ್‌ ವೈಎನ್‌, ನವದೆಹಲಿ ಹಾಗೂ ಐಎನ್‌ವೈಜಿಎಂಎ ರಾಷ್ಟ್ರೀಯ ಅಧ್ಯಕ್ಷ ಡಾ,ನವೀನ್‌ ವಿಶ್ವೇಶ್ವರಯ್ಯ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.