ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹುತಾತ್ಮರ ಕನಸು ನನಸು ಮಾಡುವ ಕನಸು ನಿಮ್ಮದಾಗಲಿ: ಕೆ.ವಿ. ಪ್ರಭಾಕರ್‌ ಕರೆ

KV Prabhakar: ಮಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿದ್ದಾರೆ. ಗಣರಾಜ್ಯಗಳ ಅಧಿಪತಿ ಭಾರತ ಎಂದು ನಾವು ಹೆಮ್ಮೆ ಪಡುವಾಗ ನಮಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆಯೂ ಹೆಮ್ಮೆ ಇರಬೇಕು ಎಂದು ತಿಳಿಸಿದ್ದಾರೆ.

ಹುತಾತ್ಮರ ಕನಸು ನನಸು ಮಾಡುವ ಕನಸು ನಿಮ್ಮದಾಗಲಿ: ಕೆವಿಪಿ ಕರೆ

ಮಂಗಳೂರು ವಿವಿಯ ಗಣರಾಜ್ಯೋತ್ಸವದಲ್ಲಿ ಕೆ.ವಿ. ಪ್ರಭಾಕರ್‌ ಮಾತನಾಡಿದರು. -

Profile
Siddalinga Swamy Jan 26, 2026 4:50 PM

ಮಂಗಳೂರು, ಜ.26: ಗಣರಾಜ್ಯಗಳ ಅಧಿಪತಿ ಭಾರತ ಎಂದು ನಾವು ಹೆಮ್ಮೆ ಪಡುವಾಗ ನಮಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆಯೂ ಹೆಮ್ಮೆ ಇರಬೇಕು. ಹುತಾತ್ಮರ ಕನಸು ನನಸು ಮಾಡುವ ಕನಸು ನಿಮ್ಮದಾದಾಗ ಮಾತ್ರ ಹುತಾತ್ಮರಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ (77th Republic Day) ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಇಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಈ ದೇಶದ ನಾಳೆಯ Architect ಗಳು ಮಾತ್ರವಲ್ಲ. ನಿಮ್ಮ ಬದುಕು ಮತ್ತು ಭವಿಷ್ಯದ Architect ಗಳೂ ಹೌದು. ನಿಮ್ಮ ಭವಿಷ್ಯದ ವಾಸ್ತುಶಿಲ್ಪಿಗಳಾಗುವುದು ಮತ್ತು ದೇಶದ ಭವಿಷ್ಯದ ವಾಸ್ತು ಶಿಲ್ಪಿಗಳಾಗುವುದು ಎರಡೂ ಬೇರೆ ಬೇರೆ ಸಂಗತಿಗಳಲ್ಲ. ಇವರೆಡರ ನಡುವೆ ಪರಸ್ಪರತೆ ಇದೆ ಎಂದರು.

ಕಾಲೇಜು ವಿದ್ಯಾರ್ಥಿಗಳು ಜನವರಿ 26 ಅಂದರೆ, ಒಂದು ಸರ್ಕಾರಿ ರಜಾ ದಿನ ಅಂತ ಮಾತ್ರ ಖುಷಿ ಪಡಬಾರದು. ಅದರಲ್ಲೂ ಈ ಬಾರಿಯ ಗಣರಾಜ್ಯೋತ್ಸವವನ್ನು "Long week end" ಎಂದು ಸಂಭ್ರಮ ಪಡುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದರು.

ಈ ತ್ರಿವರ್ಣ ಧ್ವಜವನ್ನು ನೋಡಿದಾಗ ನಮಗೆ ಥ್ರಿಲ್ ಆಗತ್ತೆ. ರೋಮಾಂಚನ‌ ಆಗತ್ತೆ. ಈ ರೋಮಾಂಚನದ ಹಿಂದೆ ನಮ್ಮ ಹಿರಿಯರ ಹೋರಾಟ, ತ್ಯಾಗ, ಬಲಿದಾನದ ಸುದೀರ್ಘ ಚರಿತ್ರೆಯೇ ಇದೆ. ಇವರೆಲ್ಲರ ಬಲಿದಾನದ ಹಿಂದೆ ಒಂದು ಕನಸಿತ್ತು. ಸ್ವತಂತ್ರ ಮತ್ತು ಸದೃಢ ಹಾಗೂ ಸರ್ವಧರ್ಮ ಸಮನ್ವಯದ ಭಾರತವನ್ನು ಕಟ್ಟಿ ನಿಲ್ಲಿಸುವ ಗಟ್ಟಿ ಕನಸಿತ್ತು. ನಮ್ಮ ಹಿರಿಯರು ಈ ಕನಸನ್ನು ಸ್ವತಂತ್ರ ಭಾರತದ ಯುವಕ/ ಯುವತಿಯರ ಅಂಗೈಗಳಿಗೆ ಕೊಟ್ಟು ಅವರು ಹುತಾತ್ಮರಾಗಿದ್ದಾರೆ. ಈ ಕನಸನ್ನು ನನಸು ಮಾಡಬೇಕಾದವರು "long week end" ಗಳಲ್ಲಿ ಕಳೆದು ಹೋಗುವುದು ಬೇಸರದ ಸಂಗತಿ ತಾನೇ? ಎಂದು ಪ್ರಶ್ನಿಸಿದ ಅವರು, ಹುತಾತ್ಮರ ಕನಸನ್ನು‌ ನನಸು ಮಾಡುವ ಭಾರತಕ್ಕೆ ಕನಸು ನಮ್ಮದಾಗಲಿ ಎಂದು ಕರೆ ನೀಡಿದರು.

1950 ಜನವರಿ 26 ಸ್ವತಂತ್ರ ಭಾರತ ಗಣರಾಜ್ಯವಾಗಿ ಪುನರ್ ಪ್ರತಿಷ್ಠಾಪನೆಯಾದ ದಿನ. ಗಣಗಳ ಅಧಿಪತಿಯನ್ನು ಗಣಪತಿ ಎಂದು ಕರೆಯುತ್ತೇವೆ. ಹಾಗೆಯೇ ಗಣರಾಜ್ಯಗಳ ಅಧಿಪತಿ ಭಾರತ. ಸ್ವತಂತ್ರ ಭಾರತಕ್ಕೆ ಗಟ್ಟಿ ಸಂವಿಧಾನದ ಮುದ್ರೆ ಬಿದ್ದು Rule of Law ಅಂದರೆ ಕಾನೂನಿನ ಆಡಳಿತ ಜಾರಿಯಾದ ದಿನ ಕೂಡ ಹೌದು. ನಮ್ಮ ಸಂವಿಧಾನ ಕೇವಲ ಕಾನೂನು ಪಠ್ಯವಲ್ಲ; ಇದು ಪ್ರತಿಯೊಬ್ಬ ಭಾರತೀಯನ ಪ್ರಥಮ User Manual ಅಂದರೆ "ಕೈಪಿಡಿ" ಆಗಿದೆ ಎಂದು ವಿವರಿಸಿದರು.

ಸಂವಿಧಾನ ನಮಗೆ ಮಾತನಾಡುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಕನಸು ಕಾಣುವ ಮತ್ತು ನಾವು ಯಾರೆಂದು ನಿಖರವಾಗಿ ಹೇಳುವ ಹಕ್ಕನ್ನು ನೀಡುತ್ತದೆ. ಕಾಲೇಜು ವಿದ್ಯಾರ್ಥಿಗಳಾದ ನೀವು ನಿಮ್ಮ ಜೀವನದ ಅತ್ಯಂತ ಶಕ್ತಿಶಾಲಿ ಮತ್ತು ನಿರ್ಣಾಯಕ ಹಂತದಲ್ಲಿದ್ದೀರಿ. ಹಳತಾದ ವ್ಯವಸ್ಥೆಗಳನ್ನು ಪ್ರಶ್ನಿಸುವ ಕುತೂಹಲದ ಜತೆಗೆ, ಬದಲಾವಣೆಯನ್ನು ಒತ್ತಾಯಿಸುವ ಮತ್ತು ರೂಪಿಸುವ ಶಕ್ತಿ ನಿಮಗಿದೆ. ಸೆಕೆಂಡುಗಳಲ್ಲಿ ಪ್ರಪಂಚದಾದ್ಯಂತ ನಿಮ್ಮ ಧ್ವನಿಯನ್ನು ಹರಡುವ ತಂತ್ರಜ್ಞಾನ ನಿಮ್ಮ ಅಂಗೈಯಲ್ಲಿದೆ. ಗಣರಾಜ್ಯವು ನಮ್ಮ ನಾಗರಿಕರ ಪಾಲ್ಗೊಳ್ಳುವಿಕೆಯಿಂದಷ್ಟೇ ಪ್ರಬಲವಾಗುತ್ತದೆ ಎನ್ನುವುದನ್ನು ಅರಿತು ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು.

ಕಾವೇರಿ ನಿವಾಸದಲ್ಲಿ‌ ಧ್ವಜಾರೋಹಣ ನೆರವೇರಿಸಿ, ನಾಡಿನ ಜನತೆಗೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

ನೀವು ಈ ಕ್ಯಾಂಪಸ್‌ನಿಂದ ಹೊರಡುವಾಗ, ಡಿಗ್ರಿ ಪಡೆದ ಹೆಮ್ಮೆಯನ್ನು ಮಾತ್ರ ಹೊತ್ತುಕೊಂಡು ಹೋಗಬೇಡಿ. ಸ್ವತಂತ್ರ ಭಾರತದ ಹುತಾತ್ಮರ ಕನಸುಗಳನ್ನು ನನಸು ಮಾಡುವ ಸೇನಾನಿಗಳಾಗಿ ಹೊರಡಿ. ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಯಾಗಿ, ಔಷಧಿಗಳನ್ನು ಕಂಡುಕೊಳ್ಳುವ ವಿಜ್ಞಾನಿಯಾಗಿ, ಸತ್ಯವನ್ನು ಮಾತನಾಡುವ ಕಲಾವಿದನಾಗಿ ಮತ್ತು ಪ್ರತಿಯೊಬ್ಬ ಭಾರತೀಯನನ್ನು ಘನತೆಯಿಂದ ನಡೆಸಿಕೊಳ್ಳುವ ನಾಗರಿಕನಾಗಿ ಕ್ಯಾಂಪಸ್ಸಿನ ಒಳಗೆ ಮತ್ತು ಹೊರಗೆ ಅತ್ಯುನ್ನತ ನಾಗರಿಕತೆಯನ್ನು ಆಚರಿಸುವ ಸೇನಾನಿಯಾಗಿ ಎಂದು ನಾನು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು.