ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ನೀರಿಗೆ ಎಸೆದ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿ; ವಿಡಿಯೊ ವೈರಲ್
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿ ಸಿಬ್ಬಂದಿಯನ್ನು ಸೊಂಡಿಲಿನಿಂದ ನೀರಿಗೆ ಎಸೆದ ಘಟನೆ ನಡೆದಿದೆ. ಇದರಿಂದ ಕೆಲ ಹೊತ್ತು ಆತಂಕದ ವಾತಾವಣ ನಿರ್ಮಾಣವಾಯಿತು. ಅದಾದ ಕ್ಷಣದಲ್ಲೇ ಯಶಸ್ವಿ ಶಾಂತಾವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ.
ಸಿಬ್ಬಂದಿಯನ್ನು ನೀರಿಗೆ ಎಸೆದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ -
ಸುಬ್ರಹ್ಮಣ್ಯ, ಡಿ. 3: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (Kukke Subrahmanya Temple) ಅಚ್ಚರಿಯ ಘಟನೆಯೊಂದು ನಡೆದಿದೆ. ದೇವಸ್ಥಾನದ ಆನೆ ಯಶಸ್ವಿಯು (Yashaswi) ಸಿಬ್ಬಂದಿಯನ್ನು ಸೊಂಡಿಲಿನಿಂದ ನೀರಿಗೆ ಎಸೆದು ಕೆಲ ಹೊತ್ತು ಆತಂಕದ ವಾತಾವಣ ನಿರ್ಮಾಣವಾಯಿತು. ಭಕ್ತರೊಂದಿಗೆ ಬೆರೆಯುತ್ತ, ಆಟವಾಡುತ್ತಿದ್ದ ಯಶಸ್ವಿ ಇದ್ದಕ್ಕಿದ್ದಂತೆ ಅಸಾಮಾಧನಗೊಂದಿದ್ದು ನೋಡಿ ಸುತ್ತ ನೆರೆದವರು ಅಚ್ಚರಿಗೊಂಡರು. ಅದಾದ ಕ್ಷಣದಲ್ಲೇ ಯಶಸ್ವಿ ಶಾಂತಾವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಆಯೋಜಿಸಿದ್ದ ನೀರು ಬಂಡಿ ಉತ್ಸವದ ವೇಳೆ ಈ ಘಟನೆ ನಡೆದಿದೆ. ಸುತ್ತ ನೆರೆದ ಭಕ್ತರೊಂದಿಗೆ ಯಶಸ್ವಿ ನೀರಾಟವಾಡುತ್ತಿತ್ತು. ಭಕ್ತರೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆನೆಗೆ ಸಿಬ್ಬಂದಿ ಅಡ್ಡ ಬಂದಿದ್ದರು. ಇದರಿಂದ ಸಮಾಧಾನಗೊಂಡ ಆನೆ ಸಿಬ್ಬಂದಿಯನ್ನು ಆಚೆ ತಳ್ಳಿ ಮತ್ತೆ ನೀರಾಟದಲ್ಲಿ ತೊಡಗಿಕೊಂಡಿತ್ತು. ಒಮ್ಮೆಗೆ ಆತಂಕ ವಾತಾರಣ ಸೃಷ್ಟಿಸಿದ್ದ ಆನೆ ಸಹಜ ಸ್ಥಿತಿಗೆ ಮರಳಿತು.
ಸಿಬ್ಬಂದಿಯನ್ನು ಎತ್ತಿ ಎಸೆದ ಸುಬ್ರಹ್ಮಣ್ಯ ಆನೆಯ ದೃಶ್ಯ:
ಮಕ್ಕಳು, ಭಕ್ತರು ಆನೆಗೆ ನೀರೆರಚಿದರೆ, ಆನೆ ಸೊಂಡಿಲಿನಿಂದ ಅವರತ್ತ ನೀರು ಚಿಮುಕಿಸಿದೆ. ಈ ವೇಳೆ ಸಿಬ್ಬಂದಿಯೊಬ್ಬರು ಸುರಕ್ಷತೆ ದೃಷ್ಟಿಯಿಂದ ಮುಂದೆ ಬಂದಿದ್ದರು. ಭಕ್ತರು ಮತ್ತು ಅನೆಗೆ ಅಡ್ಡಲಾಗಿ ಅವರು ನಿಂತಿದ್ದರು. ಇದರಿಂದ ಆನೆಗೆ ಅಸಮಾಧಾನವಾಗಿ ಸಿಬ್ಬಂದಿಯನ್ನು ಸೊಂಡಿಲಿನಿಂದ ಎಸೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ತಮ್ಮೊಂದಿಗೆ ಆಟವಾಡುತ್ತಿದ್ದ ಯಶಸ್ವಿ ಇದ್ದಕ್ಕಿದ್ದಂತೆ ರೊಚ್ಚಿಗೆದ್ದಿದ್ದು ಭಕ್ತರಿಗೆ ಅಚ್ಚರಿ ತಂದಿದ್ದಂತು ಸುಳ್ಳಲ್ಲ.
ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇವಾಲಯಗಳಲ್ಲಿ ದೇವರ ಸೇವೆಗೆ ಚಾರ್ಜ್ ಭಾರಿ ಏರಿಕೆ
ಅದ್ಧೂರಿಯಾಗಿ ನೆರವೇರಿದ ಚಂಪಾ ಷಷ್ಠಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಚಂಪಾಷಷ್ಠಿ ಮಹೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪವಿತ್ರ ಕುಮಾರಧಾರಾ ನದಿಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಹಾಗೂ ಅವಭೃತೋತ್ಸವ ವೈದಿಕ ವಿಧಿವಿಧಾನಗಳೊಂದಿಗೆ ಜರುಗಿತು. ನಂತರ ಕುಮಾರಧಾರಾ ಪುಣ್ಯತೀರ್ಥದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಜಳಕ ನೆರವೇರಿತು. ಜಳಕದ ಬಳಿಕ ಕುಮಾರಧಾರಾ ನದಿ ತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನಡೆಯಿತು.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಆನೆ ಯಶಸ್ವಿಯು ಸ್ನಾನ ಮಾಡಿ ನೀರಾಟವಾಡಿತು. ಇನ್ನು ಡಿಸೆಂಬರ್ 2ರಂದು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಂಡಿತು. ಅಂದು ರಾತ್ರಿ ದೇಗುಲದ ಹೊರಾಂಗಣದ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿತು. ಅಲ್ಲದೆ ಗೋಪುರ ನಡಾವಳಿ ನೆರವೇರಿತು.