ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Soujanya Case: ಚಿನ್ನಯ್ಯನ ವಿರುದ್ಧ ದೂರು ನೀಡಲು SIT ಕಚೇರಿಗೆ ಬಂದ ಸೌಜನ್ಯಾ ತಾಯಿ!

ಧರ್ಮಸ್ಥಳ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಂಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಮೃತ ಸೌಜನ್ಯ ತಾಯಿ ಕುಸುಮಾವತಿ ಬೆಳ್ತಂಗಡಿಯ ಎಸ್ ಐ ಟಿ ಕಚೇರಿಗೆ ಆಗಮಿಸಿ ದೂರು ನೀಡಲು ಬಂದಿದ್ದರು. ಚಿನ್ನಯ್ಯ ಈಗಾಗಲೇ ಎಸ್‌ಐಟಿ ವಶದಲ್ಲಿದ್ದು, ವಿಚಾರಣೆ ಮುಂದುವರಿದಿದೆ.

ಚಿನ್ನಯ್ಯನ ವಿರುದ್ಧ ದೂರು ನೀಡಲು ಮುಂದಾದ  ಸೌಜನ್ಯಾ ತಾಯಿ

Vishakha Bhat Vishakha Bhat Aug 28, 2025 5:00 PM

ಮಂಗಳೂರು: ಧರ್ಮಸ್ಥಳ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಂಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಮೃತ ಸೌಜನ್ಯ ತಾಯಿ ಕುಸುಮಾವತಿ ಬೆಳ್ತಂಗಡಿಯ ಎಸ್ ಐ ಟಿ ಕಚೇರಿಗೆ ಆಗಮಿಸಿ ದೂರು (Soujanya Case) ನೀಡಲು ಬಂದಿದ್ದರು. ಸೌಜನ್ಯ ತಾಯಿ ಕುಸುಮಾವತಿಗೆ ಎಸ್‌ಐಟಿ ಭೇಟಿಯನ್ನು ನಿರಾಕರಿಸಲಾಗಿದೆ. ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವನ್ನು (SIT) ಭೇಟಿಯಾಗಲು ಇಂದು ಸೌಜನ್ಯ (Soujanya) ತಾಯಿ ಕುಸುಮಾವತಿ ಆಗಮಿಸಿದ್ದರು. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಬಗ್ಗೆ ಆರೋಪಿಸಿದ ಚಿನ್ನಯ್ಯ ವಿರುದ್ದ ಸೌಜನ್ಯ ತಾಯಿ ದೂರು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಇಂದು ಸಾಧ್ಯವಾಗಿಲ್ಲ.

ಚಿನ್ನಯ್ಯ ಈಗಾಗಲೇ ಎಸ್‌ಐಟಿ ವಶದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೊಂದು ನೀಡಿದ ಸಂದರ್ಶನದಲ್ಲಿ ಚಿನ್ನಯ್ಯ, “ಸೌಜನ್ಯ ಶವವನ್ನು ತೆಗೆದುಕೊಂಡು ಹೋಗುವುದನ್ನು ನಾನು ನೋಡಿದ್ದೇನೆ” ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆಯನ್ನು ಆಧಾರವನ್ನಾಗಿಸಿಕೊಂಡು, ಸೌಜನ್ಯ ತಾಯಿ ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಚಿನ್ನಯ್ಯನನ್ನು ಸಾಕ್ಷಿಯನ್ನಾಗಿಸಿ ವಿಚಾರಣೆ ನಡೆಸಿ ಎಂದು ಸೌಜನ್ಯ ತಾಯಿ ಎಸ್‌ಐಟಿ ಬಳಿ ಮನವಿ ಮಾಡುವ ಸಾಧ್ಯತೆ ಇದೆ.

ಕುಸುಮಾವತಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಬೋಲೇರೋ ಹಾಗೂ ಸ್ಕಾರ್ಪಿಯೋ ವಾಹನಗಳಲ್ಲಿ ಆಗಮಿಸಿದ್ದರು. ಅವರು ದೂರಿನ ಪ್ರತಿಯನ್ನು ಹಿಡಿದು ಎಸ್‌ಐಟಿ ಕಚೇರಿಗೆ ಬಂದಿದ್ದರೂ, ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ದೂರು ಸ್ವೀಕರಿಸಲು ನಿರಾಕರಿಸಿ, ಮತ್ತೆ ಬರಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Dharmasthala: ಸುಳ್ಳೇ... ಸುಳ್ಳು... ಸುಜಾತಾ ಭಟ್‌ ಹೇಳಿದ್ದೆಲ್ಲಾ ಸುಳ್ಳು! ಈಕೆಯ ಮುಖವಾಡ ಕಳಚಿ ಬಿದ್ದಿದ್ದು ಹೇಗೆ?

ಈಗಾಗಲೇ ತನ್ನ ಮಗಳು ಅನನ್ಯಾ ಭಟ್‌ ಕಾಣೆಯಾಗಿದ್ದಾಳೆ ಎಂದು ಕತೆ ಹೇಳಿದ್ದ ಸುಜಾತಾ ಭಟ್‌ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ಮೂರು ದಿನದಿಂದ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ‘ಬುರುಡೆ’ ಚಿನ್ನಯ್ಯನ ವಿಚಾರಣೆಯೂ ತೀವ್ರಗೊಂಡಿದೆ. ಚಿನ್ನಯ್ಯ ವಿಚಾರಣೆ ವೇಳೆ ಜೊತೆಗಿದ್ದ ವಕೀಲರೊಬ್ಬರೇ ಪ್ರಮುಖ ಸಾಕ್ಷಿಯಾಗಿದ್ದಾರೆ. ಇನ್ನೂ ಚಿನ್ನಯ್ಯನ ಮೊಬೈಲ್ ಇತಿಹಾಸ ಕೆದಕುತ್ತಿರುವ ಎಸ್ಐಟಿ ಅಧಿಕಾರಿಗಳು ರಿಟ್ರೀವ್‌ ಮಾಡುತ್ತಿದ್ದಾರೆ. ಫೋನ್ ಕಾಲ್ ಲಿಸ್ಟ್ ಡಿಲೀಟ್ ಆಗಿದ್ದು, ಡಿಲೀಟ್ ಆಗಿರುವ ಡೇಟಾ ಪಡೆಯಲು ಮುಂದಾಗಿದ್ದಾರೆ.