Self Harming: ಕೊಲ್ಲಲು ಹೋದಾಗ ಮೂರ್ಛೆ ಹೋದ ಪ್ರೇಯಸಿ; ಸತ್ತಳೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ!
Mangaluru News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳಯಲ್ಲಿ ಘಟನೆ ನಡೆದಿದೆ. ಯುವತಿಯನ್ನು ಕಳೆದ 8 ವರ್ಷಗಳಿಂದ ಯುವಕನೊಬ್ಬ ಪ್ರೀತಿಸುತ್ತಿದ್ದ. ಆದರೆ, ಕೆಲ ತಿಂಗಳ ಹಿಂದೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಆಕೆಯ ಹತ್ಯೆಗೆ ಯತ್ನಿಸಿ, ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಮಂಗಳೂರು: ಪ್ರಿಯತಮೆಯ ಕೊಲೆಗೆ ಯತ್ನಿಸಿದ ಯುವಕನೊಬ್ಬ, ಆಕೆ ಸತ್ತಿದ್ದಾಳೆ ಎಂದು ಭಾವಿಸಿ ತಾನೂ ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳಯಲ್ಲಿ ನಡೆದಿದೆ. ಕೊಡ್ಮಾಣ್ ಗ್ರಾಮದ ನಿವಾಸಿ ಸುಧೀರ್(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ದಿವ್ಯಾ ಯಾನೆ ಎಂಬ ಯುವತಿಯನ್ನು ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಕೆಲ ತಿಂಗಳ ಹಿಂದೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ದಿವ್ಯಾಳ ಮನೆಗೆ ಸೋಮವಾರ ತೆರಳಿದ್ದ ಯುವಕ ಗಲಾಟೆ ಮಾಡಿದ್ದಾನೆ. ಈ ವೇಳೆ ಆಕೆಯ ಹತ್ಯೆಗೆ ಯತ್ನಿಸಿ, ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಬ್ಬರ ಮಧ್ಯೆ ಮನಸ್ತಾಪ ಉಂಟಾದ ಬಳಿಕ ದಿವ್ಯಾ ಶ್ರೀಧರನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಕೋಪಗೊಂಡ ಶ್ರೀಧರ್ ಪ್ರೇಯಸಿ ಮನೆಗೆ ಆಗಮಿಸಿ ಮದುವೆಗೆ ಪೀಡಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಶ್ರೀಧರ್, ದಿವ್ಯಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ದಿವ್ಯಾ ಮೂರ್ಛೆ ಹೋಗಿ ಬಿದ್ದಿದ್ದಾಳೆ. ಆದರೆ ದಿವ್ಯಾ ಸತ್ತಳೆಂದು ಭಯಗೊಂಡು ಪ್ರಿಯಕರ ಆಕೆಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ದಿವ್ಯಾ ಯಾನೆ ಶ್ರೀಧರ್ನಿಂದ ಅಂತರ ಕಾಯ್ದುಕೊಂಡಿದ್ದಳು. ಆದರೂ ಬಿಡದ ಶ್ರೀಧರ್, ದಿವ್ಯಾಳಿಗೆ ಫೋನ್ ಮಾಡುವುದು, ಹಿಂಬಾಲಿಸುವುದು ಮಾಡುತ್ತಿದ್ದ. ಆದರೂ ದಿವ್ಯಾ ಕ್ಯಾರೇ ಎಂದಿಲ್ಲ. ಕೊನೆಗೆ ಶ್ರೀಧರ್ ದಿವ್ಯಾ ಇರುವ ಬಾಡಿಗೆ ಮನೆಗೆ ಆಗಮಿಸಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆ ಬಳಿಕ ಇಬ್ಬರ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಶ್ರೀಧರ್, ದಿವ್ಯಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಆಗ ದಿವ್ಯಾ ತಪ್ಪಿಸಿಕೊಂಡು ಹೋಗುವಾಗ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಆದರೆ ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಸುಧೀರ್, ದಿವ್ಯಾ ಇದ್ದ ಬಾಡಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಗಾಯಾಳು ದಿವ್ಯಾಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Road Rage: ಕಾರು ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮಚ್ಚು ತೆಗೆದ; ಕಿಡಿಗೇಡಿಯ ಕಾರನ್ನೇ ಧ್ವಂಸ ಮಾಡಿದ ಜನ!