ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಜಸ್‌ಪ್ರೀತ್‌ ಬುಮ್ರಾನಿಂದ ಭಾರತ ಗೆಲ್ಲುವ ನೆಚ್ಚಿನ ತಂಡʼ: ಕ್ರಿಸ್ ಕೇರ್ನ್ಸ್ ದೊಡ್ಡ ಭವಿಷ್ಯ!

ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಕ್ರಿಸ್ ಕೇರ್ನ್ಸ್ ಶ್ಲಾಘಿಸಿದ್ದಾರೆ. ಬುಮ್ರಾ ತಂಡದಲ್ಲಿದ್ದರೆ ಆ ತಂಡವೇ ಗೆಲುವಿನ ಫೇವರಿಟ್ ಆಗಿರುತ್ತದೆ ಎಂದಿರುವ ಅವರು, ಆಧುನಿಕ ಕ್ರಿಕೆಟ್‌ನಲ್ಲಿ ನೈಜ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳ ಕೊರತೆಗೆ ಟಿ20 ಕ್ರಿಕೆಟ್ ಕಾರಣ ಎಂದಿದ್ದಾರೆ.

ಜಸ್‌ಪ್ರೀತ್‌ ಬುಮ್ರಾನಿಂದ ಭಾರತ ಗೆಲ್ಲುವ ನೆಚ್ಚಿನ ತಂಡ: ಕ್ರಿಸ್ ಕೇರ್ನ್ಸ್

ಜಸ್‌ಪ್ರೀತ್‌ ಬುಮ್ರಾನಿಂದ ಭಾರತ ಗೆಲ್ಲುವ ನೆಚ್ಚಿನ ತಂಡ ಎಂದ ಕ್ರಿಸ್‌ ಕ್ರೈನ್ಸ್‌. -

Profile
Ramesh Kote Nov 27, 2026 11:16 PM

ಕ್ರೈಸ್ಟ್‌ಚರ್ಚ್: ಟೀಮ್ ಇಂಡಿಯಾದ ವೇಗದ ಬೌಲಿಂಗ್ ಅಸ್ತ್ರ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರನ್ನು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಕ್ರಿಸ್ ಕೇರ್ನ್ಸ್ (Chris Cairns) ಮುಕ್ತಕಂಠದಿಂದ ಹೊಗಳಿದ್ದಾರೆ. ಬುಮ್ರಾ ಯಾವುದೇ ತಂಡದಲ್ಲಿದ್ದರೂ ಆ ತಂಡ ಗೆಲುವಿನ ಫೇವರಿಟ್ ಆಗಿರುತ್ತದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರಮುಖ ವ್ಯತ್ಯಾಸವೇ ಬುಮ್ರಾ ಎಂದು ಕೇರ್ನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ವಿಜೇತರನ್ನು ನಿರ್ಧರಿಸಲಿರುವ ಕ್ರೈಸ್ಟ್‌ಚರ್ಚ್ ಟೆಸ್ಟ್ ಪಂದ್ಯ ನಡೆಯುತ್ತಿರುವ ನಡುವೆಯೇ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೇರ್ನ್ಸ್ ಈ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್ ತಂಡ, ಆಟಗಾರರಿಂದ ಆಟಗಾರರನ್ನು ಹೋಲಿಸಿದರೆ ಭಾರತಕ್ಕಿಂತ ಉತ್ತಮವಾಗಿದೆ ಎಂದು ಕೇರ್ನ್ಸ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಬುಮ್ರಾ ಅವರ ಉಪಸ್ಥಿತಿಯೇ ಎರಡೂ ತಂಡಗಳ ನಡುವಿನ ಪ್ರಮುಖ ವ್ಯತ್ಯಾಸ ಎಂದು ಅವರು ಹೇಳಿದ್ದಾರೆ.

ʻನನಗೆ ಸಿಕ್ಕಿರುವುದರ ಬಗ್ಗೆ ಖುಷಿಯಾಗಿದ್ದೇನೆʼ: ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಕಾರಣ ತಿಳಿಸಿದ ಮೊಹಮ್ಮದ್‌ ಶಮಿ!

“ನನ್ನ ಪ್ರಕಾರ, ಸದ್ಯದ ನ್ಯೂಜಿಲೆಂಡ್ ತಂಡ ಆಟಗಾರರ ಸಾಮರ್ಥ್ಯವನ್ನು ಹೋಲಿಸಿದರೆ ಭಾರತಕ್ಕಿಂತ ಉತ್ತಮವಾಗಿದೆ. ಆದರೆ ನಿಮ್ಮ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ ಇದ್ದಾರೆ ಎಂಬುದನ್ನು ಮರೆಯಬಾರದು. ಯಾವುದೇ ತಂಡದಲ್ಲಿದ್ದರೂ ಬುಮ್ರಾ ಆ ತಂಡದ ಪಾಲಿಗೆ ನಿರ್ಣಾಯಕ ಆಟಗಾರ. ಅವರು ನಿಮ್ಮ ತಂಡದಲ್ಲಿದ್ದರೆ, ಆ ತಂಡ ಯಾವಾಗಲೂ ಗೆಲುವಿನ ಫೇವರಿಟ್ ಆಗಿರುತ್ತದೆ. ಬುಮ್ರಾ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು,” ಎಂದು ಕೇರ್ನ್ಸ್ ತಿಳಿಸಿದ್ದಾರೆ.

1989ರಿಂದ 2006ರವರೆಗೆ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಕೇರ್ನ್ಸ್, ತಮ್ಮ ವೃತ್ತಿಜೀವನದಲ್ಲಿ 8,273 ರನ್ ಗಳಿಸಿದ್ದು, ಒಂಬತ್ತು ಶತಕಗಳನ್ನು ದಾಖಲಿಸಿದ್ದಾರೆ. ಬೌಲಿಂಗ್‌ನಲ್ಲಿ 420 ವಿಕೆಟ್‌ಗಳನ್ನು ಪಡೆದಿರುವ ಅವರು, 14 ಬಾರಿ ಐದು ವಿಕೆಟ್‌ಗಳ ಸಾಧನೆ ಹಾಗೂ ಒಂದು ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2000ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನ್ಯೂಜಿಲೆಂಡ್ ತಂಡದ ಭಾಗವಾಗಿದ್ದರು.

IND vs NZ: ಮೊಹಮ್ಮದ್‌ ಸಿರಾಜ್‌ಗೆ ಕೊಕ್‌ ನೀಡಿದ ಗಂಭೀರ್‌ ವಿರುದ್ಧ ಆರ್‌ ಅಶ್ವಿನ್‌ ಗುಡುಗು!

ಬುಮ್ರಾ ಅವರ ಅದ್ಭುತ ಬೌಲಿಂಗ್ ದಾಖಲೆ

ಭಾರತ ಪರ ಇದುವರೆಗೆ 245 ಪಂದ್ಯಗಳಲ್ಲಿ 516 ವಿಕೆಟ್‌ಗಳನ್ನು ಪಡೆದಿರುವ ಜಸ್‌ಪ್ರೀತ್ ಬುಮ್ರಾ, ದೇಶದ ಯಶಸ್ವಿ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 54 ಪಂದ್ಯಗಳಿಂದ 20.09ರ ಸರಾಸರಿಯಲ್ಲಿ 239 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಅವಧಿಯಲ್ಲಿ 16 ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದಾರೆ.

ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ಬೌಲಿಂಗ್‌ ಶೈಲಿ ಬದಲಾಯಿಸಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ ಜಸ್ಪ್ರೀತ್ ಬುಮ್ರಾ

ವೇಗದ ಬೌಲಿಂಗ್ ಆಲ್‌ರೌಂಡರ್‌ಗಳ ಕೊರತೆಗೆ ಟಿ20 ಕ್ರಿಕೆಟ್ ಕಾರಣ?

ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತಮ್ಮ ತಲೆಮಾರಿನ ಕೊನೆಯ ನೈಜ ವೇಗದ ಬೌಲಿಂಗ್ ಆಲ್‌ರೌಂಡರ್ ಎಂದು ಕೇರ್ನ್ಸ್ ಬಣ್ಣಿಸಿದ್ದಾರೆ.

“ವೇಗದ ಬೌಲಿಂಗ್ ಆಲ್‌ರೌಂಡರ್‌ಗಳ ಬಗ್ಗೆ ಹೇಳುವುದಾದರೆ, ಬೆನ್ ಸ್ಟೋಕ್ಸ್ ಬಹುಶಃ ಕೊನೆಯ ಆಟಗಾರ. ಹಾರ್ದಿಕ್ ಪಾಂಡ್ಯ ಕೂಡ ಇದ್ದಾರೆ. ಆದರೆ ಸ್ಟೋಕ್ಸ್ ಹಿಂದಿನ ತಲೆಮಾರಿನ ಸಾಂಪ್ರದಾಯಿಕ ಆಲ್‌ರೌಂಡರ್‌ಗಳ ಮಾದರಿಗೆ ಹೆಚ್ಚು ಹತ್ತಿರವಾಗಿದ್ದರು,” ಎಂದಿದ್ದಾರೆ.

“ನಾನು ಆಂಡ್ರ್ಯೂ ಫ್ಲಿಂಟಾಫ್, ಜಾಕ್ ಕಾಲಿಸ್, ಶಾನ್ ಪೊಲಾಕ್ ಮತ್ತು ಲ್ಯಾನ್ಸ್ ಕ್ಲೂಸ್ನರ್ ಅವರೊಂದಿಗೆ ಆಡುತ್ತಿದ್ದ ಕಾಲದಲ್ಲಿ ಆಲ್‌ರೌಂಡರ್‌ಗಳ ಆಟದ ಶೈಲಿಯೇ ವಿಭಿನ್ನವಾಗಿತ್ತು. ಈಗ ಅಂತಹ ಆಟಗಾರರನ್ನು ಹೆಚ್ಚಾಗಿ ಕಾಣಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳೇ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಇದು ಟಿ20 ಮತ್ತು ಏಕದಿನ ಕ್ರಿಕೆಟ್‌ನ ಬೆಳವಣಿಗೆಯ ಒಂದು ಭಾಗ ಎಂದು ನಾನು ಭಾವಿಸುತ್ತೇನೆ,” ಎಂದು ಕೇರ್ನ್ಸ್ ತಿಳಿಸಿದ್ದಾರೆ.