ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hubballi News: ಮಕ್ಕಳಿಗೆ ಮೊದಲು ಉತ್ತಮ ಸಂಸ್ಕಾರ ಕಲಿಸಬೇಕು: ಬಸವರಾಜ ಹೊರಟ್ಟಿ

ಹುಬ್ಬಳ್ಳಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ರೇಣುಕಾ ಏಜೆನ್ಸಿ ಹಾಗೂ ನ್ಯೂರೇಯ್ಸ್ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಶಿಕ್ಷಕರ ಸಮಾವೇಶ, ನಗೆ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿಧಾನ ಪರಿಷತ್‌ ಮಾಜಿ ಸಭಾಪತಿ ಮತ್ತು ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರು ಮಾತನಾಡಿದ್ದಾರೆ.

ಮಕ್ಕಳಿಗೆ ಮೊದಲು ಉತ್ತಮ ಸಂಸ್ಕಾರ ಕಲಿಸಬೇಕು: ಬಸವರಾಜ ಹೊರಟ್ಟಿ

-

Prabhakara R
Prabhakara R Nov 23, 2026 9:16 PM

ಹುಬ್ಬಳ್ಳಿ: ಶಿಕ್ಷಕರು ಮಾನಸಿಕವಾಗಿ ನೆಮ್ಮದಿಯಿಂದ ಇದ್ದರೆ ಮಾತ್ರ ಉತ್ತಮವಾಗಿ ಪಾಠ ಮಾಡಲು ಸಾಧ್ಯ. ಮಕ್ಕಳಿಗೆ ಮೊದಲು ಉತ್ತಮ ಸಂಸ್ಕಾರ ಕಲಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಮತ್ತು ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ (Basavaraj Horatti) ಅವರು ಹೇಳಿದರು.

ಹುಬ್ಬಳ್ಳಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ರೇಣುಕಾ ಏಜೆನ್ಸಿ ಹಾಗೂ ನ್ಯೂರೇಯ್ಸ್ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ಸಮಾವೇಶ, ನಗೆ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Hubballi News  (1)

ʼಕಪ್ಪು ಹಲಗೆ ಆಚೆʼ ಕುರಿತು ಉಪನ್ಯಾಸ ನೀಡಿದ ಶಿಕ್ಷಣ ತಜ್ಞ ಪ್ರವೀಣ ಗುಡಿ ಅವರು, ಶಿಕ್ಷಕರ ನಡುವೆ ಸಂಪರ್ಕ, ಕಲಿಕಾ ಸುಧಾರಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ಶಿಕ್ಷಕರ ಮೇಲೆ ಎಂದಿಗಿಂತಲೂ ಇಂದು ಮಹತ್ವದ ಜವಾಬ್ದಾರಿ ಇದೆ. ಆಧುನಿಕತೆ ಬೆಳೆದಂತೆ ಶಿಕ್ಷಣದ ವ್ಯವಸ್ಥೆ ಸಹ ಬದಲಾಗುತ್ತದೆ. ಇದಕ್ಕೆ ಪೂರಕವಾಗಿ ಶಿಕ್ಷಕರು ಉತ್ತಮ ಸಂವಾದ, ಸಂವಹನ ಬೆಳೆಸಿಕೊಳ್ಳಬೇಕು ಎಂದರು.

ಹುಬ್ಬಳ್ಳಿ ಪಿರಾಮಿಡ್ ಧ್ಯಾನ ಕೇಂದ್ರದ ಪಿರಾಮಿಡ್ ತರಬೇತುದಾರರಾದ ವಿಶಾಲಾಕ್ಷಿ ಆಕಳವಾಡಿ 'ಧ್ಯಾನ ತರಬೇತಿ ಮತ್ತು ಸಮಾಲೋಚನೆ' ಕುರಿತು ಉಪನ್ಯಾಸ ನೀಡಿದರು.

Hubballi News

ನಂತರ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹಾಗೂ ತಂಡದಿಂದ ನಗೆ ಹಬ್ಬ ಜರುಗಿತು. ಕಾರ್ಯಕ್ರಮದಲ್ಲಿ ಚೇತನ ಪಬ್ಲಿಕ್ ಶಾಲೆ ಚೇರ್ಮನ್ ಮಹೇಶ ದ್ಯಾವಪ್ಪನವರ, ಉದ್ಯಮಿ ರಮೇಶಕುಮಾರ ಭಾಪಣಾ, ಶಿಕ್ಷಣ ತಜ್ಞರು, ಶಿಕ್ಷಕರು ಭಾಗವಹಿಸಿದ್ದರು.