ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KGID: ಕೆಜಿಐಡಿ ಪಾಲಿಸಿ ಮೆಚ್ಯೂರಿಟಿ ವಯಸ್ಸನ್ನು 60 ವರ್ಷಕ್ಕೆ ಹೆಚ್ಚಿಸುವ ಕುರಿತು ಚರ್ಚೆ

ಅನಿವಾರ್ಯ ಸಂದರ್ಭಗಳಲ್ಲಿ ನೌಕರರ ವೇತನ ವಿಳಂಬವಾದಾಗ ಸಾಲದ ಕಂತು ಮತ್ತು ಮಾಸಿಕ ಪ್ರೀಮಿಯಂ ಕಂತಿನ ಮೇಲೆ 6 ತಿಂಗಳವರೆಗೆ ಬಡ್ಡಿ ವಿಧಿಸದೇ ಇರಲು, ಕೆ.ಜಿ.ಐ.ಡಿ. ಪಾಲಿಸಿಗಳ ಮೆಚ್ಯೂರಿಟಿ ವಯಸ್ಸನ್ನು 55 ವರ್ಷಗಳಿಂದ 60 ವರ್ಷಕ್ಕೆ ಹೆಚ್ಚಿಸುವ ಕುರಿತು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕಿ ಶೋಭಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

ಕೆಜಿಐಡಿ ಪಾಲಿಸಿ ಮೆಚ್ಯೂರಿಟಿ ವಯಸ್ಸನ್ನು 60 ವರ್ಷಕ್ಕೆ ಹೆಚ್ಚಿಸಲು ಚರ್ಚೆ

-

Ramesh Ballamoole
Ramesh Ballamoole Jun 19, 2025 5:08 PM

ಬೆಂಗಳೂರು: ಅನಿವಾರ್ಯ ಸಂದರ್ಭಗಳಲ್ಲಿ ನೌಕರರ ವೇತನ ವಿಳಂಬವಾದಾಗ ಸಾಲದ ಕಂತು ಮತ್ತು ಮಾಸಿಕ ಪ್ರೀಮಿಯಂ ಕಂತಿನ ಮೇಲೆ 6 ತಿಂಗಳವರೆಗೆ ಬಡ್ಡಿ ವಿಧಿಸದೇ ಇರಲು ಕೆ.ಜಿ.ಐ.ಡಿ. (ಕರ್ನಾಟಕ ಸರ್ಕಾರಿ ವಿಮಾ ಇಲಾಖೆ) ಇಲಾಖೆಯ ನಿರ್ದೇಶಕಿ ಶೋಭಾ (Shobha) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗದ ಜತೆ ಈ ಬಗ್ಗೆ ಚರ್ಚೆ ನಡೆಸಲಾಯಿತು.

ಕೆ.ಜಿ.ಐ.ಡಿ. ಇಲಾಖೆಯ (KGID) ಆಡಳಿತಾತ್ಮಕ ವಿಷಯಗಳಲ್ಲಿ ಸುಧಾರಣೆ ತರಲು ಷಡಾಕ್ಷರಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಈ ಕೆಳಗಿನ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಈ ಸುದ್ದಿಯನ್ನೂ ಓದಿ: Laxmi Hebbalkar: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಪರಿಷ್ಕರಣೆ ಇಲ್ಲ- ಲಕ್ಷ್ಮೀ ಹೆಬ್ಬಾಳ್ಕರ್

  • ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ತೊಂದರೆ ಮತ್ತು ಅನುದಾನದ ಕೊರತೆಯಿಂದ ನೌಕರರ ವೇತನ ವಿಳಂಬವಾದಾಗ ಸಾಲದ ಕಂತು ಮತ್ತು ಮಾಸಿಕ ಪ್ರೀಮಿಯಂ ಕಂತಿನ ಹಣದ ಮೇಲೆ ಬಡ್ಡಿ ವಿಧಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಯಾವುದೇ ಬಡ್ಡಿಯನ್ನು 6 ತಿಂಗಳವರೆಗೆ ವಿಧಿಸದೆ ವಿನಾಯಿತು ನೀಡುವುದು.
  • ಕೆ.ಜಿ.ಐ.ಡಿ. ಪಾಲಿಸಿಗಳ ಮೆಚ್ಯೂರಿಟಿ ವಯಸ್ಸನ್ನು 55 ವರ್ಷಗಳಿಂದ 60 ವರ್ಷಕ್ಕೆ ಹೆಚ್ಚಿಸುವುದು.
  • 2020ನೇ ಮಾರ್ಚ್‌ವರೆಗೆ ಬೋನಸ್‌ ನೀಡಲಾಗಿದ್ದು, 2021ರಿಂದ 2024ರವರೆಗಿನ ಬೋನಸ್‌ ಶೀರ್ಘದಲ್ಲೇ ನೀಡುವುದು.
  • ನಿಗಮ-ಮಂಡಳಿ-ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಕೆ.ಜಿ.ಐ.ಡಿ. ಮಾಸಿಕ ವಂತಿಕೆ ಹಣವನ್ನು ಆನ್‌ಲೈನ್‌ ಮೂಲಕ ಪಾವತಿಸಲು ಕ್ರಮ ಕೈಗೊಳ್ಳುವುದು.
  • ಕೆ.ಜಿ.ಐ.ಡಿ. ಸಾಲದ ಕಂತು ಮತ್ತು ಪ್ರೀಮಿಯಂ ಕಂತುಗಳ ಹಣ ಪಾವತಿ ಮತ್ತು ಉಳಿತಾಯದ ಬಗ್ಗೆ ಎಲ್ಲ ನೌಕರರಿಗೆ ಪ್ರತೀ ತಿಂಗಳು ಮೊಬೈಲ್‌ ಸಂದೇಶ ರವಾನಿಸಲು ಕ್ರಮ ಕೈಗೊಳ್ಳುವುದು.

ಈ ಬಗ್ಗೆ ಚರ್ಚಿಸಿ ಕೆ.ಜಿ.ಐ.ಡಿ. ಇಲಾಖೆಯ ನಿಯಮಗಳಲ್ಲಿ ತಿದ್ದಪಡಿ ತರುವುದಾಗಿ ಶೋಭಾ ಭರವಸೆ ನೀಡಿದ್ದಾರೆ.