ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿ ಗದಗದ ಛಬ್ಬಿ ಸರ್ಕಾರಿ ಶಾಲಾ ಕಟ್ಟಡ; ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವ ಮಕ್ಕಳು

Gadag News: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಆತಂಕದಲ್ಲಿಯೇ ಮಕ್ಕಳು ಶಿಕ್ಷಣ‌ ಪಡೆಯುಂತಹ ದುಸ್ಥಿತಿ ನಿರ್ಮಾಣವಾಗಿದೆ. ಯಾವಾಗ ಏನಾಗತ್ತೋ ಎನ್ನುವ ಭಯ ಶಿಕ್ಷಕರು, ವಿದ್ಯಾರ್ಥಿಗಳಿಗೆ ಕಾಡುತ್ತಿದೆ.

ಶಿಥಿಲಗೊಂಡ ಛಬ್ಬಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಕಟ್ಟಡ

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ -

Profile
Siddalinga Swamy Nov 28, 2026 3:40 PM

ಗದಗ, ನ. 28: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಆತಂಕದಲ್ಲಿಯೇ ಮಕ್ಕಳು ಶಿಕ್ಷಣ‌ ಪಡೆಯುವ, ಶಿಕ್ಷಕರು ಪಾಠ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಶಿಥಿಲಾವಸ್ಥೆಗೆ ತಪಿದ ಸರ್ಕಾರಿ ಶಾಲೆಯ ಕಟ್ಟಡದಲ್ಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಬೋಧನೆ‌ ಮಾಡುತ್ತಿದ್ದು, ಯಾವಾಗ ಏನಾಗತ್ತೋ ಅನ್ನುವ ಭಯ ಕಾಡುತ್ತಿದೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದ ಸರ್ಕಾರಿ ಶಾಲೆಯೇ ಅವರ ಪಾಲಿನ ಅಪಾಯದ ತಾಣವಾಗಿ‌ ಬದಲಾಗಿದ್ದು ವಿಪರ್ಯಾಸ. ಈ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸೇರಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗೋಡೆಗಳಲ್ಲಿ ಬಿರುಕು, ಉದುರಿ ಬೀಳ್ತಿರೋ ಚಾವಣಿಯು ಯಾವಾಗ ಕುಸಿದು ಬೀಳುತ್ತೋ ಅನ್ನೋ ಆತಂಕ ಮನೆ ಮಾಡಿದೆ.

ಶಾಲೆಯ ದುಸ್ಥಿತಿ:



10 ಕೊಠಡಿಗಳಲ್ಲಿ 4 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಮಳೆಗಾಲದಲ್ಲಂತೂ ಶಾಲೆಯ‌ ಸ್ಥಿತಿ ಹೇಳಲಾಗದು. ಮಳೆ ಬಂದರೆ ಸಾಕು ಕೊಠಡಿಗಳು ಸಂಪೂರ್ಣವಾಗಿ ಸೋರುತ್ತವೆ. ಜೀವ ಭಯದಲ್ಲೇ ಮಕ್ಕಳು ಶಿಕ್ಷಣ ಪಡೆಯುವಂತಾಗಿದೆ. ಶಾಲೆಯ ದುಸ್ಥಿತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

Chhabbi Village Government School

ಸರಿಯಾದ ರಸ್ತೆ ಇಲ್ಲ

ಗ್ರಾಮದಲ್ಲಿಯೇ ನೂತನ ಪ್ರೌಢಶಾಲಾ ಕಟ್ಟಡ ಇದೆ. ಆದರೆ ಅದಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲದ‌, ಸ್ಮಶಾನದ ಮಧ್ಯೆಯೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇರುವ ಕಾರಣ ಗ್ರಾಮದಲ್ಲಿನ ಶಿಥಿಲಗೊಂಡ ಕಟ್ಟಡದಲ್ಲಿ ಪಾಠ ಭೋದನೆ‌ ನಡೆದಿದೆ. ನಮಗೆ ಸುರಕ್ಷಿತ ಶಾಲೆ ಕೊಡಿ ಇಲ್ಲ ಹೊಸ‌ ಪ್ರೌಢ ಶಾಲೆ ಕಟ್ಟಡಕ್ಕೆ ಪರ್ಯಾಯ ದಾರಿ ಮಾಡಿ ಮೂಲ ಸೌಲಭ್ಯ ಒದಗಿಸಿ ಕೊಡಿ ಎಂದು ವಿದ್ಯಾರ್ಥಿನಿ ಜಯಶ್ರೀ ಚಕ್ರಸಾಲಿ ಆಗ್ರಹಿಸಿದ್ದಾಳೆ.

Chhabbi Village Government High School

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹೈಸ್ಕೂಲ್ ಕಟ್ಟಡಕ್ಕೆ ಸರಿಯಾದ ರಸ್ತೆ ಇಲ್ಲ, ಮೂಲಸೌಕರ್ಯಗಳಿಂದ‌ ವಂಚಿತವಾದ ಗ್ರಾಮದ ಮಕ್ಕಳು ನಿತ್ಯ ಭಯದಲ್ಲಿ‌ ಶಿಥಿಲಗೊಂಡ ಶಾಲೆಗೆ ತೆರಳಬೇಕಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.