ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hand grenade: ಬೆಂಗಳೂರಿನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ, ವ್ಯಕ್ತಿ ವಶಕ್ಕೆ

Hand grenade: ಬೆಂಗಳೂರು ನಗರದ ಸಂಪೀಗೆಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಹ್ಯಾಂಡ್‌ ಗ್ರೆನೇಡ್‌ ಪತ್ತೆಯಾಗಿದ್ದು, ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹ್ಯಾಂಡ್ ಗ್ರೆನೇಡ್ ಅನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ, ವ್ಯಕ್ತಿ ವಶಕ್ಕೆ

Profile Prabhakara R Mar 21, 2025 1:52 PM

ಬೆಂಗಳೂರು: ನಗರದ ಸಂಪೀಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹ್ಯಾಂಡ್ ಗ್ರೆನೇಡ್ (Hand grenade) ಪತ್ತೆಯಾಗಿದ್ದು, ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂಪಿಗೆಹಳ್ಳಿ ಬಳಿಯ ಬೆಳ್ಳಳ್ಳಿಯ ಅಬ್ದುಲ್ ರೆಹಮಾನ್ ಮನೆಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಸ್ಫೋಟಕವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹ್ಯಾಂಡ್ ಗ್ರೆನೇಡ್ ಅನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವಿಚಾರಣೆ ವೇಳೆ ಅಬ್ದುಲ್ ರೆಹಮಾನ್, ಬಾಂಬ್ ಮಾದರಿಯ ವಸ್ತು ರಸ್ತೆಯಲ್ಲಿ ಸಿಕ್ಕಿತ್ತು ಎಂದು ಹೇಳಿದ್ದಾನೆ.

ಬೆಂಗಳೂರಿನಲ್ಲಿ ಆರೆಸ್ಟ್‌ ಆದ ಪಾಕಿಸ್ತಾನಿ ಗೂಢಚರ ಯಾರಿವನು?

ಬೆಂಗಳೂರು: ಪಾಕಿಸ್ತಾನಕ್ಕೆ ಭಾರತದ ರಕ್ಷಣಾ ಮಾಹಿತಿಗಳನ್ನು ಗೂಢಚಾರಿಕೆ ಮಾಡುತ್ತಿದ್ದ ವ್ಯಕ್ತಿ (pakistanspy) ನಿನ್ನೆ ಬೆಂಗಳೂರಿನಲ್ಲಿ (bengaluru) ಆರೆಸ್ಟ್‌ (Arrest) ಆಗಿದ್ದು, ಆತನ ವಿವರಗಳು ಹಾಗೂ ಆತ ಹೇಗೆ ಕಾರ್ಯ ನಿರ್ವಹಿಸುತ್ತಿದ್ದ ಎಂಬ ವಿವರಗಳು ದೊರೆತಿವೆ. ಭಾರತ್​ ಎಲೆಕ್ರ್ಟಾನಿಕ್ಸ್​ ಲಿಮಿಟೆಡ್​​ನಲ್ಲಿ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೀಪರಾಜ್ ಚಂದ್ರನ್​ ಎಂಬ ವ್ಯಕ್ತಿಯೇ ಆರೋಪಿಯಾಗಿದ್ದು, ಕೇಂದ್ರ, ರಾಜ್ಯ ಹಾಗೂ ಗುಪ್ತಚರ ದಳಗಳು ಜಂಟಿ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಿವೆ. ಈತ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನ ಪಾಕಿಸ್ತಾನಕ್ಕೆ ಬಿಟ್​ ಕಾಯಿನ್ ವಿನಿಮಯದೊಂದಿಗೆ ರವಾನೆ ಮಾಡುತ್ತಿದ್ದ ಎಂದು ಹೇಳಲಾಗಿದೆ.

36 ವರ್ಷದ ಆರೋಪಿ ದೀಪರಾಜ್ ಚಂದ್ರನ್ ಉತ್ತರಪ್ರದೇಶದ ಘಾಜಿಯಾಬಾದ್​ನವನು ಎಂದು ತಿಳಿದು ಬಂದಿದೆ. ಭಾರತ್​ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ನ ಪಿಡಿಸಿಐನಲ್ಲಿ ಹಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಾದ ಪ್ರೊಡಕ್ಷನ್ ಸಿಸ್ಟಮ್​, ಆಫೀಸ್​ ಲೇಔಟ್ಸ್​ ಮತ್ತು ಹಿರಿಯ ಸಿಬ್ಬಂದಿಗಳ ಬಗ್ಗೆ ಪಾಕಿಸ್ತಾನದ ಎಜೆಂಟ್​ರಿಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಲಾಗಿದೆ.

ಮಾಹಿತಿ ವಿನಿಮಯಕ್ಕಾಗಿ ಈತ ಇ-ಮೇಲ್, ವಾಟ್ಸ್ಯಾಪ್ ಮತ್ತು ಟೆಲಿಗ್ರಾಮ್​ನಂತಹ ಆ್ಯಪ್​ಗಳನ್ನು ಮಾಹಿತಿ ವಿನಿಯಮಕ್ಕಾಗಿ ಬಳಸುತ್ತಿದ್ದ ಎಂದು ಹೇಳಲಾಗಿದೆ. ಈ ಮೂಲಕವೇ ಪಾಕಿಸ್ತಾನದ ಏಜೆನ್ಸಿಗಳಿಗೆ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದನಂತೆ. ತನಿಖೆ ಮಾಡುತ್ತಿರುವ ಅಧಿಕಾರಿಗಳು ಹಲವು ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಆತ ಅತ್ಯಂತ ರಹಸ್ಯವಾಗಿ ಇ-ಮೇಲ್​​ ಖಾತೆಯೊಂದಿಗೆ ಸಂವಹನ ನಡೆಸುತ್ತಿದ್ದ. ಸಾಕ್ಷಿಗಳು ಸಿಗದ ರೀತಿಯಲ್ಲಿ ತನ್ನ ಇ-ಮೇಲ್ ಅಕೌಂಟ್​ನ್ನು ವರ್ಗೀಕೃತ ಮಾಹಿತಿ ಹಂಚಿಕೆಯಾಗುವ ರೀತಿಯಲ್ಲಿ ವಿನ್ಯಾಸ ಮಾಡಿದ್ದ. ನೇರವಾಗಿ ಇ-ಮೇಲ್​ ಕಳಹಿಸದೆ, ಲಾಗಿನ್ ಕ್ರೆಡಿನ್ಷಿಯಲ್​ ಮೂಲಕ ಚಂದ್ರನ್​ ಪಾಕಿಸ್ತಾನಕ್ಕೆ ಇ-ಮೇಲ್ ಮೂಲಕ ಮಾಹಿತಿಗಳನ್ನು ಕಳುಹಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗೆ ಕಳುಹಿಸಿದ ಇ-ಮೇಲ್​ಗಳ ಡಾಟಾ ಡ್ರಾಫ್ಟ್​​ನಲ್ಲಿ ಕಾಣಿಸಿಕೊಂಡಿವೆ.

ಇದನ್ನೂ ಓದಿ: ​​Pakistan Spy Arrest: ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಅಧಿಕಾರಿಗಳು ವ್ಯಕ್ತಪಡಿಸಿದ ಸಂಶಯದ ಪ್ರಕಾರ ಚಂದ್ರನ್ ಪ್ರಮುಖವಾಗಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ, ರಾಷ್ಟ್ರೀಯ ಭದ್ರತಾ ವಿಚಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನಿ ಎಂಜೆಂಟರೊಂದಿಗೆ ಹಂಚಿಕೊಳ್ಳುತ್ತಿದ್ದನಂತೆ. ಭಾರತೀಯ ಗುಪ್ತಚರ ಇಲಾಖೆ ಸದ್ಯ ಚಂದ್ರನ್​ನ ಡಿಜಿಟಲ್ ಟ್ರಾನ್ಸಾಕ್ಷನ್ ಹಾಗೂ ಪಾಕ್ ಏಜೆನ್ಸಿಯೊಂದಿಗೆ ಮಾಹಿತಿ ಹಂಚಿಕೆಗಾಗಿ ಬಳಸಿದ ಆ್ಯಪ್​​ಗಳ ಪರಿಶೀಲನೆಗೆ ಇಳಿದಿದೆ. ಚಂದ್ರನ್​ನ ಜೊತೆ ಇನ್ನು ಯಾರೆಲ್ಲಾ ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದನ್ನು ಕೂಡ ವಿಚಾರಣೆ ಮಾಡುತ್ತಿದ್ದಾರೆ.