ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾವೇರಿಯಲ್ಲಿ ಕುರಿಗಾಹಿಗಳ ಕಷ್ಟ-ಸುಖ ಆಲಿಸಿದ ಸಿಎಂ ಡಿಕೆಶಿ; ಕುರಿಮರಿ ಉಡುಗೊರೆ ನೀಡಿ, ಕಂಬಳಿ ಹೊದಿಸಿ ಗೌರವಿಸಿದ ಕುರುಬ ಸಮಾಜ

‌ಹಾವೇರಿಯಲ್ಲಿ ಕುರಿಗಾಹಿಗಳೊಂದಿಗೆ ಕೆಲಕಾಲ ಬೆರೆತ ಸಿಎಂ ಡಿ.ಕೆ.ಶಿವಕುಮಾರ್ ಅವರು, ಅವರ ಜೀವನಶೈಲಿ, ಕುರಿ ಸಾಕಾಣಿಕೆಯಲ್ಲಿನ ಸವಾಲುಗಳು, ಆರ್ಥಿಕ ಸಂಕಷ್ಟಗಳು ಹಾಗೂ ವೃತ್ತಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆಸಕ್ತಿಯಿಂದ ವಿಚಾರಿಸಿದರು. ಕುರಿಗಾಹಿಗಳ ಕಷ್ಟ-ಸುಖಗಳನ್ನು ಆಲಿಸಿ, ಅವರ ಅಹವಾಲುಗಳನ್ನು ಸ್ವೀಕರಿಸಿದರು.

ಹಾವೇರಿಯಲ್ಲಿ ಕುರಿಗಾಹಿಗಳ ಕಷ್ಟ-ಸುಖ ಆಲಿಸಿದ ಸಿಎಂ ಡಿ.ಕೆ.ಶಿವಕುಮಾರ್

-

Prabhakara R
Prabhakara R Nov 27, 2026 6:14 PM

ಹಾವೇರಿ: ರಾಜಕೀಯ ಒತ್ತಡ, ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಗ್ರಾಮೀಣ ಜನರೊಂದಿಗೆ ಆತ್ಮೀಯವಾಗಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸುವ ಕ್ಷಣಗಳು ಜನಮನದಲ್ಲಿ ವಿಶೇಷ ಸ್ಥಾನ ಪಡೆಯುತ್ತವೆ. ಇದಕ್ಕೆ ಸಾಕ್ಷಿಯೆಂಬಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಹಾವೇರಿ ಜಿಲ್ಲೆಯ ಕಾಗಿನೆಲೆಗೆ ತೆರಳುವ ಮಾರ್ಗಮಧ್ಯೆ ಕುರುಬ ಸಮುದಾಯದ ಕುರಿಗಾಹಿಗಳೊಂದಿಗೆ ಆತ್ಮೀಯವಾಗಿ ಸಮಯ ಕಳೆದರು.

ಕುರಿಗಾಹಿಗಳೊಂದಿಗೆ ಕೆಲಕಾಲ ಬೆರೆತ ಅವರು, ಅವರ ಜೀವನಶೈಲಿ, ಕುರಿ ಸಾಕಾಣಿಕೆಯಲ್ಲಿನ ಸವಾಲುಗಳು, ಆರ್ಥಿಕ ಸಂಕಷ್ಟಗಳು ಹಾಗೂ ವೃತ್ತಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆಸಕ್ತಿಯಿಂದ ವಿಚಾರಿಸಿದರು. ಕುರಿಗಾಹಿಗಳ ಕಷ್ಟ-ಸುಖಗಳನ್ನು ಆಲಿಸಿ, ಅವರ ಅಹವಾಲುಗಳನ್ನು ಸ್ವೀಕರಿಸಿದರು.

DK Shivakumar (2)

ಈ ಸಂದರ್ಭದಲ್ಲಿ ಕುರಿಗಾಹಿಗಳು ಮುಖ್ಯಮಂತ್ರಿ ಅವರಿಗೆ ಪ್ರೀತಿಯ ಸಂಕೇತವಾಗಿ ಕುರಿಮರಿಯನ್ನು ಉಡುಗೊರೆಯಾಗಿ ನೀಡಿ, ಸಾಂಪ್ರದಾಯಿಕ ಕಂಬಳಿ ಹೊದಿಸಿ ಗೌರವಿಸಿದ್ದು ವಿಶೇಷ ಗಮನ ಸೆಳೆಯಿತು. ಅಧಿಕಾರದ ಸ್ಥಾನದಲ್ಲಿರುವ ನಾಯಕರು ಗ್ರಾಮೀಣ ಜನರ ನಡುವೆ ಸಾಮಾನ್ಯರಂತೆ ಬೆರೆತು ಅವರ ನೋವು-ನಲಿವು ಆಲಿಸಿದ ಈ ಕ್ಷಣ ಆತ್ಮೀಯತೆಗೆ ಸಾಕ್ಷಿಯಾಯಿತು.

DK Shivakumar (3)

ಈ ಸಂದರ್ಭದಲ್ಲಿ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ಬಸವರಾಜ ನೀಲಪ್ಪ ಶಿವಣ್ಣನವರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕುರಿಗಾಹಿಗಳ ಬದುಕಿನ ಕಷ್ಟಗಳಿಗೆ ಕಿವಿಯಾದ ನಾಯಕನ ಈ ಆತ್ಮೀಯ ನಡೆ ಗ್ರಾಮೀಣ ಜನರ ಗಮನ ಸೆಳೆಯಿತು.