ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾವೇರಿಯಲ್ಲಿ ಕನಕದಾಸರ 8.5 ಅಡಿ ಎತ್ತರದ ಕಂಚಿನ ಮೂರ್ತಿ ಅನಾವರಣಗೊಳಿಸಿದ ಸಿಎಂ ಡಿಕೆಶಿ

Haveri News: ಹಾವೇರಿ ನಗರದ ಕನಕ ವೃತ್ತದಲ್ಲಿ ಸ್ಥಾಪಿಸಿರುವ ಕನಕದಾಸರ 8.5 ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನಾವರಣಗೊಳಿಸಿದರು. ಬಳಿಕ ಕಾಗಿನೆಲೆಗೆ ತೆರಳುವ ಮಾರ್ಗ ಮಧ್ಯೆ ಸಂಚಾರಿ ಕುರುಗಾಹಿಗಳನ್ನು ಭೇಟಿಯಾಗಿ, ಅವರ ಸಮಸ್ಯೆಗಳನ್ನು ಆಲಿಸಿದರು.

ಹಾವೇರಿಯಲ್ಲಿ ಕನಕದಾಸರ ಕಂಚಿನ ಮೂರ್ತಿ ಅನಾವರಣಗೊಳಿಸಿದ ಸಿಎಂ

-

Profile
Siddalinga Swamy Nov 27, 2026 4:48 PM

ಹಾವೇರಿ, ನ.27: ಹಾವೇರಿ ನಗರದ ಕನಕ ವೃತ್ತದಲ್ಲಿ ಸ್ಥಾಪಿಸಿರುವ ಕನಕದಾಸರ 8.5 ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

CM DKS

ಸಂಚಾರಿ ಕುರಿಗಾಹಿಗರ ಸಮಸ್ಯೆ ಆಲಿಸಿದ ಸಿಎಂ

ಕನಕದಾಸರ ಮೂರ್ತಿ ಅನಾವರಣದ ಬಳಿಕ ಕಾಗಿನೆಲೆಗೆ ತೆರಳುವ ಮಾರ್ಗ ಮಧ್ಯೆ ಸಂಚಾರಿ ಕುರಿಗಾಹಿಗಳನ್ನು ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್‌, ಅವರ ಕುಂದು-ಕೊರತೆ ಆಲಿಸಿದರು. ಕುರಿಗಾಹಿಗಳು ನೀಡಿದ ಕುರಿ ಹಾಲನ್ನು ಸೇವಿಸಿ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದ ಅವರು, ಕುರಿಗಾರರ ಜೀವನಶೈಲಿ ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ತಿಂಗಳಿಗೆ ಎಷ್ಟು ಅಕ್ಕಿ ಬೇಕಾಗುತ್ತದೆ, ಎಷ್ಟು ದಿನಗಳಿಗೊಮ್ಮೆ ಮನೆಗೆ ಮರಳುತ್ತೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.

ಆಶಾ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆ ಎನ್‌ಡಿಎ ನಾಯಕರಿಗಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

ಕುರಿಗಳು ಮೃತಪಟ್ಟರೆ ಪರಿಹಾರ ನೀಡುವಂತೆ ಕುರಿಗಾರರು ಮನವಿ ಮಾಡಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಎಂ ನೀಡಿದರು. ಅಲ್ಲದೆ, ಕುರಿಗಳ ಕಳ್ಳತನ ಹೆಚ್ಚಾಗುತ್ತಿರುವುದನ್ನು ಕುರಿಗಾರರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಕಳ್ಳರ ಹಾವಳಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.