ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಬಿಗ್ ಬಾಸ್ʼ ಮನೆಯಲ್ಲಿ ಕಿಡಿ ಹೊತ್ತಿಸಿದ ಕಳಪೆ ಪಟ್ಟ; ಬಾತ್‌ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕ್ಯಾಪ್ಟನ್ ಸೌಂದರ್ಯ ಶೆಟ್ಟಿ!

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರದ ‘ಕಳಪೆ’ ಪಟ್ಟದ ಆಯ್ಕೆ ಭಾರಿ ವಾಗ್ವಾದ ಹಾಗೂ ಕಣ್ಣೀರಿಗೆ ಸಾಕ್ಷಿಯಾಗಿದೆ. ಕೆಲಸದ ಹಂಚಿಕೆ ವಿಚಾರವಾಗಿ ಕ್ಯಾಪ್ಟನ್ ಸೌಂದರ್ಯ ಶೆಟ್ಟಿ ವಿರುದ್ಧ ಜಗದೀಶ್, ಕಿರಣ್ ಶಾಸ್ತ್ರಿ ಹಾಗೂ ಗಗನ್ ಚಿನ್ನಪ್ಪ ತಿರುಗಿಬಿದ್ದು ಕಳಪೆ ಪಟ್ಟ ನೀಡಿದ್ದಾರೆ.

ಶೆಟ್ಟಿ ಡಾನ್‌ಗೆ ‘ಕಳಪೆ’ ಪಟ್ಟ! ಬಾತ್‌ರೂಮ್‌ನಲ್ಲಿ ಕಣ್ಣೀರಿಟ್ಟ ಸ್ಪರ್ಧಿ!

-

Avinash GR
Avinash GR Nov 27, 2026 5:38 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ವಾರದ ‘ಕಳಪೆ’ ಪ್ರಕ್ರಿಯೆ ದೊಡ್ಡ ಮಟ್ಟದ ವಾಗ್ವಾದ ಹಾಗೂ ಕಣ್ಣೀರಿಗೆ ಕಾರಣವಾಗಿದೆ. ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಸೌಂದರ್ಯ ಶೆಟ್ಟಿ ಅವರ ಹೆಸರನ್ನೇ ಬಹುತೇಕ ಸ್ಪರ್ಧಿಗಳು ಕಳಪೆ ಪಟ್ಟಕ್ಕೆ ಸೂಚಿಸಿದ್ದು, ಇದನ್ನು ಸ್ವೀಕರಿಸಲಾಗದೆ ಸೌಂದರ್ಯ ಕಣ್ಣೀರಿಟ್ಟಿದ್ದಾರೆ.

ಅಂದು ಗಾನವಿ ಈಗ ಸೌಂದರ್ಯ

ಕೆಲವು ವಾರಗಳಿಂದ ಸ್ಥಗಿತಗೊಂಡಿದ್ದ ಕಳಪೆ ಪ್ರಕ್ರಿಯೆಗೆ ಕಳೆದ ವಾರವಷ್ಟೇ ಮರುಚಾಲನೆ ಸಿಕ್ಕಿತ್ತು. ಕಳೆದ ವಾರ ‘ಮಹಾರಾಣಿ’ ಪಟ್ಟದ ವಿಚಾರದಲ್ಲಿ ಸೌಂದರ್ಯ ಶೆಟ್ಟಿ, ಗಾನವಿ ಗೌಡ ಹಾಗೂ ಆಸಿಯಾ ಫಿರ್ದೋಸ್ ಈ ಮೂವರಿಗೂ ಕಳಪೆ ಪಟ್ಟ ನೀಡಬೇಕೆಂದು ಕಿರಣ್ ಶಾಸ್ತ್ರಿ ಪಟ್ಟು ಹಿಡಿದಿದ್ದರು. ಆಟದಲ್ಲಿ ನಡೆದುಕೊಂಡ ರೀತಿಗೆ ಮೊದಲು ಸೌಂದರ್ಯ ಅವರಿಗೆ ಕಳಪೆ ಪಟ್ಟ ಸಿಕ್ಕಿತ್ತು.

ಬಳಿಕ ಮನೆಯವರ ಒಮ್ಮತದ ಮೇರೆಗೆ ಮೂವರು ಯುವರಾಣಿಯರು ಜೈಲು ಸೇರಿದ್ದರು. ಆ ಸಂದರ್ಭದಲ್ಲಿ ಮಹಾರಾಣಿ ಪಟ್ಟದ ಸಂಭ್ರಮದಲ್ಲಿದ್ದ ಗಾನವಿ ಗೌಡ ಕೂಡ ಕಳಪೆ ಪಟ್ಟಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಜೈಲಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದೀಗ ಕ್ಯಾಪ್ಟನ್ ಸೌಂದರ್ಯ ಶೆಟ್ಟಿ ಅವರಿಗೂ ಅಂತಹದ್ದೇ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ.

ಸೌಂದರ್ಯ ವಿರುದ್ಧ ಜಗ್ಗ-ಕಿರಣ್

ಕ್ಯಾಪ್ಟನ್ಸಿ ರೇಸ್‌ನ ಅಂತಿಮ ಸುತ್ತಿನಲ್ಲಿ ಕಿರಣ್ ಶಾಸ್ತ್ರಿ ಅವರನ್ನು ಮಣಿಸಿ ಸೌಂದರ್ಯ ಶೆಟ್ಟಿ ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಆದರೆ, ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮನೆಯ ಕೆಲಸಗಳ ಹಂಚಿಕೆ ವಿಚಾರವಾಗಿ ಮನೆಯಲ್ಲಿ ಭಾರಿ ಗಲಾಟೆ ಶುರುವಾಗಿತ್ತು. ಜಗದೀಶ್ ಅವರಿಗೆ ಕಿಚನ್ ಸ್ಲ್ಯಾಬ್ ಸ್ವಚ್ಛಗೊಳಿಸಲು ಹಾಗೂ ಕಿರಣ್ ಶಾಸ್ತ್ರಿ ಅವರಿಗೆ ಪಾತ್ರೆ ತೊಳೆಯಲು ಸೌಂದರ್ಯ ಸೂಚಿಸಿದ್ದರು. ಆದರೆ, ಸೌಂದರ್ಯ ಅವರು ಆದೇಶ ನೀಡಿದ ರೀತಿಯನ್ನು ತೀವ್ರವಾಗಿ ಖಂಡಿಸಿದ ಜಗದೀಶ್ ಮತ್ತು ಕಿರಣ್ ಶಾಸ್ತ್ರಿ ಕ್ಯಾಪ್ಟನ್ ವಿರುದ್ಧವೇ ತಿರುಗಿಬಿದ್ದಿದ್ದರು.

BBK 13 Elimination: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಸೋನಿಕಾ ಗೌಡ ಎಲಿಮಿನೇಟ್; ಅರ್ಧದಲ್ಲೇ ಆಟ ಮುಗಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿಗೆ ಸಿಕ್ಕ ನಗದು ಬಹುಮಾನ ಎಷ್ಟು?

ಬಾತ್‌ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ

ಇದರ ಮುಂದುವರಿದ ಭಾಗವಾಗಿ ನಡೆದ ಕಳಪೆ ಪ್ರಕ್ರಿಯೆಯಲ್ಲಿ, "ಸೌಂದರ್ಯ ತಾವೂ ಸರಿಯಾಗಿ ಕೆಲಸ ಮಾಡುವುದಿಲ್ಲ, ಜೊತೆಗೆ ಇತರರಿಗೆ ಕೆಲಸ ಹೇಳುವ ರೀತಿಯೂ ಸರಿಯಿಲ್ಲ" ಎಂಬ ಕಾರಣ ನೀಡಿ ಗಗನ್ ಚಿನ್ನಪ್ಪ, ಜಗದೀಶ್ ಮತ್ತು ಕಿರಣ್ ಶಾಸ್ತ್ರಿ ಅವರು ಸೌಂದರ್ಯ ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ. ಸಹಸ್ಪರ್ಧಿಗಳ ಈ ನಿರ್ಧಾರ ಮತ್ತು ಆರೋಪಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಸೌಂದರ್ಯ, "ನಾನು ಇದನ್ನು ತೆಗೆದುಕೊಳ್ಳುವುದಿಲ್ಲ" ಎಂದು ಪ್ರಕ್ರಿಯೆಯ ಮಧ್ಯದಿಂದಲೇ ಎದ್ದು ಹೋಗಿದ್ದಾರೆ. ಬಳಿಕ ಬಾತ್‌ರೂಮ್‌ಗೆ ತೆರಳಿ ಗೋಳೋ ಎಂದು ಅತ್ತಿದ್ದಾರೆ.

ಈಗ ಓಡಿಹೋಗಿದ್ದೇಕೆ?

ಸೌಂದರ್ಯ ಅವರ ಈ ನಡೆಗೆ ಮನೆಯ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. "ನಾವು ಇಲ್ಲಿ ಕೆಲಸವಿಲ್ಲದೆ ಸುಮ್ಮನೆ ಕೂತಿದ್ದೀವಾ?" ಎಂದು ಗಾನವಿ ಗೌಡ ಪ್ರಶ್ನಿಸಿದರೆ, "ಅಂದು ‘ಉತ್ತಮ’ ಪದಕ ಹಾಕಿಕೊಂಡು ಸಂಭ್ರಮದಿಂದ ಓಡಿಹೋದಳಲ್ಲ, ಈಗ ‘ಕಳಪೆ’ ಪಟ್ಟವನ್ನು ತೆಗೆದುಕೊಳ್ಳಲು ಆಗುವುದಿಲ್ಲವಾ?" ಎಂದು ಜಗ್ಗ ಖಾರವಾಗಿ ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಕ್ಯಾಪ್ಟನ್ ಸೌಂದರ್ಯ ಶೆಟ್ಟಿ ಅವರ ಕಳಪೆ ಪಟ್ಟದ ವಿಚಾರ ಬಿಗ್ ಬಾಸ್ ಮನೆಯಲ್ಲಿ ಹೊಸ ಕಿಚ್ಚು ಹೊತ್ತಿಸಿದೆ.