ಹಾವೇರಿಯ ಮೆಡಿಕಲ್ ವಿದ್ಯಾರ್ಥಿನಿಯ ಬಾಳಿಗೆ ಬೆಳಕಾದ ಶ್ರೀ ಗುರು ರಾಘವೇಂದ್ರ ಸ್ವಾಮಿ; ಚೇತರಿಸಿಕೊಂಡ ಕೋಮಾದಲ್ಲಿದ್ದ ವಿದ್ಯಾರ್ಥಿನಿ
Haveri News: ಏಳು ತಿಂಗಳನಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಹಾವೇರಿಯ ಮೆಡಿಕಲ್ ವಿದ್ಯಾರ್ಥಿನಿಗೆ ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕೃಪಾಶೀರ್ವಾದ ದೊರೆತಿದೆ. ಹೌದು, ಪಿಟ್ಸ್ ಬಂದು ನಡೆಯಲು ಬಾರದೆ ಕೋಮಾದಲ್ಲಿದ್ದ ಮೆಡಿಕಲ್ ವಿದ್ಯಾರ್ಥಿನಿಯ ಬಾಳಲ್ಲಿ ಬೆಳಕು ಮೂಡಿದೆ.
ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿ ನಿವೇದಿತಾ ನೆಗಳೂರು. -
ಹಾವೇರಿ, ಆ. 15: ಏಳು ತಿಂಗಳನಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಹಾವೇರಿಯ ಮೆಡಿಕಲ್ ವಿದ್ಯಾರ್ಥಿನಿಗೆ ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕೃಪಾಶೀರ್ವಾದ ದೊರೆತಿದೆ. ಪಿಟ್ಸ್ ಬಂದು ನಡೆಯಲು ಬಾರದೆ ಕೋಮಾದಲ್ಲಿದ್ದ ಮೆಡಿಕಲ್ ವಿದ್ಯಾರ್ಥಿನಿಯ ಬಾಳಲ್ಲಿ ಬೆಳಕು ಮೂಡಿದೆ. ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿ ನಿವೇದಿತಾ ನೆಗಳೂರು ಅಂತಿಮ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಆದರೆ ಅನಾರೋಗ್ಯಕ್ಕೆ ಒಳಗಾಗಿ ನಡೆಯಲೂ ಸಾಧ್ಯವಾಗದೆ ಕೋಮಾದಲ್ಲಿದ್ದರು. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 21 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಶ್ರೀ ಗುರು ರಾಯರ ಮಠಕ್ಕೆ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಗಮಿಸಿದ್ದ ವೇಳೆ ಕುಟುಂಬದವರು ವಿದ್ಯಾರ್ಥಿನಿ ನಿವೇದಿತಾ ನೆಗಳೂರು ಅವರನ್ನು ಕರೆತಂದಿದ್ದರು. ಆ ವೇಳೆ ಶ್ರೀಗಳು, ಆ ಯುವತಿಗೆ 5 ವಾರಗಳಲ್ಲಿ ಅನುಗ್ರಹ ಆಗುತ್ತದೆ ಎಂದು ಆಶೀರ್ವಾದ ಮಾಡಿದ್ದರು. ಅದರಂತೆ 3 ವಾರದಲ್ಲೇ ವಿದ್ಯಾರ್ಥಿನಿ ಚೇತರಿಸಿಕೊಂಡಿದ್ದು, ಎದ್ದು ಓಡಾಡುತ್ತಿರುವುದರನ್ನು ಕಂಡು ಇದು ರಾಯರ ಪವಾಡ ಎಂದು ಕುಂಟುಬಸ್ಥರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ನಿವೇದಿತಾ ನೆಗಳೂರು ಕೂಡ ಖಂಡಿತ ರಾಯರಿದ್ದಾರೆ ಎಂದು ಹೇಳಿದ್ದಾರೆ.
ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಇದೀಗ ಅನಾರೋಗ್ಯದಿಂದ ಗುಣಮುಖರಾದ ವಿದ್ಯಾರ್ಥಿನಿ ನಿವೇದಿತಾ ನೆಗಳೂರು ಅವರಿಗೆ ಕರೆ ಮಾಡಿ, ʼʼಎಲ್ಲರಿಗೂ ಶುಭವಾಗಲಿ, ರಾಯರ ಮಹಿಮೆ ಅಪಾರ. ನಂಬಿದ ಭಕ್ತರನ್ನು ರಾಯರು ಅನುಗ್ರಹ ಮಾಡುತ್ತಾರೆ. ರಾಯರ ಅನುಗ್ರಹ ನಿಮಗಾಗಿದೆ. ಎಲ್ಲವೂ ಒಳ್ಳೆಯದಾಗಲಿ, ಶುಭವಾಗಲಿʼʼ ಎಂದು ಆಶೀರ್ವದಿಸಿದ್ದಾರೆ.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಹಾಗೂ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದದಿಂದ ನಾನು ಗುಣಮುಖವಾಗಿದ್ದೇನೆ ಎಂದು ವಿದ್ಯಾರ್ಥಿನಿ ನಿವೇದಿತಾ ನೆಗಳೂರು ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.