ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

D.S. Malagi: ಆದಿ ಜಾಂಬವ ಸಮಾಜದ ಹಿರಿಯ ಮುಖಂಡ ಡಿ.ಎಸ್. ಮಾಳಗಿ ನಿಧನ

ಸವಣೂರು ತಾಲ್ಲೂಕಿನ ತೇವರಮೆಳ್ಳಿಹಳ್ಳಿ ಗ್ರಾಮದವರಾದ ಡಿ.ಎಸ್. ಮಾಳಗಿ ಅವರು ಆದಿ ಜಾಂಬವ ಹಾಗೂ ಶೋಷಿತ ಸಮುದಾಯದ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರು. ರಾಜ್ಯ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಗತಿಗೆ ಒತ್ತು ನೀಡಿದ್ದರು

ಆದಿ ಜಾಂಬವ ಸಮಾಜದ ಹಿರಿಯ ಮುಖಂಡ ಡಿ.ಎಸ್. ಮಾಳಗಿ ನಿಧನ

-

Profile
Ashok Nayak Aug 15, 2026 2:20 PM

ಹಾವೇರಿ: ಜಿಲ್ಲೆಯ ಆದಿ ಜಾಂಬವ ಸಮಾಜದ ಹಿರಿಯ ಮುಖಂಡರು, ರಾಜ್ಯ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷರು ಹಾಗೂ ಶೋಷಿತ ಸಮುದಾಯದ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ದುರುಗಪ್ಪ ಎಸ್. ಮಾಳಗಿ ಅವರು ಶನಿವಾರ (ಆ.15) ಶಿಗ್ಗಾಂವ ತಾಲ್ಲೂಕಿನ ಗೋಟಗೋಡಿಯಲ್ಲಿ ನಿಧನರಾದರು.

ಗೋಟಗೋಡಿಯಲ್ಲಿ ತಾವು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಅವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸವಣೂರು ತಾಲ್ಲೂಕಿನ ತೇವರಮೆಳ್ಳಿಹಳ್ಳಿ ಗ್ರಾಮದವರಾದ ಡಿ.ಎಸ್. ಮಾಳಗಿ ಅವರು ಆದಿ ಜಾಂಬವ ಹಾಗೂ ಶೋಷಿತ ಸಮುದಾಯದ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರು. ರಾಜ್ಯ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಗತಿಗೆ ಒತ್ತು ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿಯೂ ಒಳ ಮೀಸಲಾತಿ ಸೇರಿದಂತೆ ಸಮುದಾಯಕ್ಕೆ ಸಂಬಂಧಿ ಸಿದ ವಿವಿಧ ವಿಚಾರಗಳಲ್ಲಿ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Haveri Rain: ಹಾವೇರಿ ಜಿಲ್ಲೆಯಾದ್ಯಂತ ಉತ್ತಮ ಮಳೆ; ಬರದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಸಂತಸ

ಶಿಕ್ಷಣವೇ ಶೋಷಿತ ಸಮುದಾಯದ ಅಭಿವೃದ್ಧಿಗೆ ಪ್ರಮುಖ ಸಾಧನ ಎಂಬ ಆಶಯದೊಂದಿಗೆ ಗೋಟಗೋಡಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಶೈಕ್ಷಣಿಕ ಅವಕಾಶ ಕಲ್ಪಿಸುವ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡಿದ್ದರು.

ಮಾಳಗಿ ಅವರ ಅಕಾಲಿಕ ನಿಧನದಿಂದ ಆದಿ ಜಾಂಬವ ಸಮಾಜದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ತೀವ್ರ ದುಃಖ ಆವರಿಸಿದೆ. ಸಮಾಜಕ್ಕಾಗಿ ಇನ್ನೂ ಹಲವು ಕಾರ್ಯ ಗಳನ್ನು ಮಾಡಬೇಕಿದ್ದ ಅವರು ಅಲ್ಪಾಯುಷ್ಯದಲ್ಲೇ ಅಗಲಿರುವುದು ಸಮುದಾಯಕ್ಕೆ ತುಂಬ ಲಾರದ ನಷ್ಟವಾಗಿದೆ ಎಂದು ವಿವಿಧ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಮಾಜ ಸೇವೆಯ ಮೂಲಕ ಶೋಷಿತ ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿದ್ದ ಡಿ.ಎಸ್. ಮಾಳಗಿ ಅವರ ನಿಧನ ಕುಟುಂಬ ವರ್ಗ, ಬಂಧು-ಬಳಗ, ಸ್ನೇಹಿತರು, ರಾಜಕೀಯ ಮುಖಂಡರು ಹಾಗೂ ಸರ್ವ ಸಮಾಜದ ಜನರಿಗೆ ನೋವುಂಟು ಮಾಡಿದೆ.

ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆದಿ ಜಾಂಬವ ಸಮಾಜದ ಮುಖಂಡರು, ಅಭಿಮಾನಿ ಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ದಿವಂಗತ ಡಿ.ಎಸ್. ಮಾಳಗಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.