ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಟ್ಟೆಯ ಹಣ ಕೇಳಿದ್ದಕ್ಕೆ ಅಂಗಡಿ ಮಾಲಕನ ಭೀಕರ ಕೊಲೆ; ಹಾವೇರಿಯಲ್ಲಿ ಮತ್ತೊಮ್ಮೆ ಹರಿದ ನೆತ್ತರು

Haveri News: ಮೊಟ್ಟೆಯ ಹಣ ಕೇಳಿದ್ದಕ್ಕೆ ಅಂಗಡಿ ಮಾಲಕನ ಕೊಲೆ ನಡೆದ ಭೀಕರ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಸಂಭವಿಸಿದೆ. ಮೃತರನ್ನು ಅಂಗಡಿ ಮಾಲಕ ಶಿವಾಜಿರಾವ್‌ ಭೈರೋಜಿಯವರ (60) ಎಂದು ಗುರುತಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.

ಮೊಟ್ಟೆಯ ಹಣ ಕೇಳಿದ್ದಕ್ಕೆ ಅಂಗಡಿ ಮಾಲಕನ ಭೀಕರ ಕೊಲೆ

ಶಿವಾಜಿರಾವ್‌ ಭೈರೋಜಿಯವರ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jul 2, 2026 12:18 PM

ಹಾವೇರಿ, ಜು. 2: ಮೊಟ್ಟೆಯ ಹಣ ಕೇಳಿದ್ದಕ್ಕೆ ಅಂಗಡಿ ಮಾಲಕನ ಕೊಲೆ ನಡೆದ ಭೀಕರ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಸಂಭವಿಸಿದೆ (Haveri News). ರಟ್ಟಿಹಳ್ಳಿ ಪಟ್ಟಣದ ಅಂಗಡಿ ಶೆಡ್‌ವೊಂದರಲ್ಲಿ ಬುಧವಾರ (ಜುಲೈ 2) ಸಂಜೆ ಮೊಟ್ಟೆಯನ್ನು ಖರೀದಿಸಿದವರ ಬಳಿ ಮಾಲಕ ಹಣವನ್ನು ಕೇಳಿದ್ದೇ ತಪ್ಪಾಯ್ತು (Crime News). ಗ್ರಾಹಕರು ಹಲ್ಲೆ ಮಾಡಿದ ಪರಿಣಾಮ ಅಂಗಡಿ ಮಾಲಕ ಶಿವಾಜಿರಾವ್‌ ಭೈರೋಜಿಯವರ (60) ಮೃತಪಟ್ಟಿದ್ದು, ಅವರ ಪುತ್ರ ಭರತ್‌ ಗಾಯಗೊಂಡಿದ್ದಾರೆ.

ತೀವ್ರ ಗಾಯಗೊಂಡ ಶಿವಾಜಿರಾವ ಭೈರೋಜಿಯವರ ಸ್ಥಳದಲ್ಲೇ ಅಸುನೀಗಿದ್ದಾರೆ. ಹಾನಗಲ್ಲ ತಾಲೂಕಿನ ನರೇಗಲ್ ಗಲಾಟೆ ಮಾಸುವ ಮುನ್ನವೆ ರಟ್ಟಿಹಳ್ಳಿ ಪಟ್ಟಣದಲ್ಲಿ ಮತ್ತೊಂದು ಘೋರ ಘಟನೆ ನಡೆದಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಘಟನೆ ವಿವರ

ಬುಧವಾರ ಶಿವಾಜಿರಾವ್‌ ಭೈರೋಜಿಯವರ ಅಂಗಡಿಗೆ ಮೊಟ್ಟೆ ಖರೀದಿಸಲು ಪಟ್ಟಣದ ನಿವಾಸಿಗಳಾದ ವಾಸೀಂ ವಜೀರಸಾಬ ಮುಲ್ಲಾ, ಸರ್ಫರಾಜ ವಜೀರಸಾಬ ಮುಲ್ಲಾ, ಸಾಧಿಕ ವಜೀರಸಾಬ ಮುಲ್ಲಾ ಮತ್ತು ಸಿರಾಜ್ ವಜೀರಸಾಬ ಮುಲ್ಲಾ ಆಗಮಿಸಿದ್ದರು. ಈ ವೇಳೆ ಶಿವಾಜಿರಾವ್‌ ಭೈರೋಜಿಯವರ ಮತ್ತು ಮಗ ಭರತ್ ಅಂಗಡಿಯಲ್ಲಿದ್ದರು. ಮೊಟ್ಟೆ ನೀಡಿದ ಬಳಿಕ ಅವರು ಹಣ ಕೇಳಿದ್ದಾರೆ. ಈ ವೇಳೆ ಜಗಳ ಶುರುವಾಗಿ ವಾಸೀಂ ವಜೀರಸಾಬ ಮುಲ್ಲಾ ಮತ್ತಿತರರು ತಂದೆ-ಮಗನ ಮೇಲೆ ಹಲ್ಲೆ ನಡೆಸಿದರು. ಪರಿಣಾಮ ಶಿವಾಜಿರಾವ್ ಭೈರೋಜಿಯವರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭರತ್ ಅವರಿಗೆ ಗಾಯವಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಕ್ರಮ ಸಂಬಂಧ ಶಂಕೆ; ಹಾವೇರಿಯಲ್ಲಿ ಅಕ್ಕನ ಕತ್ತು ಸೀಳಿ ಭೀಕರವಾಗಿ ಕೊಲೆಗೈದ ತಮ್ಮ

ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ರೈತನ ಕೈ ಕಟ್‌

ಜೂನ್‌ 29ರಂದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರ ಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಹೋರಿಗಳನ್ನು ಓಡಿಸುವ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಎರಡು ಕೋಮುಗಳ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರ ಕೈ ಕಡಿಯಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಈ ದುರ್ಘಟನೆ ನಡೆದಿದೆ.

ಕಾರ ಹುಣ್ಣಿಮೆ ಅಂಗವಾಗಿ ನರೇಗಲ್‌ ಗ್ರಾಮದಲ್ಲಿ ಪ್ರತಿ ವರ್ಷದಂತೆ ಜೂನ್‌ 29ರಂದು ಕೂಡ ಹೋರಿ ಓಡಿಸುವ ಕಾರ್ಯಕ್ರಮವಿತ್ತು. ಅದರಂತೆ ಮಧ್ಯಾಹ್ನ ರೈತರು ತಮ್ಮ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಗ್ರಾಮದ ಮಸೀದಿ ಬಳಿ ಪಟಾಕಿ ಸಿಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಷಾಸಾಬ ಗೌಂಡಿ ಎಂಬಾತ ‘ʼನಮ್ಮ ಮಸೀದಿ ಬಳಿ ಯಾಕೆ ಪಟಾಕಿ ಸಿಡಿಸುತ್ತೀರಾʼ’ ಎಂದು ಪ್ರಶ್ನಿಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಲೋಹಿತ್ ಜಯಪ್ಪ ಎಂಬಾತನನ್ನು ಅನ್ಯ ಕೋಮಿನವರು ಥಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಹಿಂದೂ ಯುವಕರ ಗುಂಪು ಪ್ರತಿದಾಳಿ ನಡೆಸಿತ್ತು.

ಘಟನೆಯಲ್ಲಿ ಇಬ್ಬರ ಕೈ ಕಡಿಯಲಾಗಿತ್ತು. ಗಾಯಗೊಂಡವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದಾಗಿ ನರೇಗಲ್ಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಒಟ್ಟು 26 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.