ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rain News: ಮಳೆ ಅಬ್ಬರಕ್ಕೆ ಕೊಚ್ಚಿಹೋದ ಹೆದ್ದಾರಿ, ಕುಮಟಾ- ಶಿರಸಿ ಸಂಪರ್ಕ ಬಂದ್

ಅಬ್ಬರದ ಮಳೆಯಿಂದ (Rain News) ಬೆಣ್ಣೆ ಹೊಳೆ ಹಳ್ಳದ ನೀರು ಹರಿದು ಬಂದು ಹೆದ್ದಾರಿಯ ಬದಿಯಲ್ಲಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆಯೂ ಸಂಪೂರ್ಣ ನಾಶವಾಗಿದೆ. ಇದರಿಂದ ಲಕ್ಷಾಂತರ ರೂಪಾಯ ನಷ್ಟವಾಗಿದೆ. ಹೆದ್ದಾರಿಯಲ್ಲಿ ಇದರಿಂದಾಗಿ ‌ಭಾರಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಶಿರಸಿ- ಕುಮಟಾ ನಡುವಿನ ವಾಹನ ಸಂಚಾರ ಅಸ್ತವ್ಯಸ್ತ ಆಗಿದೆ.

ಮಳೆ ಅಬ್ಬರಕ್ಕೆ ಕೊಚ್ಚಿಹೋದ ಹೆದ್ದಾರಿ, ಕುಮಟಾ- ಶಿರಸಿ ಸಂಪರ್ಕ ಬಂದ್

ಶಿರಸಿ- ಕುಮಟಾ ಹೆದ್ದಾರಿ

ಹರೀಶ್‌ ಕೇರ ಹರೀಶ್‌ ಕೇರ May 24, 2025 9:55 AM

ಕಾರವಾರ: ಅಬ್ಬರದ ಮಳೆಗೆ (Rain news) ದೇವಿಮನೆ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಯೇ (National highway) ಕೊಚ್ಚಿ ಹೋಗಿದ್ದು ಕುಮಟಾ – ಶಿರಸಿ (Kumta- Sirsi) ಸಂಪರ್ಕ ಕಡಿತಗೊಂಡಿದೆ. ಕಳೆದ ಒಂದು ವರ್ಷದಿಂದ ಇಲ್ಲಿ ರಾಷ್ಟ್ರೀಯ ಹೆದ್ದಾರಿ 766E ಕಾಮಗಾರಿ ನಡೆಯುತಿತ್ತು. ಶುಕ್ರವಾರ ಸುರಿದ ಭಾರೀ ಮಳೆಗೆ ರಸ್ತೆಯೇ ಕೊಚ್ಚಿಹೋಗಿದೆ. ತಾತ್ಕಾಲಿಕ ರಸ್ತೆ ಕೊಚ್ಚಿಹೋಗಿದ್ದರಿಂದ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಕುಮಟಾ ಮೂಲಕ ದೇವಿಮನೆ ಘಟ್ಟ ಭಾಗದಲ್ಲಿ ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.

ಅಬ್ಬರದ ಮಳೆಯಿಂದ ಬೆಣ್ಣೆ ಹೊಳೆ ಹಳ್ಳದ ನೀರು ಹರಿದು ಬಂದು ಹೆದ್ದಾರಿಯ ಬದಿಯಲ್ಲಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆಯೂ ಸಂಪೂರ್ಣ ನಾಶವಾಗಿದೆ. ಮಳೆಗೆ ನೆನೆದು ಒದ್ದೆಯಾದ ಮಣ್ಣು ರಸ್ತೆಯ ಮೇಲಿನ ಘಟ್ಟ ಪ್ರದೇಶದಿಂದ ಹರಿದುಬಂದಿರುವುದಲ್ಲದೆ, ಈಗಾಗಲೇ ನಡೆಸಿರುವ ಕಾಮಗಾರಿಯನ್ನೂ ಕೊಚ್ಚಿಕೊಂಡು ಹೋಗಿದೆ. ಇದರಿಂದ ಲಕ್ಷಾಂತರ ರೂಪಾಯ ನಷ್ಟವಾಗಿದೆ. ಹೆದ್ದಾರಿಯಲ್ಲಿ ಇದರಿಂದಾಗಿ ‌ಭಾರಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಶಿರಸಿ- ಕುಮಟಾ ನಡುವಿನ ವಾಹನ ಸಂಚಾರ ಅಸ್ತವ್ಯಸ್ತ ಆಗಿದೆ.

ಕೋಲಾರದಲ್ಲಿ ಕೋಟ್ಯಂತರ ಮೌಲ್ಯದ ಬೆಳೆ ಹಾನಿ

ಕೋಲಾರ: ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಕೋಲಾರದಲ್ಲಿ 1.21 ಕೋಟಿ ರೂ. ಮೌಲ್ಯದ ಬೆಳೆ (Crop) ನಾಶವಾಗಿದೆ. ಕಳೆದ ವಾರ ಸುರಿದ ಮಳೆಯಿಂದ ವಿಶ್ವ ಪ್ರಸಿದ್ಧ ಮಾವು ಹಾಗೂ ಬಾಳೆ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಒಟ್ಟು 304 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ 1 ಕೋಟಿ 21 ಲಕ್ಷ ರೂ.‌ ಮೌಲ್ಯದ ಬೆಳೆ ನಷ್ಟ ಆಗಿರುವ ಕುರಿತು ಅಂದಾಜು ಮಾಡಲಾಗಿದೆ. 200 ಹೆಕ್ಟೇರು ಮಾವು ಹಾಗೂ 104 ಹೆಕ್ಟೆರು ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಲಾರ (Kolar) ಹೊರವಲಯದ ಬಸವನತ್ತ ಬಳಿ ರೈತ (Farmers) ವಿಜಯ್ ಕುಮಾರ್ ಅವರಿಗೆ ಸೇರಿದ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹೂಕೋಸು ಮಳೆಯಿಂದ ಹಾಳಾಗಿದೆ. ಈಗ ಮೂರು ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, ರೈತರು ತಮ್ಮ ಹೊಲಗಳಿಗೆ ತೆರಳಿ, ನಾಶವಾದ ಬೆಳೆಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆಹಾನಿ ಬಗ್ಗೆ ವರದಿ ಸಲ್ಲಿಸಿದ್ದಾರೆ. ಈ ಮೂಲಕ ಸರ್ಕಾರದಿಂದ ರೈತರಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: Dengue Fever: ಬೆಂಗಳೂರಲ್ಲಿ ಮಳೆ ತಂದ ಆತಂಕ: ಡೆಂಘೀ, ಮಲೇರಿಯಾ, ವೈರಲ್‌ ಜ್ವರ ಹೆಚ್ಚಳ, ಜೊತೆಗೆ ಕೋವಿಡ್!