ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru News: ಮಹಿಳೆಯ ಫೋಟೊ ಮಾರ್ಫಿಂಗ್ ಮಾಡಿ ಅಶ್ಲೀಲ ವಿಡಿಯೊ ಹರಿಬಿಡುತ್ತಿದ್ದ ಆರೋಪಿ ಅರೆಸ್ಟ್

ವೈಯಕ್ತಿಕ ದ್ವೇಷದ ಕಾರಣ ಆರೋಪಿಯು ಮತ್ತೊಬ್ಬ ವ್ಯಕ್ತಿಯನ್ನು ಸಿಲುಕಿಸಲು ಹೋಗಿ ಅಪರಾಧ ಎಸಗಿದ್ದಾನೆ. ಮಹಿಳೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ಅವುಗಳನ್ನು ಮಾರ್ಫಿಂಗ್‌ ಮಾಡಿ, ಅಶ್ಲೀಲ ವಿಡಿಯೊಗಳಾಗಿ ರೂಪಿಸಿ ಹರಿಬಿಡುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಮಹಿಳೆಯ ಫೋಟೊ ಮಾರ್ಪಿಂಗ್ ಮಾಡಿ ಹರಿಬಿಟ್ಟ ಆರೋಪಿ ಅರೆಸ್ಟ್

ಬಂಧಿತ ಆರೋಪಿ ಕೃಷ್ಣ -

Prabhakara R
Prabhakara R Jan 19, 2026 10:22 PM

ಬೆಂಗಳೂರು: ಮಹಿಳೆಯ ಇನ್‌ಸ್ಟಾಗ್ರಾಮ್ ಫೋಟೊ, ವಿಡಿಯೊಗಳನ್ನು ಮಾರ್ಫಿಂಗ್ (Photo morphing) ಮಾಡಿ ನಗ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಆರೋಪಿಯನ್ನು ನಗರದಲ್ಲಿ (Bengaluru News) ಬಂಧಿಸಲಾಗಿದೆ. ಬಾಗಲೂರಿನ ಕೃಷ್ಣ ಬಂಧಿತ ಆರೋಪಿಯಾಗಿದ್ದಾನೆ. ವೈಯಕ್ತಿಕ ದ್ವೇಷದ ಕಾರಣ ಆರೋಪಿಯು ವೆಂಕಟೇಶ್‌ ಎಂಬಾತನನ್ನು ಸಿಲುಕಿಸಲು ಹೋಗಿ ಅಪರಾಧ ಎಸಗಿದ್ದಾನೆ.

ಸಂತ್ರಸ್ತ ಮಹಿಳೆಯೊಂದಿಗೆ ವೆಂಕಟೇಶ್ ಮಾತನಾಡಿದ್ದನ್ನು ತಿಳಿದು ಆಕ್ರೋಶಗೊಂಡಿದ್ದ ಕೃಷ್ಣ, ಮಹಿಳೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ಅವುಗಳನ್ನು ಮಾರ್ಫಿಂಗ್‌ ಮಾಡುತ್ತಿದ್ದ. ಎಡಿಟ್‌ ಮಾಡಿದ ಅಶ್ಲೀಲ ವಿಡಿಯೊಗಳನ್ನು ವೆಂಕಟೇಶ್ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆ ತೆರೆದು ಹರಿಬಿಟ್ಟಿದ್ದ. ಈ ಸಂಬಂಧ ಮಹಿಳೆ ದೂರು ನೀಡಿದ ನಂತರ ಆರೋಪಿ ಕೃಷ್ಣನನ್ನು ಬಂಧಿಸಲಾಗಿದೆ.

ಕೆಲಸಕ್ಕೆ ಹೋಗುವ ಯುವತಿಯರೊಂದಿಗೆ ಸ್ನೇಹ ಬೆಳೆಸಿ ಅವರ ಇನ್‌ಸ್ಟಾಗ್ರಾಂ ಖಾತೆಗೆ ಹೋಗಿ ಅವರ ಫೋಟೋ ಮತ್ತು ವಿಡಿಯೋಗಳನ್ನು ಕೃಷ್ಣ ಕದಿಯುತ್ತಿದ್ದ. ನಂತರ ಅವರು ಮುಖ ಮಾರ್ಫಿಂಗ್ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಯ ಮೊಬೈಲ್ ಫೋನ್ ಅನ್ನು ಪೊಲೀಸರು ಪರಿಶೀಲಿಸಿದಾಗ, ನೂರಾರು ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಇರುವುದು ತಿಳಿದುಬಂದಿದೆ. ಸದ್ಯ ಕೃಷ್ಣ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.