Kalaburagi News: ಹವಾ ಸೃಷ್ಟಿಸಲು ತಲ್ವಾರ್ ಹಿಡಿದು ವಿಡಿಯೊ ಮಾಡಿದ ಯುವಕರು; ನಾಲ್ವರ ವಿರುದ್ಧ ಕೇಸ್
Kalaburagi News: ತಲ್ವಾರ್ ಹಿಡಿದು ವಿಡಿಯೊ ಮಾಡಿದ ನಾಲ್ವರು ಯುವಕರ ವಿರುದ್ಧ ಕಲಬುರಗಿಯ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Prabhakara R
December 15, 2024
ಕಲಬುರಗಿ: ತಮ್ಮ ಏರಿಯಾದಲ್ಲಿ ಹವಾ ಸೃಷ್ಟಿಸಲು ತಲ್ವಾರ್ ಹಿಡಿದು ವಿಡಿಯೊ ಮಾಡಿದ ನಾಲ್ವರು ಯುವಕರ ವಿರುದ್ಧ ಇಲ್ಲಿನ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ (Kalaburagi News) ಪ್ರಕರಣ ದಾಖಲಾಗಿದೆ. ಚೂಪಾದ ತಲ್ವಾರ್ ಕೈಯಲ್ಲಿ ಹಿಡಿದು ಕೆಲವು ಯುವಕರು ಜೆ.ಆರ್ ನಗರದಲ್ಲಿ ಸಾರ್ವಜನಿಕರಿಗೆ ಬೆದರಿಸಿ, ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅಲ್ಲದೆ ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೊ ಹಾಕಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಸದ್ಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಪ್ರಕರಣದಲ್ಲೂ ಶಾಮೀಲಾಗಿರುವ ಮತ್ತು ಈಗಾಗಲೇ ಬೇರೊಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | ಬದುಕಿದೆಯಾ ಬಡಜೀವ! ರೈಲ್ವೆ ಹಳಿಗೆ ಬಂದಿದ್ದ 8 ಸಿಂಹಗಳ ಜೀವ ಉಳಿಸಿದ ಲೋಕೋ ಪೈಲಟ್‌ಗಳು
ಅತ್ಯಾಚಾರಕ್ಕೆ ಯತ್ನ; ನಿರಾಕರಿಸಿದ್ದಕ್ಕೆ ಸೊಸೆಯನ್ನೇ ಕೊಲೆಗೈದ ಮಾವ
ರಾಯಚೂರು: ಅತ್ಯಾಚಾರಕ್ಕೆ ನಿರಾಕರಿಸಿದ್ದಕ್ಕೆ ಸೊಸೆಯನ್ನೇ ಮಾವ ಬರ್ಬರವಾಗಿ ಕೊಲೆಗೈದಿರುವ ಘಟನೆ (Murder Case) ರಾಯಚೂರಿನ ಜುಲಮಗೇರಾ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ದುಳ್ಳಮ್ಮ (27) ಎಂದು ಗುರುತಿಸಲಾಗಿದೆ.
ಆರೋಪಿ ಈ ಮೊದಲು ಎರಡು ಮೂರು ಬಾರಿ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಗ್ರಾಮದ ಹಿರಿಯರು, ಕುಟುಂಬಸ್ಥರು ಆರೋಪಿ ರಾಮಲಿಂಗಯ್ಯಗೆ ಬೈದು ಬುದ್ಧಿ ಹೇಳಿದ್ದರು. ಆದರೂ ಈ ಬಾರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಸೊಸೆಯ ಮೇಲೆ ಅತ್ಯಾಚಾರ ಎಸಗಲು ಮಾವ ಮುಂದಾಗಿದ್ದ. ಈ ವೇಳೆ ಸೊಸೆ ನಿರಾಕರಿಸಿದ್ದರಿಂದ ಸಲಾಕೆಯಿಂದ ಆಕೆಯ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಘಟನೆ ಬಳಿಕ ಆರೋಪಿ ಗ್ರಾಮದಿಂದ ಪರಾರಿಯಾಗಿದ್ದಾನೆ. ಸದ್ಯ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.