ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಸಮಾಜ ಸೇವೆಯ ಮೂಲಕ ಕೆ.ವಿ.ನವೀನ್ ಕಿರಣ್ 48ನೇ ಹುಟ್ಟುಹಬ್ಬ ಆಚರಣೆ: ರಕ್ತದಾನದಿಂದ ಸಾವಿರಾರು ಜೀವಗಳಿಗೆ ನೆರವು; ವಾರವಿಡೀ ಜನಪರ ಕಾರ್ಯಕ್ರಮ

ರಕ್ತದಾನದಿಂದ ಸಾವಿರಾರು ಜೀವಗಳಿಗೆ ನೆರವು; ವಾರವಿಡೀ ಜನಪರ ಕಾರ್ಯಕ್ರಮ

ಕಳೆದ ಎರಡು ದಶಕಗಳಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ತುರ್ತು ಸಂದರ್ಭಗಳಲ್ಲಿ ಅನೇಕ ಜೀವಗಳ ರಕ್ಷಣೆಗೆ ನೆರವಾಗಿರುವ ಕೆ.ವಿ. ಹಾಗೂ ಪಂಚಗಿರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರ 48ನೇ ಹುಟ್ಟುಹಬ್ಬವನ್ನು ಈ ಬಾರಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ರೇಣುಕಾಸ್ವಾಮಿ ಕೊಲೆ ಕೇಸ್‌; ಮಾಫಿ ಸಾಕ್ಷಿ ಸಂಬಂಧ ನಟ ದರ್ಶನ್‌ ಸಲ್ಲಿಸಿದ್ದ ಎರಡು ಅರ್ಜಿಗಳು ವಜಾ

ರೇಣುಕಾಸ್ವಾಮಿ ಕೇಸ್‌; ನಟ ದರ್ಶನ್‌ ಸಲ್ಲಿಸಿದ್ದ ಎರಡು ಅರ್ಜಿಗಳು ವಜಾ

ಮಾಫಿ ಸಾಕ್ಷಿ ದಾಖಲು ವೇಳೆ ಮೊದಲ ದಿನ ಒಂದು ವಿಚಾರ ಹೇಳಲು ಮರೆತಿದ್ದೆ ಎಂದು ಪ್ರದೋಷ್ ಎರಡನೇ ದಿನ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಯನ್ನು ಮಾಫಿ ಸಾಕ್ಷಿಯಲ್ಲಿ ದಾಖಲು ಮಾಡಿಕೊಳ್ಳಬಾರದು ಎಂದು ದರ್ಶನ್‌ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಹಿಮನಾಡಿನ ಯಾಕ್ ಹಾಗೂ ಮರುಭೂಮಿಯ ಒಂಟೆ ಒಂದೇ ಸೂರಿನಡಿ: ಶಿರಸಿಯಲ್ಲಿ ವಿಸ್ಮಯ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್!

ಶಿರಸಿಯಲ್ಲಿ ವಿಸ್ಮಯ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್!

ಹಿಮಾಲಯದ ಅತಿ ಶೀತಲ ಪ್ರದೇಶದ ಯಾಕ್ ಪ್ರಾಣಿಗಳನ್ನು ದಕ್ಷಿಣ ಭಾರತಕ್ಕೆ ಕರೆತಂದು, ವರ್ಷದ ಮೂರೂ ಋತುಗಳನ್ನು ಯಶಸ್ವಿಯಾಗಿ ಕಳೆದು ಸುಮಾರು ಹತ್ತು ತಿಂಗಳಿನಿಂದ ಅವುಗಳನ್ನು ಕಾಪಾಡುತ್ತಿರುವುದರ ಜತೆಗೆ, ಇದೀಗ ಮರುಭೂಮಿಯ ಒಂಟೆಯನ್ನೂ ಅದೇ ಪರಿಸರದಲ್ಲಿ ಜೋಪಾನ ಮಾಡುತ್ತಿದ್ದಾರೆ ಶಿರಸಿಯ ಪ್ರಾಣಿ ಹಾಗೂ ಪಕ್ಷಿ ತಜ್ಞ ರಾಜೇಂದ್ರ ಬಿ. ಸಿರಸಿಕರ್. ಇವರ ಈ ಅಪರೂಪದ ಸಾಧನೆ ಗುರುತಿಸಿ ಪ್ರತಿಷ್ಠಿತ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಸಂಸ್ಥೆಯು 'IBR Achiever' ಗೌರವ ನೀಡಿ ಸನ್ಮಾನಿಸಿದೆ.

ಬೆಂಗಳೂರಿನಲ್ಲಿ ಅ.11ರಿಂದ 21ವರೆಗೆ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ 'ನವರಾತ್ರ ನಮಸ್ಯಾ' ಮಹೋತ್ಸವ

ಬೆಂಗಳೂರಿನಲ್ಲಿ ಅ.11 ರಿಂದ 'ನವರಾತ್ರ ನಮಸ್ಯಾ' ಮಹೋತ್ಸವ

ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನವರಾತ್ರಿ ವ್ರತವು 'ನವರಾತ್ರ ನಮಸ್ಯಾ' ಎಂಬ ಹೆಸರಿನೊಂದಿಗೆ ಅಕ್ಟೋಬರ್ 11 ರಿಂದ 21ವರೆಗೆ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.

Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಲಾರಿಗೆ ಕಾರು ಡಿಕ್ಕಿಯಾಗಿ ಮೂವರ ಸಾವು, ಟೈರ್‌ ಸ್ಫೋಟದಿಂದ ದುರಂತ!

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಲಾರಿಗೆ ಕಾರು ಡಿಕ್ಕಿಯಾಗಿ ಮೂವರ ಸಾವು!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಕೆ.ಆರ್. ಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಲಾರಿಯ ಟೈರ್ ದಿಢೀರನೆ ಸಿಡಿದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಗೆ ಹಿಂಬದಿ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶ್ರೀ ಸ್ವರ್ಣವಲ್ಲೀ ಉಭಯ ಶ್ರೀಗಳಿಂದ ಹಂಪಿ ಕ್ಷೇತ್ರ ಭೇಟಿ; ಶ್ರೀ ವಿರೂಪಾಕ್ಷೇಶ್ವರ ದರ್ಶನ ಹಾಗೂ ವಿಜಯನಗರದ ವೈಭವಾವಲೋಕನ

ಶ್ರೀ ಸ್ವರ್ಣವಲ್ಲೀ ಉಭಯ ಶ್ರೀಗಳಿಂದ ಹಂಪಿ ಕ್ಷೇತ್ರ ಭೇಟಿ

Vijayanagara News: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಅವರ ಕರಕಮಲ ಸಂಜಾತಾರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ ತಮ್ಮ ಶಿಷ್ಯರೊಂದಿಗೆ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರವಾದ ಹಂಪಿಗೆ ಭೇಟಿ ನೀಡಿ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ದಿವ್ಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ರ‍್ಯಾಪಿಡೋ ಸವಾರಿಯ ಜತೆ ಬೆಂಗಳೂರಿನಲ್ಲಿ ಹಾಲಿನ ಬ್ಯುಸಿನೆಸ್‌ಗೆ ಮಾರ್ಕೆಟಿಂಗ್ ರಿಸರ್ಚ್: ಒಡಿಶಾ ಯುವಕನ ವಿಶಿಷ್ಟ ಸಾಹಸ

ಡೇರಿ ವ್ಯವಹಾರಕ್ಕಾಗಿ ರ‍್ಯಾಪಿಡೋ ಓಡಿಸಲು ಮುಂದಾದ ಐಟಿ ಉದ್ಯೋಗಿ

Viral Video: ಒಡಿಶಾ ಮೂಲದ ಮಾಜಿ ಐಟಿ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ ಸ್ವಂತ ಹಾಲಿನ ಫಾರ್ಮ್ ಉದ್ಯಮವಾಗಿ ಬೆಳೆಸುವ ಯೋಜನೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು ರ‍್ಯಾಪಿಡೋ ಓಡಿಸುತ್ತ ಹಾಲಿನ ಉತ್ಪನ್ನಗಳ ಬಗ್ಗೆ ಮಾರ್ಕೆಟಿಂಗ್ ರಿಸರ್ಚ್ ಕೂಡ ಮಾಡುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಾನಸಿಕ ಒತ್ತಡ, ಆತಂಕ, ಭಯ ನಿರ್ಲಕ್ಷಿಸಬೇಡಿ: ವಿದ್ಯಾರ್ಥಿಗಳಿಗೆ ಶಿಕ್ಷಕಿ ಅಲೀನಾ ಜಾನ್ ಕರೆ

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪೋಸ್ಟರ್ ಎಕ್ಸಿಬಿಷನ್

World Mental Health Day: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಮನೋವಿಜ್ಞಾನ ವಿಭಾಗ ಹಾಗೂ ಕೌನ್ಸೆಲಿಂಗ್ ಸೆಲ್ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ‘ಪೋಸ್ಟರ್ ಎಕ್ಸಿಬಿಷನ್ʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Kalaburagi News: ಕಲಬುರಗಿಯಲ್ಲಿ ತಪ್ಪಿದ ಭಾರಿ ದುರಂತ; ತಾಂತ್ರಿಕ ದೋಷದಿಂದ ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ತಾಂತ್ರಿಕ ದೋಷ: ರೈತರ ಜಮೀನಿನಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ

Plane emergency landing in Kalaburagi: ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿಯ ಮಾಡಬೂಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

Chikkamagaluru Tragedy: ಚಿಕ್ಕಮಗಳೂರಿನಲ್ಲಿ ಘೋರ ಘಟನೆ; ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ದುರ್ಮರಣ

ಚಿಕ್ಕಮಗಳೂರಿನಲ್ಲಿ ಕೆರೆಗೆ ಈಜಲು ಹೋಗಿದ್ದ ಮೂವರು ಮಕ್ಕಳ ಸಾವು

ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಚಿಕ್ಕಕೆರೆಯಲ್ಲಿ ಘಟನೆ ನಡೆದಿದೆ. ದಸರಾ ರಜೆ ಇದ್ದ ಕಾರಣ ಮಕ್ಕಳು ಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಯಲ್ಲಿ ಬಟ್ಟೆ ಹಾಗೂ ಪಾತ್ರೆ ತೊಳೆಯಲು ಬಳಸುವ ಕಟ್ಟೆಯ ಬಳಿ ಮಕ್ಕಳು ಈಜಲು ಹೋಗಿದ್ದರು. ಈ ವೇಳೆ ಆಳವಾದ ಗುಂಡಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Yettinahole Project: ಎತ್ತಿನಹೊಳೆ 'ನಾಳೆ ಬಾ' ಯೋಜನೆ; ಚಿಕ್ಕಬಳ್ಳಾಪುರ, ಕೋಲಾರಕ್ಕೆ ಈ ಸರಕಾರದಿಂದ ನೀರು ಕೊಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಕಿಡಿ

ಎತ್ತಿನಹೊಳೆ ಯೋಜನೆಯಲ್ಲಿ ಈ ಸರಕಾರಕ್ಕೆ ನೀರು ಕೊಡಲು ಸಾಧ್ಯವಿಲ್ಲ

ಯೋಜನೆಯ ಪೈಪ್‌ಲೈನ್ ಹಾಕುವುದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನೀರು ಕೊಡಬೇಕಲ್ಲ? ನೀರು ಕೊಡಿಸುವುದಕ್ಕೆ ವ್ಯವಸ್ಥೆ ಮಾಡದೆ ಕೇವಲ ಪೈಪ್‌‌ಲೈನ್ ಹಾಕಿದರೆ ಅದು ದುಡ್ಡು ಹೊಡೆಯುವ ಕೆಲಸವಾಗುತ್ತದೆ ಅಷ್ಟೇ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ತರುತ್ತೇವೆ ಎಂದು ಹೇಳಿ ಆ ಭಾಗದ ಜನತೆಗೆ ದ್ರೋಹ ಬಗೆಯಬೇಡಿ, ದುಡ್ಡು ಹೊಡೆಯುವ ಕಾರ್ಯಕ್ರಮ ಮಾಡಬೇಡಿ ಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

Cabinet Meeting: ನೈಸರ್ಗಿಕ ವಿಕೋಪಗಳು, ತುರ್ತು ಪರಿಸ್ಥಿತಿ ಎದುರಿಸಲು ಸ್ವಯಂಸೇವಕರಿಗೆ ‘ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್ʼ; ಸಂಪುಟ ಒಪ್ಪಿಗೆ

ಸ್ವಯಂಸೇವಕರಿಗೆ ‘ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್ʼ; ಸಂಪುಟ ಒಪ್ಪಿಗೆ

Priyank Kharge: ಕೇಂದ್ರ ಪುರಸ್ಕೃತ "ಯುವ ಆಪದ್ ಮಿತ್ರ" ಯೋಜನೆಯಡಿ ಆಯ್ಕೆಯಾದ ಸ್ವಯಂಸೇವಕರಿಗೆ ರಕ್ಷಣಾ ಸಾಮಗ್ರಿಗಳನ್ನೊಳಗೊಂಡ ‘ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್ʼ ಖರೀದಿಸಲು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Cabinet Meeting: ಗ್ರಾಮೀಣ ಮಹಿಳೆಯರಿಗೆ ಮಿಶ್ರತಳಿ ಹಸು-ಸುಧಾರಿತ ಎಮ್ಮೆ ಖರೀದಿಸಲು ಪ್ರೋತ್ಸಾಹಧನ; ಸಂಪುಟ ಸಭೆಯಲ್ಲಿ ತೀರ್ಮಾನ

ಮಿಶ್ರತಳಿ ಹಸು-ಸುಧಾರಿತ ಎಮ್ಮೆ ಖರೀದಿಸಲು ಪ್ರೋತ್ಸಾಹಧನ; ಸಂಪುಟ ಅನುಮೋದನೆ

Priyank Kharge: ಸಣ್ಣ ಮತ್ತು ಅತಿ ಸಣ್ಣ ರೈತರು, ಭೂ ರಹಿತ ಮಹಿಳಾ ಕಾರ್ಮಿಕರಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಿ, ಹಾಲಿನ ಉತ್ಪಾದನೆ ಹೆಚ್ಚಿಸುವುದು ಹಾಗೂ ಅವರ ಕುಟುಂಬಕ್ಕೆ ನಿರಂತರ ಆದಾಯ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Cabinet Meeting: ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ-2022 ವಿಧೇಯಕ ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ

ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ

Criminal Law Amendment Bill-2022: ಕೇಂದ್ರದ ಹೊಸ ಕಾನೂನಿನಲ್ಲಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023) ಈಗಾಗಲೇ ಈ ಎಲ್ಲಾ ವಿಸ್ತೃತ ಅವಕಾಶಗಳಿರುವುದರಿಂದ, 'ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ, 2022' ಅನ್ನು ಮುಂದುವರಿಸುವ ಅಗತ್ಯವಿಲ್ಲವೆಂದು ಪರಿಗಣಿಸಿ, ಅದನ್ನು ಅಧಿಕೃತವಾಗಿ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲಾಗಿದೆ.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ  ಸಾಹುಕಾರ್ ಮನೆ ಮೇಲೆ ಇ.ಡಿ ಅಧಿಕಾರಿಗಳ ದಾಳಿ; ಬಂಧನ

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಬಂಧನ

Shivashankarappa Sahukar: ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಶಿವಶಂಕರಪ್ಪ ಅವರನ್ನು ವಿಚಾರಣೆ ನಡೆಸಿ ವಶಕ್ಕೆ ಪಡೆದರು.

Cabinet Meeting: ಬೆಂಗಳೂರು ಪೊಲೀಸ್ ವ್ಯವಸ್ಥೆಯ ಬೃಹತ್ ಪುನರ್‌ಸಂಘಟನೆಗೆ ಸಚಿವ ಸಂಪುಟ ಒಪ್ಪಿಗೆ; 5 ಪ್ರತ್ಯೇಕ ಕಮಿಷನರೇಟ್‌, 1,022 ಹೊಸ ಹುದ್ದೆ ಸೃಜನೆ

ಬೆಂಗಳೂರು ಪೊಲೀಸ್ ವ್ಯವಸ್ಥೆಯ ಬೃಹತ್ ಪುನರ್‌ಸಂಘಟನೆಗೆ ಸಂಪುಟ ಒಪ್ಪಿಗೆ

Bengaluru City Police Commissionerate: ಸದ್ಯ ಚಾಲ್ತಿಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಮುಖ್ಯ ಪೊಲೀಸ್ ಆಯುಕ್ತರ ಒಟ್ಟಾರೆ ಮೇಲ್ವಿಚಾರಣೆಯಡಿಯಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು (5) ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಿ ಪುನರ್ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Milk and Bus ticket Price Hike: ರಾಜ್ಯದಲ್ಲಿ ಹಾಲು ಮತ್ತು ಬಸ್‌ ಟಿಕೆಟ್‌ ದರ ಏರಿಕೆ ಫಿಕ್ಸ್; ದರ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ

ರಾಜ್ಯದಲ್ಲಿ ಹಾಲು, ಬಸ್‌ ಟಿಕೆಟ್‌ ದರ ಏರಿಕೆ ಫಿಕ್ಸ್; ಸಚಿವ ಸಂಪುಟ ಒಪ್ಪಿಗೆ

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ, ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ದರ ಏರಿಕೆ ನಿರ್ಧಾರವನ್ನು ತಕ್ಷಣವೇ ಪ್ರಕಟಿಸದೆ ಚುನಾವಣಾ ಆಯೋಗದ ಅನುಮತಿ ಪಡೆದ ಬಳಿಕ ಅಥವಾ ನೀತಿ ಸಂಹಿತೆ ಮುಕ್ತಾಯವಾಗುವ ಅಕ್ಟೋಬರ್ 27ರ ನಂತರ ಜಾರಿಗೊಳಿಸಲು ಸಚಿವ ಸಂಪುಟವು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದೆ.

ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ: ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ: ಸಿಎಂ

CM DK Shivakumar: ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ಯಾರಿಗೆ ಗೌರವ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಮಾತ್ರ ಅಪಾರವಾದ ಗೌರವವಿದೆ. ನಾನೂ ಕೂಡ ದೈವಭಕ್ತ. ನನ್ನ ಧರ್ಮದ ಮೇಲೆ ನನಗೆ ನಂಬಿಕೆಯಿದೆ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನಂಬಿರುವವನು ನಾನು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಹಾಗೂ ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿ ಹಾಗೂ ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ: ಸಿಎಂ

CM DK Shivakumar: ರಾಹುಲ್ ಗಾಂಧಿ ಅವರು ಜನರ ಉದ್ದೇಶಕ್ಕಾಗಿ ಹೋರಾಟ ಮಾಡುತ್ತಿದ್ದು, ದೇಶದ ಚುನಾವಣಾ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಿದ್ದಾರೆ. ಎಸ್ಐಆರ್ ವಿಚಾರ ನಮ್ಮ ವಿಚಾರವಲ್ಲ, ದೇಶದ ಜನರ ವಿಚಾರ. ವಿರೋಧ ಪಕ್ಷದ ನಾಯಕರಾಗಿ, ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟ ಪಕ್ಷದ ನಾಯಕರಾಗಿ ಪ್ರತಿಭಟನೆ ಮಾಡುವ ಹಕ್ಕು ಅವರಿಗಿದೆ. ಬಿಜೆಪಿಯವರು ರಾಹುಲ್ ಗಾಂಧಿ ಹಾಗೂ ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Karnataka SIR: ಎಸ್‌ಐಆರ್‌ನಲ್ಲಿ ರಾಜ್ಯ ಸರ್ಕಾರ ಕಾನೂನುಬಾಹಿರ ಹಸ್ತಕ್ಷೇಪ; ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್‌ ನಿಯೋಗ ದೂರು

ಎಸ್‌ಐಆರ್‌ನಲ್ಲಿ ಹಸ್ತಕ್ಷೇಪ; ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್‌ ನಿಯೋಗ ದೂರು

ರಾಜ್ಯ ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ರಾಜಕೀಯ ದ್ವೇಷ ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್ ಮೈತ್ರಿಯ ಎನ್‌ಡಿಎ ನಿಯೋಗದಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮಂಗಳವಾರ ದೂರು ಸಲ್ಲಿಸಿದೆ.

ಎಂಎಲ್‌ಸಿ ಚುನಾವಣೆಯಲ್ಲಿ ಎಸ್.ವಿ. ಸಂಕನೂರಗೆ ಹ್ಯಾಟ್ರಿಕ್ ಗೆಲುವಿನ ವಿಶ್ವಾಸ: ಬಿ.ವೈ. ವಿಜಯೇಂದ್ರ

ಎಸ್.ವಿ. ಸಂಕನೂರಗೆ ಹ್ಯಾಟ್ರಿಕ್ ಗೆಲುವಿನ ವಿಶ್ವಾಸ: ಬಿ.ವೈ. ವಿಜಯೇಂದ್ರ

BY Vijayendra: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಇದ್ದರೂ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಸ್ಥಿರತೆ ಕಾಡುತ್ತಿದೆ. ಆರ್ಥಿಕ ಸಂಕಷ್ಟ ಸಹ ಅವರಿಗೆ ಭಯ ತಂದಿದೆ. ಈಗ ಇವರು ಎಸ್‍ಐಆರ್ ಇಟ್ಟುಕೊಂಡು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರಿದ್ದಾರೆ.

Ebola Disease: ಏನಿದು ಎಬೋಲಾ?; ರೋಗ ಲಕ್ಷಣಗಳನ್ನು ಗುರುತಿಸುವುದು ಹೇಗೆ, ಚಿಕಿತ್ಸೆ ಏನು?

ಏನಿದು ಎಬೋಲಾ?; ರೋಗ ಲಕ್ಷಣಗಳನ್ನು ಗುರುತಿಸುವುದು ಹೇಗೆ, ಚಿಕಿತ್ಸೆ ಏನು?

ಎಬೋಲಾ ವೈರಸ್‌ಗೆ ಇದುವರೆಗೂ ಯಾವುದೇ ಲಸಿಕೆ ಕಂಡು ಹಿಡಿಯಲಾಗಿಲ್ಲ. ಸಂಶೋಧನೆಗಳು ನಡೆಯುತ್ತಿದ್ದರೂ, ಯಾವುದೇ ಪ್ರಗತಿ ಕಂಡಿಲ್ಲ. ಅದೇ ರೀತಿ ಯಾವುದೇ ರೀತಿಯ ಔಷಧಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದ ಕಾರಣ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

KEA VAO Answer Key 2026: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಪರೀಕ್ಷೆ ಕೀ ಉತ್ತರಗಳು ಪ್ರಕಟ; ಇಲ್ಲಿದೆ ಲಿಂಕ್

‌ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಪರೀಕ್ಷೆ ಕೀ ಉತ್ತರ ಪ್ರಕಟ; ಇಲ್ಲಿದೆ ಲಿಂಕ್

ಅ.04ರಂದು ಉಳಿಕೆ ಮೂಲ ವೃಂದದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆದಿತ್ತು. ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಅ.8ರ ಬೆಳಗ್ಗೆ 10.30ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಕನ್ನಡಿಗರ ಒಗ್ಗಟ್ಟಿನ ಮುಂದೆ ಮಂಡಿಯೂರಿದ ಝೊಮೆಟೊ ಉದ್ಯೋಗಿ; ಹಿಂದಿ ಕಲಿತು ಬನ್ನಿ, ಇಲ್ಲದಿದ್ದರೆ ಕೆಲಸ ಬಿಡಿ ಎಂದವ ಕೊನೆಗೆ ಕನ್ನಡದಲ್ಲೇ ಕ್ಷಮೆ ಕೋರಿದ!

ಹಿಂದಿ ಕಲಿಯಿರಿ ಎಂದು ಧಮ್ಕಿ: ಆಕ್ರೋಶದ ಬಳಿಕ ಕನ್ನಡದಲ್ಲಿ ಕ್ಷಮೆ!

Viral Video: ಝೊಮೆಟೊ ಸಂಸ್ಥೆಯ ಗೋದಾಮಿನ ಮೇಲ್ವಿಚಾರಕ ಸ್ಥಳೀಯ ಉದ್ಯೋಗಿಗಳಿಗೆ ಹಿಂದಿ ಕಲಿತು ಬನ್ನಿ, ಇಲ್ಲವೇ ಕೆಲಸ ಬಿಟ್ಟು ಹೋಗಿ ಎಂದು ದರ್ಪ ತೋರಿಸಿದ್ದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಆತ ಕೈ ಮುಗಿದು ಕನ್ನಡದಲ್ಲೇ ಕ್ಷಮೆ ಯಾಚಿಸಿದ್ದಾನೆ.

Loading...