Kalaburagi News: ಉತ್ಸವ ಇತಿಹಾಸದ ಪುಟಗಳಲ್ಲಿ ದಾಖಲಾಗಲಿ: ಬಸವರಾಜ್ ಪಾಟೀಲ್ ಸೇಡಂ

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಸಿದ್ಧತಾ ಸಭೆಯಲ್ಲಿ ಮಾತ ನಾಡಿ, ಸರಕಾರದ ಸಹಾಯವಿಲ್ಲದೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುವ ಈ ರೀತಿಯ ಉತ್ಸವ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುವಂತದ್ದು. ಆಮಂತ್ರಣ ಪತ್ರಿಕೆಯನ್ನು ನೋಡಿದ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Kalaburagi News
Profile Ashok Nayak January 17, 2025

Source : Kalaburagi reporter

ಭಾರತದ ಅತಿ ದೊಡ್ಡ ಉತ್ಸವದಲ್ಲಿ ಪಾಲ್ಗೊಳ್ಳಿ

ಕಲಬುರಗಿ: ಕಾಗಿಣಾ ನದಿ ತಟದ ಸೇಡಂ ಸಮೀಪದ ಬೀರನಹಳ್ಳಿ ಕ್ರಾಸ್ ನಲ್ಲಿ ಜ.29ರಿಂದ ಪ್ರಾರಂಭವಾಗಿ 9 ದಿನಗಳ ಕಾಲ ನಡೆಯುವ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವವು ಖಾಸಗಿ ರಂಗದ ಅತೀ ದೊಡ್ಡ ಉತ್ಸವವಾಗಿದ್ದು ಭಾರತೀಯ ಸಂಸ್ಕೃತಿಯ ಮಹೋ ತ್ಸವವಾಗಿ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಲಿದೆ ಎಂದು ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಸಿದ್ಧತಾ ಸಭೆಯಲ್ಲಿ ಮಾತ ನಾಡಿ, ಸರಕಾರದ ಸಹಾಯವಿಲ್ಲದೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುವ ಈ ರೀತಿಯ ಉತ್ಸವ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುವಂತದ್ದು. ಆಮಂತ್ರಣ ಪತ್ರಿಕೆ ಯನ್ನು ನೋಡಿದ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಶರಣರ ನೆಲ, ಖಾಜಾ ಬಂದೇ ನವಾಝರ ಪುಣ್ಯಭೂಮಿ ಹಾಗೂ ಬುದ್ಧ ವಿಹಾರದ ಪವಿತ್ರ ತಾಣದ ಕಲ್ಬುರ್ಗಿ ಜಿಲ್ಲೆಯ ಹಾಗೂ ಕಲ್ಯಾಣ ನಾಡಿನ ಜನರ ನಡೆ ನುಡಿ ಪಸರಿಸಲು ಮತ್ತು ಇಲ್ಲಿನ ಜನತೆಯ ಉತ್ಕೃಷ್ಟತೆ ಕಾಪಾಡಿ, ಆನಂದವನ್ನು ಎಲ್ಲರಿಗೂ ಹಂಚುವ ಸುವರ್ಣ ಅವಕಾಶ ಈ ಉತ್ಸವದಲ್ಲಿ ಎಲ್ಲರಿಗೂ ಲಭಿಸಲಿದೆ ಎಂದರು.

ಭಾರತೀಯ ಸಂಸ್ಕೃತಿಯು ಅನಾವರಣಗೊಳ್ಳುವ ಪ್ರಕೃತಿ ನಗರ ದಲ್ಲಿ ನಡೆಯುವ ಉತ್ಸವ ವು ಕುಂಭಮೇಳದಂತೆ ದೇಶವಿದೇಶದ ಜನತೆಯ ಪಾಲ್ಗೊಳ್ಳುವಿಕೆಯಿಂದ ಅದ್ಭುತ ದಾಖಲೆ ಯಾಗಲಿದೆ. ಈ ಮೂಲಕ ದೇಶದ 100 ಕೋಟಿ ಜನರಿಗೆ ದೊಡ್ಡ ಸಂದೇಶ ತಲುಪುವುದು ನಿಶ್ಚಿತ. ಪ್ರತಿಯೊಬ್ಬರು ಕನಿಷ್ಠ ಒಂದು ದಿನವಾದರೂ ಉತ್ಸವದಲ್ಲಿ ಪಾಲ್ಗೊಳ್ಳಬೇಕು.

ಜೊತೆಗೆ ತಮ್ಮ ಸಂಪರ್ಕದಲ್ಲಿರುವ ನೂರು ಜನರಿಗೆ ಕಾರ್ಯಕ್ರಮದ ಸಂದೇಶ ಕಳಿಸಿ ಪಾಲ್ಗೊಳ್ಳುವಂತೆ ಮಾಡಿ ಧನ್ಯತೆ ಹೊಂದುವ ಸುವರ್ಣ ಅವಕಾಶ ಸಿಗಲಿದೆ. ಉತ್ಸವದಲ್ಲಿ 300ಕ್ಕಿಂತಲೂ ಹೆಚ್ಚು ಜನರಿಗೆ ಸನ್ಮಾನ ಉದ್ಘಾಟನೆಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸುತ್ತಿದ್ದು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ನಾನಾ ಪಾಟೇ ಕರ್, ಸಚಿನ್ ತೆಂಡೂಲ್ಕರ್, ಅರವಿಂದ ರಮೇಶ್ ಜೀವನ ಮೌಲ್ಯದ ಸಂದೇಶವನ್ನು ಸಾರಲಿದ್ದಾರೆ. ಅಮೆರಿಕದಂತಹ ರಾಷ್ಟ್ರಗಳಿಗೆ ನಮ್ಮ ಮಕ್ಕಳು ತೆರಳಿ ಅಲ್ಲಿ ವಿದ್ಯಾವಂತ ಜೀತದಾಳುಗಳಾಗುವುದನ್ನು ಬಿಟ್ಟು ಇಡೀ ಜಗತ್ತಿಗೆ ನೀಡುವ ಮಕ್ಕಳಾಗಬೇಕಾಗಿದೆ ಅಂತಹ ಸ್ವಾಭಿಮಾನದ ಬದುಕಿಗೆ ಉತ್ಸವ ಪ್ರೇರಣೆಯನ್ನು ನೀಡಲಿದೆ ಎಂದು ಬಸವರಾಜ್ ಪಾಟೀಲ್ ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೇಘಾ ಶಾಸ್ತ್ರಿ ಪ್ರಾರ್ಥನೆ ಗೀತೆ ಹಾಡಿದರು. ಉತ್ಸವದ ಸಹ ಸಂಘಟಕರಾದ ಮಾರ್ತಾಂಡ ಶಾಸ್ತ್ರಿ ಸರ್ವ ರನ್ನು ಸ್ವಾಗತಿಸಿದರು. ನರಸಪ್ಪ ರಂಗೋಲಿ ನಿರ್ವಹಿಸಿದರು.

ಉತ್ಸವಕ್ಕೆ ಮುನ್ನುಡಿ ಶೋಭಾ ಯಾತ್ರೆ

ಉತ್ಸವದ ಪೂರ್ವಭಾವಿಯಾಗಿ ಜನವರಿ 28ರಂದು ಕಲಬುರಗಿ ಮತ್ತು ಸೇಡಂನಲ್ಲಿ ಏಕ ಕಾಲಕ್ಕೆ ಸಾಂಸ್ಕೃತಿಕ ವೈಭವ ಸಾರುವ ಆಕರ್ಷಕ ಶೋಭಾ ಯಾತ್ರೆ ನಡೆಯಲಿದೆ.

ಎರಡು ರಥಗಳ ಸಂಗಮ: ಜ.28ರಂದು ನಡೆಯುವ ಶೋಭಾ ಯಾತ್ರೆಯಲ್ಲಿ ಮಹಾ ರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಂಚರಿಸಿದ ರಥದ ಸಂಗಮವಾಗಲಿದ್ದು ಶೋಭಾ ಯಾತ್ರೆಗೆ ಮೆರುಗು ನೀಡಲಿದೆ. ನಗರೇಶ್ವರ ಶಾಲೆಯಿಂದ ಬೆಳಿಗ್ಗೆ 9 ಗಂಟೆಗೆ ಪ್ರಾರಂಭ ವಾಗುವ ಶೋಭಾ ಯಾತ್ರೆಯಲ್ಲಿ ಜನಪದ ಕಲಾವಿದರು, ಸ್ಥಬ್ಧ ಚಿತ್ರಗಳು ಹಾಗೂ ಸಾಂಸ್ಕೃ ತಿಕ ತಂಡಗಳು ಪಾಲ್ಗೊಳ್ಳಲಿದ್ದು ಸೂಪರ್ ಮಾರ್ಕೆಟ್ ಜಗತ್ ವೃತ್ತ, ಗೋವಾ ಹೋಟೆಲ್ ದಾರಿಯಾಗಿ ನೂತನ ವಿದ್ಯಾಲಯ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಸಂಪನ್ನ ಗೊಳ್ಳಲಿದೆ. ಮೆರವಣಿಗೆ ಯುದ್ದಕ್ಕೂ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಜನ ಜಮಾಯಿಸುವ ನಿರೀಕ್ಷೆ ಇದೆ. ಮೆರವಣಿಗೆಯ ಮೇಲೆ ಪುಷ್ಪ ವೃಷ್ಟಿ ಹಾಕಬೇಕಲ್ಲದೆ ಸಣ್ಣ ಮಕ್ಕಳಿಗೆ ಗೋಪಿ, ರಾಮ - ಕೃಷ್ಣರ ವೇಷವನ್ನು ಹಾಕಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಂಭ್ರಮಿಸಲು ಸಂಘಟಕರು ವ್ಯವಸ್ಥೆ ಕಲ್ಪಿಸಿದ್ದಾರೆ.

ಉತ್ಸವಕ್ಕೆ ಬಸ್ ವ್ಯವಸ್ಥೆ: ಉತ್ಸವಕ್ಕೆ ವಿಶೇಷವಾಗಿ ಕಲಬುರಗಿ ಬಸ್ ನಿಲ್ದಾಣ, ಹಿಂದಿ ಪ್ರಚಾರ ಸಭೆ ಹಾಗೂ ಖರ್ಗೆ ಪೆಟ್ರೋಲ್ ಪಂಪು ಬಳಿಯಿಂದ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ. ಉತ್ಸವ ಸಂದರ್ಭದಲ್ಲಿ ಸುಮಾರು ನಾಲ್ಕು ಸಾವಿರದಷ್ಟು ವಾಹನಗಳು ಹೆಚ್ಚಿಗೆ ಸಂಚರಿಸುತ್ತಿರುವು ದರಿಂದ ಟ್ರಾಫಿಕ್ ಜಾಮ್ ಆಗುವ ಸಂಭವವಿದ್ದು ಕಲಬುರಗಿಯಿಂದಯಿಂದ ಉತ್ಸವ ಸ್ಥಳಕ್ಕೆ ಆಗಮಿಸಲು ಕನಿಷ್ಠ ಒಂದೂವರೆ ತಾಸು ತಗಲುವುದರಿಂದ ಆಗಮಿಸುವವರು ಬೇಗ ಹೊರಡುವುದು ಉಚಿತ ಎಂಬ ಸೂಚನೆ ನೀಡಲಾಗಿದೆ.

ಒಂದುವರೆ ಲಕ್ಷ ಮಕ್ಕಳಿಗೆ ಮಾತೆಯರ ಕೈ ತುತ್ತು: ಉತ್ಸವದಲ್ಲಿ ದೇಶದ ಸಂಸ್ಕೃತಿಯ ಭಾಗವಾಗಿ ಮಾತೆಯರ ಕೈ ತುತ್ತು ನೀಡುವ ಕಾರ್ಯಕ್ರಮವಿದ್ದು ಸುಮಾರು ಒಂದುವರೆ ಲಕ್ಷ ಮಕ್ಕಳು ಭಾಗವಹಿಸಲಿದ್ದಾರೆ. 50ರಿಂದ 80ಸಾವಿರ ಮಾತೆಯರು ಪಾಲ್ಗೊಳ್ಳುವರು. ಪ್ರತಿ ಮಾತೆ ಕನಿಷ್ಠ ಐದು ಜನರಿಗೆ ಬೇಕಾಗುವ ಒಂದು ಸಿಹಿ, ಮೊಸರನ್ನ ಚಿತ್ರಾನ್ನ, ಕಾಯಿ ಪಲ್ಯ ಮತ್ತು ಚಪಾತಿಯನ್ನು ತರಬೇಕಾಗುವುದು. ಮಕ್ಕಳ ಜತೆಗೆ ದೊಡ್ಡವರಿಗೂ ಊಟ ಸಿಗಲಿದೆ.

ಮಕ್ಕಳಿಗೆ ಉಚಿತ ಪಪ್ಪಾಯಿ, ಐಸ್ ಕ್ರೀಮ್: ಉತ್ಸವದಲ್ಲಿ ಮಕ್ಕಳಿಗೆ ಖುಷಿ ಪಡಿಸಲು ಮಕ್ಕಳ ಲೋಕದಲ್ಲಿ ಉಚಿತವಾಗಿ ಪಪ್ಪಾಯಿ ಹಾಗೂ ಐಸ್ ಕ್ರೀಮ್ ವಿತರಿಸಲು ಸಿದ್ಧತೆ ನಡೆದಿದೆ. ನಂದಿಕೂರಲ್ಲಿ ಆರಂಭಗೊಳ್ಳುವ ಐಸ್ ಕ್ರೀಮ್ ಫ್ಯಾಕ್ಟರಿ ಉದ್ಯಮಿಯೊಬ್ಬರು ಐಸ್ ಕ್ರೀಮ್ ವಿತರಿಸುವರು.

*

ಉತ್ಸವದಲ್ಲಿ ಪಾಲ್ಗೊಳ್ಳುವ ಸಾರ್ಥಕತೆಯನ್ನು ಸಾಕ್ಷಿ ಮಾಡಲು ಕನಿಷ್ಠ ಒಂದು ರುಪಾಯಿ ಕ್ಯು ಆರ್ ಕೋಡ್ ಮೂಲಕ ಕಳುಹಿಸಿ ಸಾರ್ಥಕತೆ ಹೊಂದಬೇಕು. ಒಂದರಿಂದ ಐದು ರುಪಾಯಿ 50 ರುಪಾಯಿ 100 ರುಪಾಯಿ ನೀಡಿ ಧನ್ಯತೆ ಹೊಂದಬೇಕು.

- ಬಸವರಾಜ ಪಾಟೀಲ್ ಸೇಡಂ, ಪ್ರಧಾನ ಸಂಯೋಜಕ, ಭಾರತೀಯ ಸಂಸ್ಕೃತಿ ಉತ್ಸವ

ಇದನ್ನೂ ಓದಿ: Kalaburagi News: ಹವಾ ಸೃಷ್ಟಿಸಲು ತಲ್ವಾರ್ ಹಿಡಿದು ವಿಡಿಯೊ ಮಾಡಿದ ಯುವಕರು; ನಾಲ್ವರ ವಿರುದ್ಧ ಕೇಸ್‌

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ