Ram Navami 2025: ಕಲಬುರಗಿಯಲ್ಲಿ ಅದ್ಧೂರಿ ರಾಮೋತ್ಸವ; ಮೆರವಣಿಗೆಯಲ್ಲಿ ರಾರಾಜಿಸಿದ ಆರ್‌ಸಿಬಿ ಜೆರ್ಸಿ
Ram Navami 2025: ರಾಮ ನವಮಿ ಪ್ರಯುತ್ತ ಕಲಬುರಗಿ ನಗರದಲ್ಲಿ ರಾಮ ನವಮಿ ಉತ್ಸವ ಸಮಿತಿಯಿಂದ 15 ಅಡಿ ಶ್ರೀರಾಮ ಪ್ರಭುವಿನ ಮೂರ್ತಿ ಮೆರವಣಿಗೆಗೆ ಹಲವು ಪೂಜ್ಯರು ಚಾಲನೆ ನೀಡಿದ್ದಾರೆ. ಆಳಂದ ಚೆಕ್ ಪೋಸ್ಟ್ ಹತ್ತಿರದ ರಾಮತಿರ್ಥ್ ಮಂದಿರದಿಂದ ಮೆರವಣಿಗೆ ಪ್ರಾರಂಭವಾಯಿತು.


ಕಲಬುರಗಿ: ರಾಮ ನವಮಿ ಪ್ರಯುತ್ತ ನಗರದಲ್ಲಿ ರಾಮ ನವಮಿ ಉತ್ಸವ ಸಮಿತಿಯಿಂದ 15 ಅಡಿ ಶ್ರೀರಾಮ ಪ್ರಭುವಿನ ಮೂರ್ತಿ ಮೆರವಣಿಗೆಗೆ ಹಲವು ಪೂಜ್ಯರು ಚಾಲನೆ ನೀಡಿದರು. ಆಳಂದ ಚೆಕ್ ಪೋಸ್ಟ್ ಹತ್ತಿರದ ರಾಮತಿರ್ಥ್ ಮಂದಿರದಿಂದ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದು, ಕೋಲಾಟ, ತಮಟೆ, ಡಿಜೆ ಸದ್ದಿಗೆ ಯುವಕರು ಬಿರು ಬಿಸಿಲಿನಲ್ಲೂ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ನಾನಾ ಸಂಘ ಸಂಸ್ಥೆಗಳಿಂದ ಅನ್ನದಾನ, ತಂಪಾದ ಕುಡಿಯುವ ನೀರು, ಮಜ್ಜಿಗೆ, ಪಾನಕ, ಹೆಸರು ಬೇಳೆ ವಿತರಣೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇನ್ನು ರಾಮ ನವಮಿ ಉತ್ಸವದ ಮೆರವಣಿಗೆಯಲ್ಲಿ ಆರ್‌ಸಿಬಿ ಪರ ಜಯಘೋಷಗಳು ಮೊಳಗಿವೆ. ಅಭಿಮಾನಿಯೊಬ್ಬ ವಾಹನದ ಮೇಲೆ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಜೆರ್ಸಿ ಪ್ರದರ್ಶಿಸಿದ್ದು, ಈ ವೇಳೆ ಅಭಿಮಾನಿಗಳು ಆರ್‌ಸಿಬಿ, ಆರ್‌ಸಿಬಿ ಎಂದು ಜೈಕಾರ ಹಾಕಿದ್ದಾರೆ.