ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kalaburagi news: ಜಾತ್ರೆಯ ರಥೋತ್ಸವದ ವೇಳೆ ರಥ ಹರಿದು ಮಹಿಳೆಯ ಕಾಲು ಕಟ್‌

ಜನಸಮೂಹ ಹೆಚ್ಚಾಗಿದ್ದ ಕಾರಣ ನಿಯಂತ್ರಣ ತಪ್ಪಿದ ರಥ ಜನರು ನಿಂತಿದ್ದ ದಿಕ್ಕಿಗೆ ಚಲಿಸಿದೆ. ಈ ಸಂದರ್ಭದಲ್ಲಿ ರಥದ ಸಮೀಪದಲ್ಲಿದ್ದ ನಾಗಮ್ಮ ಎಂಬ ಮಹಿಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ರಥದ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಪರಿಣಾಮವಾಗಿ ರಥದ ಚಕ್ರವು ಅವರ ಕಾಲಿನ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾತ್ರೆಯ ರಥೋತ್ಸವದ ವೇಳೆ ರಥ ಹರಿದು ಮಹಿಳೆಯ ಕಾಲು ಕಟ್‌

ಯಡ್ರಾಮಿ ರಥ, ಗಾಯಾಳು ನಾಗಮ್ಮ -

ಹರೀಶ್‌ ಕೇರ
ಹರೀಶ್‌ ಕೇರ Mar 9, 2026 10:39 AM

ಕಲಬುರಗಿ, ಮಾರ್ಚ್​ 09: ಜಿಲ್ಲೆಯ (Kalaburagi) ಯಡ್ರಾಮಿ (Yadrami) ತಾಲೂಕಿನ ಅರಳಗುಂಡಗಿ (Kalaburagi) ಗ್ರಾಮದಲ್ಲಿ ನಡೆದ ಶರಣಬಸವೇಶ್ವರ ಜಾತ್ರೆಯ ರಥೋತ್ಸವ (car festival) ವೇಳೆ ದುರ್ಘಟನೆ ಸಂಭವಿಸಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ (woman injured) ಘಟನೆ ನಡೆದಿದೆ. ಗ್ರಾಮದ ನಿವಾಸಿಯಾದ ನಾಗಮ್ಮ ಎಂಬ ಮಹಿಳೆ ರಥದ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಅವರ ಎರಡೂ ಕಾಲುಗಳು ಕಡಿದು ಹೋಗಿವೆ ಎಂದು ತಿಳಿದುಬಂದಿದೆ.

ಅರಳಗುಂಡಗಿ ಗ್ರಾಮವು ಶರಣಬಸವೇಶ್ವರರ ಜನ್ಮಸ್ಥಳವಾಗಿರುವ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಇಲ್ಲಿ ಜಾತ್ರೆಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ನಿನ್ನೆ (ಮಾರ್ಚ್​ 08) ಸಂಜೆ ಸುಮಾರು 6 ಗಂಟೆಗೆ ಜಾತ್ರೆಯ ಅಂಗವಾಗಿ ಶರಣಬಸವೇಶ್ವರ ರಥೋತ್ಸವ ಆರಂಭವಾಗಿತ್ತು. ಈ ವೇಳೆ ಗ್ರಾಮಸ್ಥರು ಉತ್ಸಾಹದಿಂದ ರಥವನ್ನು ಎಳೆಯಲು ಮುಂದಾಗಿದ್ದರು. ಜನಸಮೂಹ ಹೆಚ್ಚಾಗಿದ್ದ ಕಾರಣ ನಿಯಂತ್ರಣ ತಪ್ಪಿದ ರಥ ಜನರು ನಿಂತಿದ್ದ ದಿಕ್ಕಿಗೆ ಚಲಿಸಿದೆ.

ಈ ಸಂದರ್ಭದಲ್ಲಿ ರಥದ ಸಮೀಪದಲ್ಲಿದ್ದ ನಾಗಮ್ಮ ಎಂಬ ಮಹಿಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ರಥದ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಪರಿಣಾಮವಾಗಿ ರಥದ ಚಕ್ರವು ಅವರ ಕಾಲಿನ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಜನರು ತಕ್ಷಣವೇ ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ನಾಗಮ್ಮಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಗಮನ ಹರಿಸಿದ್ದಾರೆ.

Sri Thipperudraswamy Rathotsava: ಶ್ರೀ ತಿಪ್ಪೇರುದ್ರಸ್ವಾಮಿ ರಥೋತ್ಸವ ಇಂದು