ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Shocking news: ಹೃದಯಾಘಾತದಿಂದ ಸತ್ತ ಕಾರ್ಮಿಕನ ಶವ ನಾಯಿಯಂತೆ ಎಳೆದೊಯ್ದರು!

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಸಿಬ್ಬಂದಿಗಳು ಕಾರ್ಮಿಕನ ಮೃತದೇಹವನ್ನು ನಾಯಿಯ ಹೆಣ ಒಯ್ಯುವಂತೆ ಎಳೆದೊಯ್ದರು. ಮೃತರನ್ನು ಬಿಹಾರ ಮೂಲದ ಚಂದನ್ ಸಿಂಗ್ (35) ಎಂದು ಗುರುತಿಸಲಾಗಿದೆ.

ಹೃದಯಾಘಾತದಿಂದ ಸತ್ತ ಕಾರ್ಮಿಕನ ಶವ ನಾಯಿಯಂತೆ ಎಳೆದೊಯ್ದರು!

ಶ್ರೀ ಸಿಮೆಂಟ್‌ ಫ್ಯಾಕ್ಟರಿಯಲ್ಲಿ ನಡೆದ ಘಟನೆ

ಹರೀಶ್‌ ಕೇರ ಹರೀಶ್‌ ಕೇರ Feb 19, 2025 9:14 AM

ಕಲಬುರಗಿ: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ (shocking news) ನಡೆದಿದೆ. ಸಿಮೆಂಟ್ ಫ್ಯಾಕ್ಟರಿಯಲ್ಲಿ (Cement factory) ಹೃದಯಾಘಾತದಿಂದ ಮೃತಪಟ್ಟಿದ್ದ ಕಾರ್ಮಿಕನ ಮೃತದೇಹವನ್ನು ಸತ್ತ ನಾಯಿಯ ಹೆಣದಂತೆ ಎಳೆದೊಯ್ದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.‌ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಸಿಬ್ಬಂದಿಯೇ ಜೊತೆ ಕಾರ್ಮಿಕನ ಹೆಣವನ್ನು ರಸ್ತೆಯಲ್ಲಿ ದರದರನೆ ಎಳೆದೊಯ್ದಿದ್ದಾರೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಸಿಬ್ಬಂದಿಗಳು ಕಾರ್ಮಿಕನ ಮೃತದೇಹವನ್ನು ನಾಯಿಯ ಹೆಣ ಒಯ್ಯುವಂತೆ ಎಳೆದೊಯ್ದರು. ಮೃತರನ್ನು ಬಿಹಾರ ಮೂಲದ ಚಂದನ್ ಸಿಂಗ್ (35) ಎಂದು ಗುರುತಿಸಲಾಗಿದೆ.

ಚಂದನ್ ಸಿಂಗ್ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಾಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಂದನ್ ಸಿಂಗ್ ಮೃತದೇಹವನ್ನು ಸಿಬ್ಬಂದಿಗಳು ಪ್ರಾಣಿ ತರ ಎಳೆದುಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಡಿಯಬೇಡ ಎಂದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಅಳಿಯ

ಚಿಕ್ಕಮಗಳೂರು: ಕುಡಿಯಬೇಡ ಎಂದು ಬುದ್ಧಿವಾದ (advice) ಹೇಳಿದ್ದಕ್ಕೆ ಅತ್ತೆಯನ್ನು (mother in law) ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ (murder case) ಮಾಡಿದ ಅಳಿಯ (son in law) ಬಳಿಕ ತಾನು ಕೂಡ ಆತ್ಮಹತ್ಯೆಗೆ (Self harming) ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ (chikkamagaluru news) ಮೂಡಿಗೆರೆ ತಾಲೂಕಿನ ಭಾರತಿಬೈಲು ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಕುಡಿಯಬೇಡ ಎಂದು ಉಪದೇಶ ನೀಡಿದ ಅತ್ತೆಯನ್ನು ಕೊಂದು ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತ್ತೆ ಯಮುನಾ (65) ಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಬಳಿಕ ಅಳಿಯ ಶಶಿಧರ್ (48) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಫಿ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಶಶಿಧರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಾಫಿ ತೋಟದ ಕೆಲಸಕ್ಕೆ ಎಂದು ಯಮುನಾ ಮಗಳ ಮನೆಗೆ ಹೋಗಿದ್ದಾರೆ. ಈ ವೇಳೆ ಕುಡಿಯಬೇಡ ಎಂದು ಶಶಿಧರ್‌ಗೆ ಬುದ್ಧಿ ಹೇಳಿದ್ದಾರೆ. ಕುಡಿದ ಮತ್ತಿನಲ್ಲಿ ಶಶಿಧರ್ ಸುತ್ತಿಗೆಯಿಂದ ಅತ್ತಿಗೆ ಯಮುನಾ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ತಾನು ಮರಕ್ಕೆ ನೀಡು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Chandigarh Murder: ಆಪ್‌ ನಾಯಕನ ಪತ್ನಿ ಕೊಲೆಗೆ ಬಿಗ್‌ ಟ್ವಿಸ್ಟ್‌; ಗರ್ಲ್‌ಫ್ರೆಂಡ್‌ ಜೊತೆ ಸೇರಿ ಪತಿಯೇ ಸುಪಾರಿ ಕೊಟ್ಟ!