ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆ್ಯಪ್ ಮೂಲಕ ಟ್ರ್ಯಾಕ್ಟರ್‌ ಬುಕಿಂಗ್: ನೇಗಿಲ ಯೋಗಿ ಪೋಸ್ಟರ್ ಬಿಡುಗಡೆ

ನಗರದ ಐವಾನ್‌-ಇ-ಶಾಹಿ ಅತಿಥಿ ಗೃಹದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಗರಿಷ್ಠ 3 ಎಕರೆ ಕೃಷಿ ಭೂಮಿ ಹೊಂದಿರುವ ಅರ್ಹ ರೈತರಿಗೆ ಯೋಜನೆಯಡಿ ಟ್ರ್ಯಾಕ್ಟರ್‌ ಹಾಗೂ ವಿವಿಧ ಕೃಷಿ ಯಂತ್ರೋಪಕರಣಗಳ ಸೇವೆ ಬಾಡಿಗೆ ಆಧಾರದಲ್ಲಿ ದೊರೆಯಲಿದೆ. ಸೇವೆ ಪಡೆಯಲು ರೈತರು ಆ್ಯಪ್ ಮೂಲಕ ನೋಂದಣಿ ಹಾಗೂ ಬುಕಿಂಗ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನೇಗಿಲ ಯೋಗಿ ಪೋಸ್ಟರ್ ಬಿಡುಗಡೆ

-

Profile
Ashok Nayak Nov 28, 2026 3:21 PM

ಕಲಬುರಗಿ: ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಸೇವೆ ಸುಲಭವಾಗಿ ದೊರಕಿಸುವ ಉದ್ದೇಶದ ‘ನೇಗಿಲ ಯೋಗಿ’ ಯೋಜನೆಯ ಪೋಸ್ಟರ್‌ನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge), ಜಿಲ್ಲಾಧಿಕಾರಿ ಇಕ್ರಮ್ ಷರೀಫ್ ಹಾಗೂ ಜೆಡಿ ಸಮದ್ ಪಟೇಲ್ ಶನಿವಾರ ಬಿಡುಗಡೆ ಗೊಳಿಸಿದರು.

ನಗರದ ಐವಾನ್‌-ಇ-ಶಾಹಿ ಅತಿಥಿ ಗೃಹದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಗರಿಷ್ಠ 3 ಎಕರೆ ಕೃಷಿ ಭೂಮಿ ಹೊಂದಿರುವ ಅರ್ಹ ರೈತರಿಗೆ ಯೋಜನೆಯಡಿ ಟ್ರ್ಯಾಕ್ಟರ್‌ ಹಾಗೂ ವಿವಿಧ ಕೃಷಿ ಯಂತ್ರೋಪಕರಣಗಳ ಸೇವೆ ಬಾಡಿಗೆ ಆಧಾರದಲ್ಲಿ ದೊರೆಯಲಿದೆ. ಸೇವೆ ಪಡೆಯಲು ರೈತರು ಆ್ಯಪ್ ಮೂಲಕ ನೋಂದಣಿ ಹಾಗೂ ಬುಕಿಂಗ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Priyank Kharge-RSS: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ; ಸಂಘದ ಕಾನೂನುಬದ್ಧ ಸ್ಥಾನಮಾನ, ಆದಾಯ ಕುರಿತು ಸ್ಪಷ್ಟನೆಗೆ ಆಗ್ರಹ

ಸ್ವಂತ ಟ್ರ್ಯಾಕ್ಟರ್‌ ಅಥವಾ ಕೃಷಿ ಯಂತ್ರೋಪಕರಣ ಖರೀದಿಸಲು ಆರ್ಥಿಕವಾಗಿ ಸಾಧ್ಯವಾಗದ ರೈತರಿಗೆ ಕಡಿಮೆ ವೆಚ್ಚದಲ್ಲಿ ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ನೆರವಾಗಲಿದೆ. ಸ್ಥಳೀಯ ವಾಗಿ ಲಭ್ಯವಿರುವ ಖಾಸಗಿ ಟ್ರ್ಯಾಕ್ಟರ್‌ಗಳು ಹಾಗೂ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರ ದಲ್ಲಿ ರೈತರ ಜಮೀನುಗಳಿಗೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಯೋಜನೆಯಡಿ ರೈತರ ಜಮೀನಿನ ವಿಸ್ತೀರ್ಣ ಹಾಗೂ ಕೈಗೊಳ್ಳುವ ಕೃಷಿ ಚಟುವಟಿಕೆಗಳ ಸಂಖ್ಯೆಗೆ ಅನುಗುಣವಾಗಿ ಪ್ರೋತ್ಸಾಹಧನ ನೀಡಲಾಗುತ್ತದೆ. 20 ಗುಂಟೆಯಿಂದ 1 ಎಕರೆವರೆಗೆ ಒಂದು ಚಟುವಟಿಕೆಗೆ ₹500, ಎರಡು ಚಟುವಟಿಕೆಗಳಿಗೆ ₹1,000 ಹಾಗೂ ಮೂರು ಚಟುವಟಿಕೆಗಳಿಗೆ ₹1,500 ನೀಡಲಾಗುತ್ತದೆ. 2 ಎಕರೆಗೆ ಕ್ರಮವಾಗಿ ₹1,000, ₹2,000 ಮತ್ತು ₹3,000 ಹಾಗೂ 3 ಎಕರೆಗೆ ₹1,500, ₹3,000 ಮತ್ತು ಗರಿಷ್ಠ ₹4,500 ಪ್ರೋತ್ಸಾಹಧನ ದೊರೆಯಲಿದೆ.

ಸ್ಥಳೀಯ ಟ್ರ್ಯಾಕ್ಟರ್ ಮಾಲೀಕರಿಗೂ ಅವಕಾಶ

ನೇಗಿಲ ಯೋಗಿ ಯೋಜನೆಯಡಿ ರೈತರ ಅಗತ್ಯಕ್ಕೆ ತಕ್ಕಂತೆ ಸ್ಥಳೀಯವಾಗಿ ಲಭ್ಯವಿರುವ ಖಾಸಗಿ ಟ್ರ್ಯಾಕ್ಟರ್‌ಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಸೇವೆಗೆ ಬಳಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ರೈತರ ಜಮೀನಿನಲ್ಲೇ ಉಳುಮೆ ಸೇರಿದಂತೆ ಅಗತ್ಯ ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಆ್ಯಪ್ ಆಧಾರಿತ ವ್ಯವಸ್ಥೆ ಮೂಲಕ ಸೇವೆ ಒದಗಿಸುವುದರಿಂದ ರೈತರು ಮತ್ತು ಯಂತ್ರೋಪಕರಣ ಮಾಲೀಕರ ನಡುವೆ ಸಂಪರ್ಕ ಸುಲಭವಾಗಲಿದೆ.