ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Chikkaballapur News: ಕೇವಲ 15 ದಿನಗಳಲ್ಲಿ ಇ-ಖಾತೆ ಪಡೆದು ಸದುಪಯೋಗ ಮಾಡಿಕೊಳ್ಳಿ

ರಾಜ್ಯದ ವಿವಿಧೆಡೆ ಫೆ.19ರಿಂದಲೇ ಇ-ಖಾತಾ ಭಾಗ್ಯ ಕಲ್ಪಿಸುವ ಪರಿಣಾಮಕಾರಿ ಕಾರ್ಯಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ  ಚಾಲನೆ ನೀಡಿದ್ದು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಅನಧಿಕೃತ, ಕಂದಾಯ ವಿವಿಧ ವಾರ್ಡಗಳಲ್ಲಿ ಹಾಗೂ ಆಸ್ತಿಗಳಿಗೆ ಎಲ್ಲಾ ರೀತಿಯ ನಾಗರಿಕ ಸೌಲಭ್ಯಗಳನ್ನು ಒದಗಿಸಿದ್ದರೂ ಖಾತೆ ಇಲ್ಲದ ಕಾರಣಕ್ಕೆ ತೆರಿಗೆ ಸಂಗ್ರಹ ಆಗುತ್ತಿರ ಲಿಲ್ಲ

ಇ- ಖಾತೆ ಅಭಿಯಾನ ಯಶಸ್ವಿಗೆ ಕೈಜೋಡಿಸಿ

- ಖಾತೆ ಅಭಿಯಾನ ಯಶಸ್ವಿಗೆ ಜನರ ಸಹಕಾರ ಅಗತ್ಯವಿದ್ದು ಈ ಸದಾವಕಾಶವನ್ನು ಬಳಸಿಕೊಂಡು ಅನುಕೂಲ ಪಡೆಯಿರಿ ಎಂದು ಜನತೆಗೆ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮನವಿ ಮಾಡಿದರು.

Profile Ashok Nayak Mar 2, 2025 10:10 PM

ಬಾಗೇಪಲ್ಲಿ: ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ದಾಖಲೆ ಇಲ್ಲದ ಆಸ್ತಿಗಳಿಗೆ ಬಿ- ಖಾತೆ ನೀಡುವ ಉದ್ದೇಶಕ್ಕೆ ಸರ್ಕಾರ ಘೋಷಿಸಿರುವ ಇ-ಖಾತೆ ಅಭಿಯಾನ ಪಟ್ಟಣದ ಎಲ್ಲರಿಗೂ ದೊರಕಿಸಲು ಸಮರೋಪಾದಿಯಲ್ಲಿ ಪುರಸಭೆ ಸಿಬ್ಬಂದಿ ಕೆಲಸ ಮಾಡಿ ಅರ್ಜಿ ಸಲ್ಲಿಸಿದ ಕೇವಲ 15 ದಿನಗಳಲ್ಲಿ ಇ-ಖಾತೆ ಪಡೆದು ನಾಗರಿಕರು ಅದರ ಸದುಪಯೋಗ ಮಾಡಿಕೊಳ್ಳಿ' ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹೇಳಿದರು. ಪಟ್ಟಣದ ಪುರಸಭೆಯ ಆವರಣದಲ್ಲಿ ಇ–ಖಾತಾ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ, ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳು, ಮನೆಯ ಆಸ್ತಿ ಗಳು, ಖಾಲಿ ನಿವೇಶನ ಹೊಂದಿರುವವರು ದಾಖಲೆ ಸಮೇತ ಪುರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ–ಖಾತಾ ಮಾಡಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಗ್ಗೆ ಈಗಾಗಲೇ ಪುರಸಭೆಯ ವತಿಯಿಂದ ವ್ಯಾಪಕ ಪ್ರಚಾರ ನೀಡಲಾಗಿದೆ.

ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ಮನೆಮನೆಗೂ ಕರಪತ್ರ ಮತ್ತಿತರ ಕಾರ್ಯಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಹಾಗಾಗಿ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಕರ್ನಾಟಕ ಮಾದರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಇಂಗ್ಲೀಷ್‌ನಲ್ಲಿ ಸಂಭಾಷಣೆಗೆ ನಿರ್ಲಕ್ಷ್ಯ

ರಾಜ್ಯದ ವಿವಿಧೆಡೆ ಫೆ.19ರಿಂದಲೇ ಇ-ಖಾತಾ ಭಾಗ್ಯ ಕಲ್ಪಿಸುವ ಪರಿಣಾಮಕಾರಿ ಕಾರ್ಯಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ  ಚಾಲನೆ ನೀಡಿದ್ದು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಅನಧಿಕೃತ, ಕಂದಾಯ ವಿವಿಧ ವಾರ್ಡಗಳಲ್ಲಿ ಹಾಗೂ ಆಸ್ತಿಗಳಿಗೆ ಎಲ್ಲಾ ರೀತಿಯ ನಾಗರಿಕ ಸೌಲಭ್ಯಗಳನ್ನು ಒದಗಿಸಿದ್ದರೂ ಖಾತೆ ಇಲ್ಲದ ಕಾರಣಕ್ಕೆ ತೆರಿಗೆ ಸಂಗ್ರಹ ಆಗುತ್ತಿರ ಲಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ಸಾವಿರಾರು ಸಂಖ್ಯೆಯಲ್ಲಿ ತಲೆ ಎತ್ತಿವೆ. ಅಭಿಯಾನದ ಮೂಲಕ ಆಸ್ತಿಗೆ ಅಧಿಕೃತ ದಾಖಲೆಯೊಂದು ಮಾಲೀಕರಿಗೆ ಸಿಕ್ಕಂ ತಾಗುತ್ತದೆ ಎಂದು ತಿಳಿಸಿದರು.

ಉತ್ತಮ ಕಾರ್ಯಕ್ರಮ
ನಮ್ಮ ಸರಕಾರವು ನಾಡಿನ ಜನತೆಗೆ ಅನುಕೂಲಕ್ಕಾಗಿ ಖಾತಾ ಆಂದೋಲನ ಮಾಡಿಸಿ ಕೊಳ್ಳಲು ಮೂರು ತಿಂಗಳ ಕಾಲ ಖಾತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಖಾತೆ ಮಾಡಿಸಿ ಕೊಳ್ಳಲು ಯಾವುದೇ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನೇರವಾಗಿ ಸ್ವತ್ತಿನ ಮಾಲೀಕರೇ ಪುರಸಭೆ ಕಚೇರಿಗೆ ಆಗಮಿಸಿ ದಾಖಲೆಗಳನ್ನು ಸಲ್ಲಿಸಿ ಇ–ಖಾತಾ ಪಡೆದುಕೊಳ್ಳಬಹುದು ಎಂದರು.

550 ಮಂದಿಗೆ ಅರ್ಜಿಗಳು ವಿತರಣೆ
ಇದೇ ವೇಳೆ ಪುರಸಭೆಯ ಮುಖ್ಯಾಧಿಕಾರಿ ಶ್ರೀನಿವಾಸ್ ರವರು ಮಾತನಾಡಿ, 550 ಮಂದಿ ಸ್ವತ್ತಿನ ವಾರುಸದಾರರು ಅರ್ಜಿಗಳನ್ನು ಪಡೆದುಕೊಂಡು ಹೋಗಿದ್ದಾರೆ. ಅರ್ಜಿಗಳೊಂದಿಗೆ ಎಲ್ಲ ದಾಖಲೆಗಳನ್ನು ಲಗತ್ತಿಸಿ, ಅರ್ಜಿ ಸಲ್ಲಿಕೆಯಾಗಲಿವೆ. ಪ್ರಸ್ತುತ 80 ಅರ್ಜಿಗಳು ಒಂದೇ ದಿನ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು, ಪುರಸಭೆ ಸದಸ್ಯರಾದ ಎ.ನಂಜುಂಡಪ್ಪ, ಜಬೀವುಲ್ಲಾ, ಸರೋಜ, ರೇಷ್ಮಾ ಬಾಬು, ಸುನಿತಾ, ಪದ್ಮ ಮಲ್ಲೇಶ್, ಸುಶೀಲಮ್ಮ, ಕರವೇ ಹರೀಶ್ ಸಿಬ್ಬಂದಿಗಳಾದ ಅತಾವುಲ್ಲಾ, ಕೃಷ್ಣಪ್ಪ, ಇತರರು ಇದ್ದರು.