ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಗೆ ಕಣ್ಣೀರ ವಿದಾಯ; ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಕಂದಮ್ಮ

Kerala’s Youngest Organ Donor: ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಗೆ ಹೃದಯವಿದ್ರಾವಕ ವಿದಾಯ ಹೇಳಲಾಗಿದ್ದು, ಭಾನುವಾರ (ಫೆ.16) ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕಂದಮ್ಮನ ಪೋಷಕರ ನಿರ್ಧಾರವನ್ನು ಕರುಣೆಯ ಒಂದು ಸ್ಮರಣೀಯ ಕಾರ್ಯ ಎಂದು ಕೇರಳ ಸಿಎಂ ಬಣ್ಣಿಸಿದ್ದಾರೆ.

ದುಃಖದಲ್ಲೂ ಸಾರ್ಥಕತೆ ಮೆರೆದ ಮೃತ ಮಗುವಿನ ಪೋಷಕರು

ದುಃಖದಲ್ಲೂ ಪೋಷಕರ ಸಾರ್ಥಕ ಕಾರ್ಯಕ್ಕೆ ಕೇರಳ ಸಿಎಂ, ನಟ ಕಮಲ್ ಹಾಸನ್ ಶ್ಲಾಘನೆ -

Priyanka P
Priyanka P Feb 16, 2026 1:05 PM

ತಿರುವನಂತಪುರ, ಫೆ.16: ಅಪಘಾತದಲ್ಲಿ ಗಂಭೀರ ಗಾಯಗೊಂಡು, ಮೆದುಳು ನಿಷ್ಕ್ರಿಯಗೊಂಡಿದ್ದ ಕೇರಳದ 10 ತಿಂಗಳ ಮಗುವಿನ ಅಂಗಾಂಗ ದಾನ (youngest organ donor) ಮಾಡಲಾಗಿದೆ. ಅಂಗಾಂಗ ದಾನಿ ಆಲಿನ್ ಶೆರಿನ್ ಅಬ್ರಹಾಂ ಎಂಬ ಕೂಸಿಗೆ ಭಾನುವಾರ (ಫೆ.15) ಹೃದಯವಿದ್ರಾವಕ ವಿದಾಯ ಹೇಳಲಾಗಿದೆ. ಐದು ಮಕ್ಕಳ ಜೀವನಕ್ಕೆ ಬೆಳಕಾದ ಮಗು ಆಲಿನ್ ಅಬ್ರಾಹಂಳನ್ನು ರಾಜ್ಯ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Kerala CM Pinarayi Vijayan) ಅವರು, ಮಗುವಿನ ಪೋಷಕರ ನಿರ್ಧಾರವನ್ನು ಕರುಣೆಯ ಒಂದು ಸ್ಮರಣೀಯ ಕಾರ್ಯ ಎಂದು ಬಣ್ಣಿಸಿದ್ದಾರೆ. ನಟ ಕಮಲ್ ಹಾಸನ್ ಕೂಡ ಕುಟುಂಬಕ್ಕೆ ಸಂದೇಶ ಬರೆದಿದ್ದಾರೆ. ಆ ಮಗು ಐದು ಮಂದಿಗೆ ಬೆಳಕಾಗುವ ಮೂಲಕ ಜೀವಂತವಾಗಿದೆ ಎಂದು ಹೇಳಿದ್ದಾರೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಸಮ್ಮುಖದಲ್ಲಿ ಪಟ್ಟಣಂತಿಟ್ಟದ ಚರ್ಚ್‌ನ ಹೊರಗೆ ಮಗುವಿನ ಅಂತ್ಯಕ್ರಿಯೆ ನೆರವೇರಿತು. ಪೊಲೀಸ್ ಗೌರವದೊಂದಿಗೆ ಮಗುವಿನ ಅಂತ್ಯಕ್ರಿಯೆ ಮಾಡಲಾಯಿತು. ಪೋಷಕರು, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಐದು ಮಕ್ಕಳ ಜೀವನಕ್ಕೆ ಬೆಳಕಾದ 10 ತಿಂಗಳ ಕೂಸು; ಮೆದುಳು ನಿಷ್ಕ್ರಿಯವಾಗಿದ್ದ ಮಗುವಿನ ಅಂಗಾಂಗ ದಾನ

ದುಃಖದ ಮಧ್ಯೆಯೂ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಆಯ್ಕೆ ಮಾಡಿದ ಕಂದನ ಹೆತ್ತವರಿಗೆ ಗೌರವ ಸಲ್ಲಿಸುವ ಸಲುವಾಗಿ ಸರ್ಕಾರವು ಸರ್ಕಾರಿ ಅಂತ್ಯಕ್ರಿಯೆಯನ್ನು ಘೋಷಿಸಿತ್ತು. ಪೋಷಕರ ಈ ನಿರ್ಧಾರವನ್ನು ಧೈರ್ಯ ಮತ್ತು ಸಹಾನುಭೂತಿಯ ಕಾರ್ಯವೆಂದು ಸರ್ಕಾರ ಶ್ಲಾಘಿಸಿದೆ. ಈ ತಿಂಗಳ ಆರಂಭದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಗು ಆಲಿನ್, ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಳು.

ಮಗುವನ್ನು ಕಳೆದುಕೊಂಡ ನೋವಿನ ನಡುವೆಯೂ, ಪೋಷಕರಾದ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಪುಟ್ಟ ಕಂದಮ್ಮನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗುವ ಮೂಲಕ, ಪುಟ್ಟ ಅಲಿನ್ ಇತರ ಐವರು ಮಕ್ಕಳಿಗೆ ಹೊಸ ಜೀವನವನ್ನು ನೀಡಿದ್ದಾಳೆ. ಇದು ಕೇರಳದ ನಿಜವಾದ ಚೈತನ್ಯವನ್ನು ಪ್ರತಿಬಿಂಬಿಸುವ ಕರುಣೆಯ ಒಂದು ಸಾರ್ಥಕ ಕಾರ್ಯ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ನೋಯ್ಡಾದಲ್ಲಿ ಗುಂಡಿಗೆ ಮತ್ತೊಂದು ಸಾವು; ಆಟವಾಡುತ್ತಿದ್ದ ಮೂರು ವರ್ಷದ ಬಾಲಕ ಜೀವ ತೆಗೆದ ಅವೈಜ್ಞಾನಿಕ ಕಾಮಗಾರಿ

ಪತ್ತನಂತಿಟ್ಟ ಜಿಲ್ಲೆಯ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಅವರ ಪುತ್ರಿ ಆಲಿನ್ ಶೆರಿನ್ ಫೆಬ್ರವರಿ 5 ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಳು. ಮಗುವು ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಕಾರು ಜಂಕ್ಷನ್ ಬಳಿ ಅವರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು.

ಅಪಘಾತದಲ್ಲಿ ಶಿಶುವಿಗೆ ತೀವ್ರ ಗಾಯಗಳಾಗಿದ್ದು, ಆಕೆಯ ತಾಯಿ ಮತ್ತು ಅಜ್ಜಿಗೂ ಗಂಭೀರ ಗಾಯಗಳಾಗಿದ್ದವು. ಆರಂಭದಲ್ಲಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಗೆ ಸ್ಥಳಾಂತರಿಸಲಾಯಿತು. ತೀವ್ರ ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ, ಫೆಬ್ರವರಿ 12 ರಂದು ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ದೃಢಪಡಿಸಿದರು. ದುಃಖದ ಮಧ್ಯೆಯೂ ಆಕೆಯ ಪೋಷಕರು ಮಗುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.