Assault Case: ಸೊಸೈಟಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ವೋಟು ಹಾಕಿಸಿದ್ದಕ್ಕೆ ಯುವತಿ ಮೇಲೆ ಮಾರಣಾಂತಿಕ ಹಲ್ಲೆ!
Assault Case: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೋಳೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಹಾಕಿಸಿದ ಹಿನ್ನೆಲೆಯಲ್ಲಿ ಯುವತಿ ಮೇಲೆ ಜೆಡಿಎಸ್ ಕಾರ್ಯಕರ್ತರ ಗ್ಯಾಂಗ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.


ಮಂಡ್ಯ: ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಹಾಕಿಸಿದ್ದಕ್ಕಾಗಿ ಯುವತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ( Assault Case) ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಯಿಂದ ಯುವತಿಯ ತುಟಿ ಕಟ್ ಆಗಿದ್ದು, ಹಲ್ಲುಗಳು ಮುರಿದಿವೆ. ಈ ಸಂಬಂಧ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ಜೆಡಿಎಸ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಶಾಂತ್, ಪ್ರತಾಪ್ ರಾಜು, ಪ್ರಮೋದ್ ಹಾಗೂ ಹರೀಶ್ ಎಂಬುವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿಸಿದ್ದಕ್ಕೆ ಯುವತಿಯ ಮೇಲೆ ಜೆಡಿಎಸ್ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೆಡಿಎಸ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಶಾಂತ್ ಮತ್ತು ಗ್ಯಾಂಗ್ ಗೂಂಡಾಗಿರಿ ನಡೆಸಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ದೂರು ಕೊಟ್ಟಿದ್ದಕ್ಕೆ ರಘು ಮತ್ತು ವಿಕಾಸ್ ಕುಟುಂಬಸ್ಥರ ಮೇಲೂ ಹಲ್ಲೆ ನಡೆಸಲಾಗಿದೆ.
ಈ ಸುದ್ದಿಯನ್ನೂ ಓದಿ | Road Accident: ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ 10 ವರ್ಷದ ಬಾಲಕ ಸಾವು; ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿದ ಜನ
ಕೊಲೆ ಯತ್ನ; ಪೆನ್‌ಡ್ರೈವ್ ಸಮೇತ ದೂರು ನೀಡಿದ ರಾಜೇಂದ್ರ, ತನಿಖೆಗೆ ತಂಡ ರಚನೆ

ತುಮಕೂರು: ಸಹಕಾರ ಸಚಿವ ಕೇಂದ್ರ ಅವರ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್‌ಸಿ ರಾಜೇಂದ್ರ ರಾಜಣ್ಣ (Rajendra Rajanna) ಅವರು ತಮ್ಮ ಹತ್ಯೆಗೆ ಯತ್ನ ನಡೆದಿದೆ ಎಂಬ ತುಮಕೂರಿನ ಎಸ್‌ಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದರು. ಹೀಗಾಗಿ ಐವರು ಆರೋಪಿಗಳ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ಪ್ರಕರಣದ ತನಿಖೆಗೆ ಮಧುಗಿರಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ. ತನಿಖಾ ತಂಡದಲ್ಲಿ ಶಿರಾ ಗ್ರಾಮಾಂತರ ಸಿಪಿಐ ರಾಘವೇಂದ್ರ, ಕ್ಯಾತ್ಸಂದ್ರ ಠಾಣೆ ಪಿಎಸ್‌ಐ ಚೇತನ್ ಕೂಡ ಇದ್ದಾರೆ.
ಅನಾಮಧೇಯ ಮೂಲಗಳಿಂದ ಸಿಕ್ಕ ಆಡಿಯೊದಲ್ಲಿ ರಾಜೇಂದ್ರ ಕೊಲೆಗೆ ಸುಪಾರಿ ಬಗ್ಗೆ ಮಾತುಕತೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳಾದ ಸೋಮ, ಭರತ್, ಅಮಿತ್, ಗುಂಡ ಹಾಗೂ ಯತೀಶ್ ಅವರು ವಿಧಾನಪರಿಷತ್ ಸದಸ್ಯ ರಾಜೇಂದ್ರ ಕೊಲೆಗೆ 70 ಲಕ್ಷಕ್ಕೆ ಡೀಲ್ ಕುದುರಿಸಿದ್ದು, 5 ಲಕ್ಷ ರೂಪಾಯಿ ಮುಂಗಡವಾಗಿ ಪಡೆದಿದ್ದರು ಎನ್ನಲಾಗಿದೆ. ಹೀಗಾಗಿ ಇವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | MLC Rajendra Rajanna: ಹನಿ ಟ್ರ್ಯಾಪ್ ಇಲ್ಲ, ಕೊಲೆ ಯತ್ನ ನಡೆದಿದೆ: ಎಂಎಲ್‌ಸಿ ರಾಜೇಂದ್ರ ರಾಜಣ್ಣ
2024 ನವೆಂಬರ್ ತಿಂಗಳಿನಲ್ಲಿ ನನ್ನ ಕೊಲೆಗೆ ಸುಪಾರಿ ನೀಡಲಾಗಿತ್ತು. ನಾಲ್ಕು ತಿಂಗಳ ಹಿಂದೆ 5 ಲಕ್ಷಕ್ಕೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದೇನೆ, ಘಟನೆ ತುಮಕೂರಿನಲ್ಲಿ ನಡೆದಿರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ (MLC Rajendra Rajanna) ತಿಳಿಸಿದ್ದಾರೆ.
ನನ್ನ ಮಗಳ ಹುಟ್ಟಿದ ಹಬ್ಬದ ದಿನ ಕೊಲೆಗೆ ಯತ್ನ ನಡೆದಿತ್ತು. 70 ಲಕ್ಷ ರು.ಗೆ ಸುಪಾರಿ ನೀಡಲಾಗಿದ್ದು, ₹5 ಲಕ್ಷವನ್ನು ಪಾವತಿಸಲಾಗಿದೆ. ಇದಕ್ಕೆ ಸಂಬಂಧಿಸಿ ಒಂದು ಹುಡುಗಿಯು ಹುಡುಗನ ಜೊತೆ ಮಾತನಾಡುವ 18 ನಿಮಿಷದ ಆಡಿಯೋ ಇದೆ. ಸೋಮ ಮತ್ತು ಭರತ್ ಎನ್ನುವ ಹೆಸರು ಆಡಿಯೊದಲ್ಲಿ ಕೇಳಿ ಬಂದಿದೆ. ಅವರಿಬ್ಬರು ಯಾರಂತ ನನಗೆ ಗೊತ್ತಿಲ್ಲ. ದೂರಿನೊಂದಿಗೆ ಆಡಿಯೊ ಇರುವ ಪೆನ್‌ಡ್ರೈವ್ ಕೊಟ್ಟು ಭದ್ರತೆ ನೀಡುವಂತೆ ಕೇಳಿದ್ದೇನೆ ಎಂದು ರಾಜೇಂದ್ರ ಹೇಳಿದ್ದಾರೆ. ಜಿಪಿಎಸ್ ಚಿಪ್ ಅನ್ನು ಕಾರಿಗೆ ಅಳವಡಿಸಬೇಕೆಂದು ಸ್ಕೆಚ್ ಹಾಕಲಾಗಿತ್ತಂತೆ. ಜನವರಿಯಲ್ಲಿ ನನ್ನ ಸರ್ಕಲ್‌ನಲ್ಲಿ ಆಡಿಯೊ ಸಿಕ್ಕಿತು. ತಮಾಷೆ ಅಂತಾ ಸುಮ್ಮನಾಗಿದ್ದೆ. ಅದರೆ ಅದು ಗಂಭೀರ ವಿಷಯ ಎಂದು ಗೊತ್ತಾಗಿ ದೂರು ನೀಡಿದ್ದೇನೆ ಎಂದರು. ಹನಿಟ್ಯಾಪ್ ವಿಚಾರವಾಗಿ ಸಿಐಡಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದು ರಾಜೇಂದ್ರ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | MLC Rajendra Rajanna: ಎಂಎಲ್‌ಸಿ ರಾಜೇಂದ್ರ ಕೊಲೆಗೆ ಸಂಚು; ಐವರ ವಿರುದ್ಧ ಎಫ್‌ಐಆರ್ ದಾಖಲು