ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಒಕ್ಕಲಿಗ ಯುವ ಬ್ರಿಗೇಡ್‌ ಸೇವೆ ಯುವಜನರಿಗೆ ದಾರಿ ದೀಪ: ಸುತ್ತೂರು ಮಠದ ಶ್ರೀ ಜಯರಾಜೇಂದ್ರ ಸ್ವಾಮೀಜಿ

ಪಿರಿಯಾಪಟ್ಟಣ ತಾಲೂಕಿನ ಮಾನಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್‌ನ ವತಿಯಿಂದ ರಾಜ್ಯ ಮಟ್ಟದ ಉದ್ಯೋಗ ಮೇಳ, ಪ್ರಗತಿಪರ ರೈತರಿಗೆ ಉಚಿತ ಮಲೆನಾಡು ಗಿಡ್ಡಗಳ ವಿತರಣೆ ಮತ್ತು ಕಾಯಕಯೋಗಿಗಳಿಗೆ “ನಮ್ಮೂರ ಹೆಮ್ಮೆ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ ಜರುಗಿತು.

ಒಕ್ಕಲಿಗ ಯುವ ಬ್ರಿಗೇಡ್‌ನ ಸೇವೆಗಳು ಯುವಜನರಿಗೆ ದಾರಿ ದೀಪ

-

Profile
Siddalinga Swamy Sep 29, 2026 3:21 PM

ಪಿರಿಯಾಪಟ್ಟಣ, ಸೆ.29: ಒಕ್ಕಲಿಗ ಯುವ ಬ್ರಿಗೇಡ್‌ನ ವತಿಯಿಂದ ಪಿರಿಯಾಪಟ್ಟಣ ತಾಲೂಕಿನ ಮಾನಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ರಾಜ್ಯ ಮಟ್ಟದ ಉದ್ಯೋಗ ಮೇಳ, ಪ್ರಗತಿಪರ ರೈತರಿಗೆ ಉಚಿತ ಮಲೆನಾಡು ಗಿಡ್ಡಗಳ ವಿತರಣೆ ಮತ್ತು ಕಾಯಕಯೋಗಿಗಳಿಗೆ “ನಮ್ಮೂರ ಹೆಮ್ಮೆ ಪ್ರಶಸ್ತಿ” ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಜಯರಾಜೇಂದ್ರ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ಒಕ್ಕಲಿಗ ಯುವ ಬ್ರಿಗೇಡ್‌ನ ಸೇವೆಗಳು ಯುವ ಜನರಿಗೆ ದಾರಿದೀಪವಾಗಿವೆ. ನಿಸ್ವಾರ್ಥವಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ನಂಜೇಗೌಡ ನಂಜುಂಡ ಅವರನ್ನು ಮುಕ್ತಕಂಠದಿಂದ ಶ್ಲ್ಯಾಘಿಸಿದರು.

ಉದ್ಯೋಗಮೇಳದಲ್ಲಿ 25ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ, 573 ಜನರಿಗೆ ಸ್ಥಳದಲ್ಲೇ ಉದ್ಯೋಗ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ಉಚಿತವಾಗಿ ಮಲೆನಾಡು ಗಿಡ್ಡಗಳನ್ನು ವಿತರಿಸಲಾಯಿತು ಮತ್ತು ಕಾಯಕಯೋಗಿಗಳಿಗೆ “ನಮ್ಮೂರ ಹೆಮ್ಮೆ ಪ್ರಶಸ್ತಿ” ಪ್ರದಾನ ಮಾಡಲಾಯಿತು.

ವೈದ್ಯಕೀಯ ಶಿಕ್ಷಣದಲ್ಲಿ ಅಂಕ ಗಳಿಕೆಗಿಂತ ಸಮರ್ಪಣಾ ಭಾವ ಮುಖ್ಯ: ಡಾ. ಎಚ್.ಬಸವನಗೌಡಪ್ಪ

ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ, ಕನ್ನಡ ಮಠದ ಪೂಜ್ಯ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಆಲಮಟ್ಟಿ ಮಠದ ಶರತ್ ಚಂದ್ರ ಸ್ವಾಮೀಜಿ, ಇಟಲಿ ಕನ್ನಡ ಸಂಘದ ಮಂಜುನಾಥ್, ಡಾ. ರಂಗಸ್ವಾಮಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.