Navaratri Fashion 2025: ನವರಾತ್ರಿಯಲ್ಲಿ ನಿಮ್ಮನ್ನು ಬ್ರೈಟ್ ಆಗಿ ಬಿಂಬಿಸುವ ಆರೆಂಜ್ ವರ್ಣ
Navaratri Fashion 2025: ನವರಾತ್ರಿಯಲ್ಲಿ ಆರೆಂಜ್ ವರ್ಣವು ಆಕರ್ಷಕವಾಗಿ ಕಂಗೊಳಿಸಲು ಸಹಕಾರಿ ಮಾತ್ರವಲ್ಲ, ನಿಮ್ಮನ್ನು ಇರುವುದಕ್ಕಿಂತ ಹೆಚ್ಚಾಗಿ ಬ್ರೈಟಾಗಿ ಬಿಂಬಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಅದು ಹೇಗೆ? ಎಂಬುದರ ಬಗ್ಗೆ ಒಂದಿಷ್ಟು ಐಡಿಯಾ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಗಳು: ಅಶ್ವಿನಿ ಭಟ್ -


ಆರೆಂಜ್ ಬಣ್ಣ ಅಂದರೇ, ಕಿತ್ತಳೆ ವರ್ಣ ನೋಡಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ನೂರು ಜನರ ಮಧ್ಯೆಯೂ ಎದ್ದು ಕಾಣುವಂತಹ ವರ್ಣವಿದು. ಹಾಗಾಗಿಯೇ ಫ್ಯಾಷನಿಸ್ಟಾಗಳು ಈ ಬಣ್ಣವನ್ನು ಬೋಲ್ಡ್ ಕಲರ್ ಲಿಸ್ಟ್ಗೆ ಸೇರಿಸಿದ್ದಾರೆ. ಅಲ್ಲದೇ, ಕಿತ್ತಳೆ ವರ್ಣವನ್ನು ಹ್ಯಾಪಿ ಕಲರ್ ಎಂದು ಕೂಡ ಕರೆಯಲಾಗುತ್ತದೆ. ಈ ಕಿತ್ತಳೆ ಶೇಡ್ನ ಸೀರೆ ಹಾಗೂ ಡಿಸೈನರ್ವೇರ್ ಧರಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಮತ್ತಷ್ಟು ಅತ್ಯಾಕರ್ಷಕವಾಗಿ ಕಾಣಿಸುವುದರ ಬಗ್ಗೆ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ಡಿಸೈನರ್ಸ್.

ಕಿತ್ತಳೆಯ ನಾನಾ ಶೇಡ್ಗಳು
ಅಂದ ಹಾಗೆ, ಕಿತ್ತಳೆಯಲ್ಲೂ ನಾನಾ ಶೇಡ್ಗಳು ಸೇರಿವೆ. ಕಿತ್ತಳೆ ವರ್ಣದಲ್ಲಿ ಕೇಸರಿ, ತಿಳಿ ಕೇಸರಿ, ಮಾರ್ಸೆಲ್ಲಾ, ಬ್ರಿಕ್ ಆರೆಂಜ್ ಹೀಗೆ ಸಾಕಷ್ಟು ವರ್ಣಗಳು ಕಂಬೈನ್ ಆಗಿವೆ. ಈ ವರ್ಣ ಭಾರತೀಯರಿಗೆ ಅತಿ ಹೆಚ್ಚು ಹೊಂದುತ್ತವೆ ಎಂದು ಸಾಕಷ್ಟು ಬ್ಯೂಟಿ ಸಮೀಕ್ಷೆಗಳು ಸಾಬೀತು ಪಡಿಸಿವೆ ಕೂಡ.
ಕಿತ್ತಳೆ ವರ್ಣದ ಸೀರೆಯ ಕಮಾಲ್
ನವರಾತ್ರಿಗೆ ಕಿತ್ತಳೆ ವರ್ಣದ ಸೀರೆಯನ್ನು ಧರಿಸಿದಾಗ ಆದಷ್ಟೂ ಕಾಂಟ್ರಾಸ್ಟ್ ಬ್ಲೌಸ್ಗಳನ್ನು ಅವಾಯ್ಡ್ ಮಾಡಿ. ಎಲ್ಲದಕ್ಕಿಂತ ಹೆಚ್ಚಾಗಿ ಈ ವರ್ಣಕ್ಕೆ ಹೆಚ್ಚು ಆಕ್ಸೆಸರೀಸ್ನ ಅಗತ್ಯವಿಲ್ಲ. ಯಾಕೆಂದರೆ, ಸೀರೆಯೇ ಎದ್ದು ಕಾಣುವುದರಿಂದ ಸಿಂಪಲ್ ಆಕ್ಸೆಸರೀಸ್ಗಳನ್ನು ಧರಿಸಿದರಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಈಗಾಗಲೇ ನಿಮ್ಮ ಬಳಿ ರೇಷ್ಮೆಯ ಆರೆಂಜ್ ಸೀರೆಗಳು ಇದ್ದಲ್ಲಿ ಅವನ್ನು ಡಿಫರೆಂಟ್ ಡ್ರೆಪಿಂಗ್ ಮಾಡಿ, ಉಡಿ. ಆಗ ವಿಭಿನ್ನ ಲುಕ್ ನಿಮ್ಮದಾಗುವುದು. ಇವಕ್ಕೆ ಗೋಲ್ಡನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಕಿತ್ತಳೆ ವರ್ಣದ ಡಿಸೈನರ್ವೇರ್ಸ್
ಇಂದು ಕಿತ್ತಳೆ ವರ್ಣದ ಅನಾರ್ಕಲಿ, ಸೆಲ್ವಾರ್, ಗಾಗ್ರ, ಮ್ಯಾಕ್ಸಿ, ಗೌನ್ ಹಾಗೂ ಲೆಹೆಂಗಾಗಳು ಗ್ರ್ಯಾಂಡ್ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿವೆ. ಅದರಲ್ಲೂ ಫ್ರಾಕ್ ಶೈಲಿಯವು ಸೆಮಿ ಎಥ್ನಿಕ್ನಲ್ಲಿ ಬಂದಿವೆ. ಇವುಗಳನ್ನು ಧರಿಸಿದಾಗ ಇಂಡೋ - ವೆಸ್ಟರ್ನ್ ಲುಕ್ ನೀಡುತ್ತವೆ.

ಹೇರ್ಸ್ಟೈಲ್ಗೆ ಹೂವಿನ ಅಲಂಕಾರ
ಕಿತ್ತಳೆ ವರ್ಣದ ಡಿಸೈನರ್ವೇರ್ ಹಾಗೂ ಸೀರೆ ಧರಿಸಿದಾಗ ಕೂದಲಿಗೆ ಕನಕಾಂಬರ ಹೂವಿನ ದಂಡೆ ಮುಡಿದರೆ ಚೆನ್ನಾಗಿ ಕಾಣುತ್ತದೆ. ಇನ್ನು ಗೋಲ್ಡನ್ ಆರ್ಟಿಫಿಶಿಯಲ್ ದಂಡೆಗಳನ್ನು ಹಾಕಿಕೊಳ್ಳಬಹುದು. ಇದು ಗ್ರ್ಯಾಂಡ್ ಲುಕ್ ನೀಡುತ್ತದೆ ಎನ್ನುತ್ತಾರೆ ಡಿಸೈನರ್ ದೀಕ್ಷಾ.

ಕಿತ್ತಳೆ ವರ್ಣದ ಉಡುಪು ಅಥವಾ ಸೀರೆ ಪ್ರಿಯರು ಪಾಲಿಸಬೇಕಾದ ಟಿಪ್ಸ್
- ಗೋಲ್ಡನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ.
- ಹೇರ್ಬನ್ ಅಥವಾ ಬ್ರೈಡ್ ಡಿಸೈನ್ಹಾಕಿಕೊಳ್ಳಿ.
- ಟ್ರೆಡಿಷನಲ್ ಹಾಗೂ ವೆಸ್ಟರ್ನ್ ಲುಕ್ಎರಡೂ ಓಕೆ.
- ಹಣೆಗೆ ಅಗಲವಾದ ಬಂಗಾಲಿ ಬಿಂದಿ ಇಡಿ.