ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RSS leader: ಆರೆಸ್ಸೆಸ್‌ ಹಿರಿಯ ಪ್ರಚಾರಕ ಸದಾಶಿವ ಇನ್ನಿಲ್ಲ

ಮೃತ ಸದಾಶಿವ ಅವರು ಆರೋಗ್ಯ ಭಾರತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಮೃತರು ತಮ್ಮ ತನು ಮನ ಧನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS leader) ಮೂಲಕ ದೇಶ ಸೇವೆಗಾಗಿ ಮುಡಿಪಾಗಿರಿಸಿದ್ದರು. ನಾನಾ ಗಣ್ಯರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಆರೆಸ್ಸೆಸ್‌ ಹಿರಿಯ ಪ್ರಚಾರಕ ಸದಾಶಿವ ಇನ್ನಿಲ್ಲ

ಸದಾಶಿವ

ಹರೀಶ್‌ ಕೇರ ಹರೀಶ್‌ ಕೇರ May 5, 2025 10:33 AM

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜ್ಯೇಷ್ಠ ಪ್ರಚಾರಕರೂ, ಸೇವಾವಿಭಾಗದ ಹಲವಾರು ಆಯಾಮಗಳಿಗೆ ಮಾರ್ಗದರ್ಶಕರು (RSS leader) ಆಗಿದ್ದ, ಆರೋಗ್ಯ ಭಾರತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸದಾಶಿವ (70) (Sadashiva) ಭಾನುವಾರ ರಾತ್ರಿ (Passes away) ವಿಧಿವಶರಾಗಿದ್ದಾರೆ. ಇಂದು ಬೆಳಿಗ್ಗೆ 7ರಿಂದ 9 ಗಂಟೆಯ ವರೆಗೆ ಕೇಶವಕೃಪಾದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಯಿತು.

ನಂತರ ಹಾಸನದ ಹತ್ತಿರದ ಆಲೂರಿನ ಪಕ್ಕದಲ್ಲಿರುವ ಯಡೂರಿನ ಅವರ ಜಮೀನಿಗೆ ಮೃತರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿದ್ದು, ಅಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತರು ತಮ್ಮ ತನು ಮನ ಧನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ದೇಶ ಸೇವೆಗಾಗಿ ಮುಡಿಪಾಗಿರಿಸಿದ್ದರು. ನಾನಾ ಗಣ್ಯರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

"ಸಮಾಜ ಕಾರ್ಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡ ಸದಾಶಿವವರು ಸದಾ ಹಸನ್ಮುಖರಾಗಿ ಕಾರ್ಯ ಮಾಡುತ್ತಿದ್ದ ಅವರ ಶೈಲಿ ಎಲ್ಲರ ಮನವನ್ನು ಗೆಲ್ಲುತ್ತಿತ್ತು. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Narendra Modi: ಪ್ರಧಾನಿಯಾದ ಬಳಿಕ ಮೊದಲ ಬಾರಿ RSS ಕಚೇರಿಗೆ ಮೋದಿ ಭೇಟಿ; ಹೆಡ್ಗೆವಾರ್‌ಗೆ ಪುಷ್ಪ ನಮನ ಸಲ್ಲಿಕೆ