ಐರನ್ ಮ್ಯಾನ್ 70.3 ಪೂರ್ಣಗೊಳಿಸಿ ಸಾಧನೆ ಮಾಡಿದ ಬೀಹೈವ್ ಸ್ಥಾಪಕ, ಸಿಇಓ ಶೇಷ್ ರಾವ್ ಪಾಪ್ಲಿಕರ್
ವಿಶ್ವದ ಅತ್ಯಂತ ಕಠಿಣ ಸಹಿಷ್ಣುತಾ ರೇಸ್ ಗಳಲ್ಲಿ ಒಂದಾಗಿರುವ ಐರನ್ ಮ್ಯಾನ್ 70.3 ಸ್ಪರ್ಧೆ ಯಲ್ಲಿ ಒಟ್ಟು 113 ಕಿಮೀ (70.3 ಮೈಲಿಗಳು) ದೂರವನ್ನು ಕ್ರಮಿಸಬೇಕಿರುತ್ತದೆ. ಇದರಲ್ಲಿ 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟದ ಸ್ಪರ್ಧೆ ಇರುತ್ತದೆ. ಶೇಷ್ ಅವರು ಈ ರೇಸ್ ಅನ್ನು 7 ಗಂಟೆ 51 ನಿಮಿಷ 54 ಸೆಕೆಂಡ್‌ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈಜು 47:22 ನಿಮಿಷಗಳು, ಸೈಕ್ಲಿಂಗ್ 3:21:42 ಗಂಟೆಗಳು ಮತ್ತು ಓಟ 3:09:41 ಗಂಟೆಗಳನ್ನು ಅವರು ತೆಗೆದು ಕೊಂಡರು.
-
ವಿಶ್ವದ ಮೊದಲ ಫ್ಲೆಕ್ಸ್ ವರ್ಕ್ ಸ್ಪೇಸ್ ಸಂಸ್ಥಾಪಕ ಎಂಬ ಹೆಗ್ಗಳಿಕೆ ಹೊಂದಿದವರಿಂದ ಮಹತ್ವದ ಸಾಧನೆ
ಬೆಂಗಳೂರು: ಬೀಹೈವ್ ವರ್ಕ್‌ಸ್ಪೇಸ್ ನ ಸ್ಥಾಪಕ ಮತ್ತು ಸಿಇಒ ಶೇಷ್ ರಾವ್ ಪಾಪ್ಲಿಕರ್ ಅವರು ಅತ್ಯಂತ ಕಠಿಣವಾಗಿರುವ 'ಐರನ್ ಮ್ಯಾನ್ 70.3 ಗೋವಾ' ಸ್ಪರ್ಧೆಯನ್ನು ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಪೂರ್ಣಗೊಳಿಸಿ ಮಹತ್ವದ ಸಾಧನೆ ಮಾಡಿದ್ದಾರೆ.
ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಫ್ಲೆಕ್ಸ್ ವರ್ಕ್ ಸ್ಪೇಸ್ ಸಂಸ್ಥಾಪಕ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಹಸದಲ್ಲಿ ಬೀಹೈವ್ ಸಂಸ್ಥೆಯ ಉದ್ಯೋಗಿಗಳ ತಂಡವೂ ಅವರೊಂದಿಗೆ ಭಾಗವಹಿಸಿದ್ದು, ಈ ಸಾಧನೆಯು ಕಂಪನಿಯ ಸಹಿಷ್ಣುತೆ, ಟೀಮ್ ವರ್ಕ್ ಮತ್ತು ಮಾನಸಿಕ ಶಕ್ತಿಯ ಪ್ರತೀಕವಾಗಿ ಹೊರಹೊಮ್ಮಿದೆ.
ವಿಶ್ವದ ಅತ್ಯಂತ ಕಠಿಣ ಸಹಿಷ್ಣುತಾ ರೇಸ್ ಗಳಲ್ಲಿ ಒಂದಾಗಿರುವ ಐರನ್ ಮ್ಯಾನ್ 70.3 ಸ್ಪರ್ಧೆ ಯಲ್ಲಿ ಒಟ್ಟು 113 ಕಿಮೀ (70.3 ಮೈಲಿಗಳು) ದೂರವನ್ನು ಕ್ರಮಿಸಬೇಕಿರುತ್ತದೆ. ಇದರಲ್ಲಿ 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟದ ಸ್ಪರ್ಧೆ ಇರುತ್ತದೆ. ಶೇಷ್ ಅವರು ಈ ರೇಸ್ ಅನ್ನು 7 ಗಂಟೆ 51 ನಿಮಿಷ 54 ಸೆಕೆಂಡ್‌ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈಜು 47:22 ನಿಮಿಷಗಳು, ಸೈಕ್ಲಿಂಗ್ 3:21:42 ಗಂಟೆಗಳು ಮತ್ತು ಓಟ 3:09:41 ಗಂಟೆಗಳನ್ನು ಅವರು ತೆಗೆದು ಕೊಂಡರು.
ತಮ್ಮ ಈ ಸಾಧನೆಯ ಬಗ್ಗೆ ಮಾತನಾಡಿದ ಬೀಹೈವ್ ವರ್ಕ್ ಸ್ಪೇಸ್ ನ ಸ್ಥಾಪಕ ಮತ್ತು ಸಿಇಒ ಶೇಷ್ ರಾವ್ ಪಾಪ್ಲಿಕರ್ ಅವರು, "ಐರನ್ ಮ್ಯಾನ್ ಗೋವಾ 2025ರ ಭಾಗವಾಗಿದ್ದು ಮತ್ತು ನನ್ನ ಮೊದಲ ಪ್ರಯತ್ನದಲ್ಲೇ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ನನಗೆ ಅತೀವ ಸಂತೋಷ ತಂದಿದೆ. ಈ ಇಡೀ ಪ್ರಯಾಣವು ಒಂದು ಅದ್ಭುತ ಅನುಭವವಾಗಿತ್ತು ಮತ್ತು ಅಂತಿಮ ಗೆರೆಯನ್ನು ದಾಟಿದ ಕ್ಷಣ ನಿಜಕ್ಕೂ ವಿಶೇಷವಾಗಿತ್ತು. ಈ ಕಾರ್ಯಕ್ರಮವನ್ನು ವಿಶ್ವದರ್ಜೆಯ ಗುಣಮಟ್ಟದಲ್ಲಿ ಆಯೋಜಿಸಲಾಗಿತ್ತು. ಇಂತಹ ಅದ್ಭುತ ಸ್ಪರ್ಧೆ ಸ್ಥಾಪಿಸಿದ್ದಕ್ಕಾಗಿ ಯೋಸ್ಕಾ ಮತ್ತು ದೀಪಕ್ ರಾಜ್ ಅವರಿಗೆ ಅಭಿನಂದನೆಗಳು. ಇದು ಐರನ್ ಮ್ಯಾನ್ ಇಂಡಿಯಾದ ಐದನೇ ಆವೃತ್ತಿಯಾಗಿದ್ದು, ಈ ಕಾರ್ಯಕ್ರಮವು ನಮ್ಮ ದೇಶದಲ್ಲಿ ಕ್ರೀಡೆಗಳ ಬೆಳವಣಿಗೆಗೆ ಪ್ರಮುಖ ಪ್ರೇರಕ ಶಕ್ತಿಯಾಗಲಿದೆ ಎಂದು ನಾನು ನಂಬುತ್ತೇನೆ" ಎಂದು ಹೇಳಿದ್ದಾರೆ.
ಶೇಷ್ ಅವರ ಈ ಮೊದಲ ಐರನ್ ಮ್ಯಾನ್ ಯಶಸ್ಸು ಪ್ರತಿದಿನದ ಶಿಸ್ತು, ಕ್ರಮಬದ್ಧ ಯೋಜನೆ ಮತ್ತು ಆತ್ಮವಿಶ್ವಾಸವನ್ನು ಸಾರಿದೆ. ಇದೇ ತತ್ವಗಳು ಬೀಹೈವ್ ಸಂಸ್ಥೆಯನ್ನು ಕಟ್ಟುವಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ. ಬೀಹೈವ್ ಉದ್ಯೋಗಿಗಳೊಂದಿಗೆ ಈ ಪಯಣವನ್ನು ಹಂಚಿಕೊಂಡಿದ್ದು ಈ ಅನುಭವವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದೆ ಮತ್ತು 'ಯಶಸ್ಸು ಎಂಬುದು ಯಾವಾ ಗಲೂ ಟೀಮ್ ವರ್ಕ್' ಎಂಬ ಅವರ ನಂಬಿಕೆಯನ್ನು ಗಟ್ಟಿಗೊಳಿಸಿದೆ.
ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ
ಸಹಿಷ್ಣುತೆ ಮತ್ತು ಚೇತರಿಸಿಕೊಳ್ಳುವ ಶಕ್ತಿ ಪರೀಕ್ಷೆ
ಐರನ್ ಮ್ಯಾನ್ ಗೋವಾ ರೇಸ್ ಕುತೂಹಲಕರವಾಗಿ ಮೂಡಿ ಬಂತು. ಬೆಳಿಗ್ಗೆ ಶೇಷ್ ಅವರು 1.9 ಕಿಮೀ ಸಮುದ್ರದ ಈಜನ್ನು ಅತ್ಯಂತ ವೇಗವಾಗಿ ಆರಂಭಿಸಿದರು, ಆದರೆ ಅನಿರೀಕ್ಷಿತವಾಗಿ ಜೆಲ್ಲಿ ಫಿಶ್ ಕಚ್ಚಿದ ಕಾರಣ ಅವರ ಲಯಕ್ಕೆ ಅಡ್ಡಿಯಾಯಿತು. ಮೈ ಊತ, ನೋವು ಮತ್ತು ಸ್ನಾಯು ಸೆಳೆತದ ಹೊರತಾಗಿಯೂ, ಅವರು ಧೃತಿಗೆಡದೆ ಸೈಕ್ಲಿಂಗ್ ಮತ್ತು ಓಟದ ಹಂತಗಳನ್ನು ಮುಂದು ವರಿಸಿದರು. ತಮ್ಮ ಕಾರ್ಯತಂತ್ರವನ್ನು ಬದಲಿಸುತ್ತಾ, ಪೌಷ್ಟಿಕಾಂಶದ ಸಮತೋಲನ ಕಾಯ್ದು ಕೊಳ್ಳುತ್ತಾ ಮತ್ತು ಕೇವಲ ಮಾನಸಿಕ ದೃಢತೆಯ ಬಲದಿಂದ ತಾವು ಆರಂಭಿಸಿದ ಪಯಣವನ್ನು ಯಶಸ್ವಿಯಾಗಿ ಮುಗಿಸಿದರು.
ಈ ಸಾಹಸದಲ್ಲಿ ಶೇಷ್ ಅವರ ಜೊತೆಗೆ ಬೀಹೈವ್ ಉದ್ಯೋಗಿಗಳಾದ ಮೆಲ್ವಿನ್ ಮುತ್ತಣ್ಣ, ಅನಿಕೇತನ್ ಹೆಚ್.ವಿ.ಯು, ಆದಿಶೇಷ ಸಂದೀಪ್ ಮೂರ್ತಿ, ರವೀಂದ್ರ ಎಂ.ಕೆ. ಮತ್ತು ರಿತಿಕ್ ಶಿವಾಜಿ ಪಾಲ್ಗೊಂಡಿದ್ದರು.
ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, “ನಮ್ಮ ಸಿಇಒ ಅವರೊಂದಿಗೆ ಐರನ್ ಮ್ಯಾನ್ ಗೋವಾದಲ್ಲಿ ಭಾಗವಹಿಸಿದ್ದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವಂತಹ ಅದ್ಭುತ ಅನುಭವ. ಸಹಿಷ್ಣುತೆ ಎಂಬುದು ಕೇವಲ ದೈಹಿಕ ಮಾತ್ರವಲ್ಲ, ಅದು ಮಾನಸಿಕ ಶಕ್ತಿ ಎಂಬುದನ್ನು ಇದು ನಮಗೆ ನೆನಪಿಸಿತು. ಶೇಷ್ ಅವರು ಮುಂಚೂಣಿಯಲ್ಲಿ ನಿಂತು ನಾಯಕತ್ವ ವಹಿಸಿದ್ದನ್ನು ನೋಡಿ ನಮಗೆ ಸ್ಫೂರ್ತಿ ಸಿಕ್ಕಿತು. ನಮ್ಮ ದೈನಂದಿನ ಕೆಲಸ ಮತ್ತು ವೈಯಕ್ತಿಕ ಗುರಿ ಸಾಧನೆ ಕಡೆಗೂ ಗಮನ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಲು ಈ ಸ್ಪರ್ಧೆ ಪ್ರೇರೇಪಿಸಿತು. ಸಿದ್ಧತೆ, ಟೀಮ್ ವರ್ಕ್ ಮತ್ತು ಮಿತಿಗಳನ್ನು ಮೀರಿ ಬೆಳೆಯುವುದರ ಮೌಲ್ಯವನ್ನು ಈ ರೇಸ್ ನಮಗೆ ಕಲಿಸಿದೆ. ಈ ಪಾಠಗಳನ್ನು ನಾವು ಬೀಹೈವ್ ಸಂಸ್ಥೆಯಲ್ಲಿಯೂ ಅಳವಡಿಸಿಕೊಳ್ಳುತ್ತೇವೆ” ಎಂದು ಹೇಳಿದರು.
ಹಳೆಯ ಕನಸಿಗೆ ಮರುಜೀವ
ಶೇಷ್ ಅವರ ಈ ಟ್ರಯಥ್ಲಾನ್ ಪಯಣ ಸುಮಾರು ಎರಡು ದಶಕಗಳ ಹಿಂದೆಯೇ ಆರಂಭವಾಗಿತ್ತು. ಕಾಲೇಜು ದಿನಗಳಲ್ಲಿ ಮ್ಯಾರಥಾನ್ ಕ್ರೀಡಾಪಟುವಾಗಿದ್ದ ಇವರು, 2007ರಲ್ಲಿ 'ನ್ಯೂಯಾರ್ಕ್ ಮ್ಯಾರಥಾನ್' ಪೂರ್ಣಗೊಳಿಸಿದ್ದರು. ಈ ಅನುಭವವೇ ಅವರಲ್ಲಿ ಐರನ್ ಮ್ಯಾನ್ ಪ್ರಯತ್ನಿಸುವ ಕನಸಿನ ಬೀಜ ಬಿತ್ತಿತ್ತು. ಆದರೆ ಬೀಹೈವ್ ಬೆಳೆಯುತ್ತಾ ಹೋದಂತೆ ಮತ್ತು ಜವಾಬ್ದಾರಿಗಳು ಹೆಚ್ಚಾ ದಂತೆ, ದೈಹಿಕ ಫಿಟ್‌ನೆಸ್ ಹಿನ್ನಡೆಗೆ ಸರಿಯಿತು.
ಆದರೆ ಈ ವರ್ಷದ ಆರಂಭದಲ್ಲಿ ಎಲ್ಲವೂ ಬದಲಾಯಿತು. ಅವರ 'ವೂಪ್' ಟ್ರ್ಯಾಕರ್ ನೀಡಿದ ಸಣ್ಣ ಸೂಚನೆ, ಸ್ನೇಹಿತರು ಮತ್ತು ಸಹ-ಸಂಸ್ಥಾಪಕರ ಪ್ರೋತ್ಸಾಹ ಹಾಗೂ ಸೋಶಿಯಲ್ ಮೀಡಿಯಾ ದಲ್ಲಿ ಅವರಿಗೆ ದೊರೆತ ಸಾರ್ವಜನಿಕ ಪ್ರೋತ್ಸಾಹ ಆ ಹಳೆಯ ಕನಸಿಗೆ ಮರುಜೀವ ನೀಡಿತು. ಆ ಕ್ಷಣದಿಂದ ಅವರು ಹಿಂದೆ ತಿರುಗಿ ನೋಡಲಿಲ್ಲ.
ಮುಂಜಾನೆಯ ಈಜು, ಬೆಂಗಳೂರಿನ ಹೊರವಲಯದಲ್ಲಿ ಸೈಕ್ಲಿಂಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ಓಟ- ಹೀಗೆ ಶಿಸ್ತುಬದ್ಧ ತರಬೇತಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರು. ತರಬೇತುದಾರರ ಮಾರ್ಗದರ್ಶನ ಮತ್ತು ತರಬೇತಿ ತಂಡದ ಸಹಾಯದಿಂದ, ಶೇಷ್ ಅವರು ತಮ್ಮ ಸಹಿಷ್ಣುತೆಯನ್ನು ಮರುರೂಪಿಸಿಕೊಂಡರು. ಭಾರತದ ಪ್ರಮುಖ ವರ್ಕ್ ಸ್ಪೇಸ್ ಗಳಲ್ಲಿ ಒಂದಾದ ಬಿಹೈವ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿ ತಮ್ಮ ಕೆಲಸದ ಒತ್ತಡದ ನಡುವೆಯೇ ಮುಂಜಾನೆಯ ವ್ಯಾಯಾಮ ಗಳನ್ನು ಅವರು ಮಾಡಿದರು.
ತಮ್ಮ ಈ ಸಿದ್ಧತೆಗೆ ಆಧುನಿಕ ತಂತ್ರಜ್ಞಾನ ಮತ್ತು ದತ್ತಾಂಶ ಆಧಾರಿತ ಒಳನೋಟಗಳೇ ಕಾರಣ ಎಂದು ಶೇಷ್ ಹೇಳುತ್ತಾರೆ. ತರಬೇತಿಯನ್ನು ರೂಪಿಸಲು, ಚೇತರಿಕೆ ಕಡೆಗೆ ಗಮನ ಹರಿಸಲು, ಪೌಷ್ಟಿಕಾಂಶದ ಯೋಜನೆ ಸಿದ್ಧಪಡಿಸಲು ಮತ್ತು ತರಬೇತಿಯ ಅವಧಿಯಲ್ಲಿನ ಪ್ರದರ್ಶನದ ಅಂಕಿಅಂಶಗಳನ್ನು ವಿಶ್ಲೇಷಿಸಲು ಎಐ ಮತ್ತು ಚಾಟ್ ಜಿಪಿಟಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಕೃತಜ್ಞತೆ ಸಲ್ಲಿಸುತ್ತಾರೆ.
ಉದ್ಯಮಕ್ಕೆ ಸಹಿಷ್ಣುತೆ ಗಳಿಸಿಕೊಳ್ಳುವುದು ಬೀಹೈವ್ ಮನೋಭಾವ
ಶೇಷ್ ಅವರ ಪಾಲಿಗೆ, ಐರನ್ ಮ್ಯಾನ್ ಎಂಬುದು ಕೇವಲ ಒಂದು ಕ್ರೀಡಾ ಸಾಧನೆಯಲ್ಲ, ಬದಲಿಗೆ ಅದು ಉದ್ಯಮಶೀಲತೆಯ ಯಶಸ್ಸಿಗೂ ಒಂದು ರೂಪಕವಾಗಿದೆ. "ಒಂದು ಕಂಪನಿಯನ್ನು ಕಟ್ಟುವುದು ಮ್ಯಾರಥಾನ್ ಓಟದಂತೆಯೇ ಹೊರತು, ಅದು ಅಲ್ಪ ವೇಗದ ಓಟವಲ್ಲ" ಎಂದು ಅವರು ಪದೇ ಪದೇ ಹೇಳುತ್ತಾರೆ. ಈ ತತ್ವವು ಈಗ ಬೀಹೈವ್ ನ ಕ್ಷೇಮ ಮತ್ತು ಕೆಲಸ-ಜೀವನದ ಸಮನ್ವಯದ ಸಂಸ್ಕೃತಿಯಲ್ಲಿ ಪ್ರತಿಫಲಿಸುತ್ತಿದೆ.
ಅವರ ನಾಯಕತ್ವದಲ್ಲಿ, ಬೀಹೈವ್ ತನ್ನ ಸದಸ್ಯರು ಮತ್ತು ಉದ್ಯೋಗಿಗಳಿಗೆ "ವರ್ಕ್ ಲೈಫ್ ಹಾರ್ಮನಿ" (ಕೆಲಸ-ಜೀವನದ ಸಮನ್ವಯ) ಎಂಬ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ನಡುವೆ ಹೊಂದಾಣಿಕೆಯನ್ನು ಕಂಡುಕೊಳ್ಳುವುದರ ಮೇಲೆ ಗಮನ ಹರಿಸುತ್ತದೆ. ದೈಹಿಕ ಫಿಟ್ ನೆಸ್ ಮತ್ತು ಭಾವನಾತ್ಮಕ ಕ್ಷೇಮವನ್ನು ಉತ್ತೇಜಿಸುವ ಸಕಾರಾತ್ಮಕ ಕೆಲಸದ ವಾತಾವರಣವನ್ನು ಬೀಹೈವ್ ನಿರ್ಮಿಸುತ್ತಿದೆ. ಮೀಸಲಾದ ಕ್ರೀಡಾ ವಲಯಗಳು, ಪಿಕಲ್ ಬಾಲ್, ಫುಟ್ ಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿಗಳಂತಹ ಫಿಟ್ ನೆಸ್ ಆಧಾರಿತ ಯೋಜನೆಗಳು ಮತ್ತು ಆರೋಗ್ಯ ತಪಾಸಣೆಗಳ ಮೂಲಕ, ಬೀಹೈವ್ ಫಿಟ್ ನೆಸ್ ಅನ್ನು ಕೇವಲ ಸಾಂದರ್ಭಿಕ ಪ್ರಯತ್ನವನ್ನಾಗಿ ಮಾಡದೆ, ಕಾರ್ಪೊರೇಟ್ ಜೀವನದ ನಿರಂತರ ಮತ್ತು ಅವಿಭಾಜ್ಯ ಅಂಗವನ್ನಾಗಿ ಮಾಡಲು ಬಯಸಿದೆ.
ಮುಂದಿನ ಗುರಿ
ಐರನ್ ಮ್ಯಾನ್ 70.3 ಅನ್ನು ಜಯಿಸಿದ ನಂತರ, ಶೇಷ್ ಅವರು ಈಗ ಭವಿಷ್ಯದಲ್ಲಿ 'ಫುಲ್ ಐರನ್ ಮ್ಯಾನ್' (140.6 ಮೈಲಿಗಳು) ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಆದರೆ ಸದ್ಯಕ್ಕೆ, ಅವರ ಗಮನವು ತಮ್ಮ ತಂಡ ಮತ್ತು ಉದ್ಯಮ ಕ್ಷೇತ್ರಕ್ಕೆ ಫಿಟ್ ನೆಸ್, ನಾಯಕತ್ವ ಮತ್ತು ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಲು ಪ್ರೇರೇಪಿಸುವುದರ ಕಡೆಗೆ ಕೇಂದ್ರೀಕೃತವಾಗಿದೆ.