Anirudh Bhat: ನಾನು ಫುಲ್ ಟೈಮ್ ವಿಡಿಯೋ ಎಡಿಟರ್, ಪಾರ್ಟ್ ಟೈಮ್ ಆಕ್ಟರ್! ಅನಿರುದ್ಧ್ ಭಟ್
Anirudh Bhat rakkasapuradhol: ರವಿ ಸಾರಂಗ ನಿರ್ದೇಶನದಲ್ಲಿ ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ರಾಜ್. ಬಿ ಶೆಟ್ಟಿ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಬಿಟ್ಟರೆ ಬಹುತೇಕ ಹೊಸಬರೇ ಚಿತ್ರದಲ್ಲಿ ನಟಿಸಿದ್ದಾರೆ.'ರಕ್ಕಸಪುರದೋಳ್' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಎದುರು ರಕ್ಕಸನಂತೆ ಅಬ್ಬರಿಸಿರುವ ಅನಿರುದ್ಧ್ ಭಟ್ ಎಲ್ಲರ ಗಮನ ಸೆಳೆದಿದ್ದಾರೆ.
ಅನಿರುದ್ಧ ಭಟ್ -
ರವಿ ಸಾರಂಗ (Ravi Saranga) ನಿರ್ದೇಶನದಲ್ಲಿ ರಾಜ್ ಬಿ ಶೆಟ್ಟಿ (Raj B Shetty) ನಟನೆಯ 'ರಕ್ಕಸಪುರದೋಳ್' (Rakkasapuradhol) ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ರಾಜ್. ಬಿ ಶೆಟ್ಟಿ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಬಿಟ್ಟರೆ ಬಹುತೇಕ ಹೊಸಬರೇ ಚಿತ್ರದಲ್ಲಿ ನಟಿಸಿದ್ದಾರೆ.'ರಕ್ಕಸಪುರದೋಳ್' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಎದುರು ರಕ್ಕಸನಂತೆ ಅಬ್ಬರಿಸಿರುವ ಅನಿರುದ್ಧ್ ಭಟ್ (Anirudh Bhat) ಎಲ್ಲರ ಗಮನ ಸೆಳೆದಿದ್ದಾರೆ. ಆದಿ ಹಾಗೂ ಅರುಣ್ ಆಗಿ ದ್ವಿಪಾತ್ರದಲ್ಲಿ ನಟಿಸಿ ಎಲ್ಲರ ಹುಬ್ಬೇರಿಸಿರುವ ಪ್ರತಿಭೆ ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ನಾವು ಮಾಡಬಹುದು ಅಂತ ಗೊತ್ತಿರಲಿಲ್ಲ
'ಗುರುದೇವ್ ಹೊಯ್ಸಳ', 'ಮ್ಯಾಕ್ಸ್' ಬಳಿಕ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದರು ನಟ.
ಇದನ್ನೂ ಓದಿ: Chaithra Kundapura: ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಮಹಿಳಾ ಸ್ಪರ್ಧಿ ಬಗ್ಗೆ ಚೈತ್ರಾ ಕುಂದಾಪುರ ಹೊಸ ಪೋಸ್ಟ್!
`ಚಿಕ್ಕವನಾಗಿರಬೇಕಾದರೆ ಆಕ್ಟರ್ ಆಗಬೇಕು ಅಂತ ತಲೆಯಲ್ಲಿ ಇರಲಿಲ್ಲ. ಏಕೆಂದರೆ ನಾನು ಕುಶಾಲ್ ನಗರದಲ್ಲಿ ಇದ್ದಿದ್ದೆ. ಚಿಕ್ಕವನಿದ್ದಾಗ ಥೀಯೇಟರ್ ಹೋಗಿರಲಿಲ್ಲ. ಮೊದಲು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿದ್ದೇ ಮುಂಗಾರು ಮಳೆ. ತಂದೆ ಬಾಡಿಗೆ ಸಿಡಿ ತೆಗೆದುಕೊಂಡು ಬರ್ತಾ ಇದ್ದರು. ಆದರೆ ಸಿನಿಮಾ ನೋಡೋ ಹುಚ್ಚು ಇತ್ತು. ಸಿನಿಮಾ ನಾವು ಮಾಡಬಹುದು ಅಂತ ಗೊತ್ತಿರಲಿಲ್ಲ. ಫ್ಯಾಮಿಲಿ ಅಲ್ಲೂ ಯಾರೂ ಸಿನಿಮಾ ಆ ಥರ ಇರಲಿಲ್ಲ. ಸಿನಿಮಾ ಮೇಲೆ ಪ್ರೀತಿ ಇತ್ತು. ಗೊತ್ತಾಗಿದ್ದು ಡಿಗ್ರಿ ಸಮಯದಲ್ಲಿ. 2016 ಬೆಂಗಳೂರಿಗೆ ಬಂದಿದ್ದು. ನಾನು ತುಂಬಾ ಒಳ್ಳೆಯ ವಿದ್ಯಾರ್ಥಿ ಕೂಡ ಆಗಿದ್ದೆ' ಎಂದರು.
ಕಿರು ಚಿತ್ರದಿಂದ ಸಿನಿಮಾ ಮೇಲೆ ಮೂಡಿತ್ತು ಒಲವು
ʻಬೆಂಗಳೂರಿಗೆ ಬಂದ ಮೇಲೆ ಹಲವು ಅವಕಾಶಗಳು ಸಿಗುತ್ತೆ. ಆಗ ನಾನು ಸಣ್ಣ ವಿಡಿಯೋ ಶುರು ಮಾಡಿದ್ದೆ. ನಾನು ಹಾಗೇ ಮಾಡ್ತಾ ಮಾಡ್ತಾ ಒಂದು ಕಿರು ಚಿತ್ರಕ್ಕೆ ನನ್ನನ್ನು ಕರೆದಿದ್ದರು. ನಾನು ಆಮೇಲೆ ಶಾರ್ಟ್ ಫಿಲ್ಮ್ಸ್ ಮಾಡ್ತಿದ್ದೆ, ನಾನೇ ಎಡಿಟಿಂಗ್ ಮಾಡ್ತಿದ್ದೆ. ನಟನೆ ಕೊನೆಗೆ ಹಾಗೇ ಆವರಿಸಿಕೊಂಡು ಹೋಯ್ತು. ಹಾಗೇ ಮಾಡ್ತಾ ಮಾಡ್ತಾ ಸಿನಿಮಾ ಮೇಲೆ ಒಲವು ಬಂತು. ಅಂದಿನಿಂದ ನಾನು ನಟನೆ ಮೂಲಕ ಬೆಟರ್ ಆಗಬೇಕು ಅಂತ ನಿರ್ಧಾರ ಮಾಡಿದೆ. ಶಾರ್ಟ್ ಸಿನಿಮಾದಿಂದ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಹೀಗೆʼ ಎಂದರು.
ಹಣಗೋಸ್ಕರ ಮಾಡಲ್ಲ
ʻನಾನು ಪಾತ್ರ ಚೆನ್ನಾಗಿ ಇದ್ದರೆ ಮಾಡ್ತೀನಿ. ಹಣಗೋಸ್ಕರ ಮಾಡಲ್ಲ. ನಾನು ಹುಟ್ಟಿದ್ದು ಸುಳ್ಯದಲ್ಲಿ. ನನಗೆ ತಮ್ಮ ಇದ್ದಾನೆ. ಬೆಳೆದಿದ್ದು ಕುಶಾಲ್ ನಗರ. ಮೊದಲಿಗೆ ಓದುತ್ತಿರುವಾಗ ಫಿಲ್ಮ್ ಮಾಡೋವಾಗ ಹೆದರಿದ್ದರು ನಂದು ತಂದೆ ತಾಯಿ. ಮಾಡೋದ್ರಲ್ಲಿ ಹೊಯ್ಳಳ ನನ್ನ ತಂದೆ ತಾಯಿಗೆ ಆ ಪಾತ್ರ ಇಷ್ಟʼ ಎಂದರು.
ಬ್ಯಾಕ್‌ಅಪ್ ತುಂಬಾ ಮುಖ್ಯ
ಯಾವತ್ತು ಒಂದು ಬ್ಯಾಕ್‌ಅಪ್ ತುಂಬಾ ಮುಖ್ಯ ಆಗುತ್ತೆ. ನಾನು ಫ್ರಿಲ್ಯಾನ್ಸ್ ಎಡಿಟರ್ ಆಗಿರುವೆ. ನಾನು 5 ವರ್ಷದಿಂದ ಮಾಡ್ತಿದ್ದೆ. ನನಗೆ ಇದು ನಟನೆಗೂ ಸಹಾಯವಾಗುತ್ತೆ. ನನಗೆ ಕ್ರಿಯೆಟಿವ್ ಫೀಲ್ಡ್ ಕೆಲಸ ಮಾಡಬೇಕು ಅನ್ನೋದು ಅಷ್ಟೇ. ಆದರೆ ನಟನೆ ಮಾತ್ರ ನಂಬಿಕೊಂಡು ಇದ್ದರೆ ಕಷ್ಟ. ನಾನು ಇನ್ನೂ 2 ವರ್ಷ ಹೀಗೆ ಇದ್ದರೂ ಸಮಸ್ಯೆ ಇಲ್ಲ. ಕಾಣಿಸಿಕೊಳ್ಳಬೇಕು ಅಂತ ಸಿನಿಮಾ ನಾನು ಮಾಡಲ್ಲ.
ಇದನ್ನೂ ಓದಿ: Sushma Raj: ʻಪ್ಯಾಟೆ ಹುಡ್ಗೀರ್ ಹಳ್ಳಿ ಲೈಫುʼ ಖ್ಯಾತಿಯ ಸುಷ್ಮಾ ರಾಜ್ಗೆ ಗಂಡು ಮಗು: ತಂದೆ ನೆನೆದು ಭಾವುಕ!
ವಿಲಿನ್ ಈಗ ಪಾತ್ರ ಮಾಡಿದ್ದೇನೆ ಅಂದರೆ ಅದೇ ಮಾಡ್ತಾ ಇರಲ್ಲ. ಆದರೆ ನನಗೆ ಪಾತ್ರ ಇಷ್ಟ ಆದ್ರೆ ಮಾತ್ರ ಮಾಡುವೆ. ನಾನು ಫುಲ್ ಟೈಮ್ ವಿಡಿಯೋ ಎಡಿಟರ್, ಪಾರ್ಟ್ ಟೈಮ್ ಆಕ್ಟರ್. ನಾನು ಈ ಕಾರಣಕ್ಕೆ ಬರವಣಿಗೆ ಕೂಡ ಕಲಿತಿದ್ದೇನೆ. ಮುಂಚೆ ಸಿನಿಮಾ ಕಡಿಮೆ ಬರ್ತಾ ಇತ್ತು. ಈವಾಗ ಎಲ್ಲರೂ ಸಿನಿಮಾ ಮಾಡ್ತಾರೆ. ಸೆಲೆಬ್ರೆಟ್ ಮಾಡೋ ಥರ ಇಲ್ಲ ಎಂದರು.