ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲವ್‌ ಜಿಹಾದ್‌; ಬೆಂಗಳೂರಿನಲ್ಲಿ ಹಿಂದೂ ಯುವತಿ ಕೈಗೆ ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ!

Bengaluru Love Jihad Case: ಬೆಂಗಳೂರಿನ ಬಿಟಿಎಂ ನಿವಾಸಿ ಸೈಯದ್ ಇಮ್ತಿಯಾಜ್ ಎಂಬಾತನ ವಿರುದ್ಧ ಲವ್‌ ಜಿಹಾದ್‌ ಆರೋಪ ಕೇಳಿ ಬಂದಿದೆ. ಈತ ಕೋಲ್ಕತಾ ಯುವತಿಯನ್ನು ವಿವಾಹವಾಗಿ, ಮಗುವಾದ ಬಳಿಕ ವಂಚಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದೀಗ ಯುವತಿ ನ್ಯಾಯಕ್ಕಾಗಿ ವಕೀಲರ ಮೊರೆ ಹೋಗಿದ್ದಾಳೆ.

ಲವ್‌ ಜಿಹಾದ್‌; ಹಿಂದೂ ಯುವತಿ ಕೈಗೆ ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ

ಆರೋಪಿ ಸೈಯದ್ ಇಮ್ತಿಯಾಜ್. -

Prabhakara R
Prabhakara R Feb 10, 2026 6:53 PM

ಬೆಂಗಳೂರು: ಹಿಂದೂ ಯುವತಿಯನ್ನು ವಿವಾಹವಾಗಿದ್ದ ಮುಸ್ಲಿಂ ಯುವಕನೊಬ್ಬ, ಮಗುವಾದ ಬಳಿಕ ವಂಚಿಸಿ ಪರಾರಿಯಾಗಿರುವ ಘಟನೆ (Bengaluru Love Jihad Case) ರಾಜಧಾನಿಯಲ್ಲಿ ನಡೆದಿದೆ. ಕೋಲ್ಕತ್ತಾ ಮೂಲದ ಸೃಷ್ಟಿ ತ್ರಿಪಾಠಿ ವಂಚನೆಗೊಳಗಾದ ಯುವತಿ. ಬೆಂಗಳೂರಿನ ಬಿಟಿಎಂ ನಿವಾಸಿ ಸೈಯದ್ ಇಮ್ತಿಯಾಜ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.

ಸೃಷ್ಟಿ ತ್ರಿಪಾಠಿಯನ್ನು ಪರಿಚಯ ಮಾಡಿಕೊಂಡಿದ್ದ ಸೈಯದ್, ಆಕೆಯನ್ನು ಇಸ್ಲಾಂಗೆ ಮತಾಂತರಿಸಿ ವಿವಾಹವಾಗಿದ್ದ ಎಂದು ತಿಳಿದುಬಂದಿದೆ. 2025ರ ಜುಲೈ 18ರಂದು ಸೈಯದ್ ಹಾಗೂ ಹಿಂದೂ ಯುವತಿ ರಿಜಿಸ್ಟರ್ ಮದುವೆಯಾಗಿದ್ದರು. ಬಳಿಕ ಪತ್ನಿಗೆ ಗರ್ಭಪಾತ ಮಾಡಿಸಿದ್ದ ಆರೋಪ ಸೈಯದ್ ವಿರುದ್ಧ ಕೇಳಿ ಬಂದಿತ್ತು. ನಂತರ ಹೆಣ್ಣುಮಗುವಿಗೆ ಸಂತ್ರಸ್ತೆ ಜನ್ಮ ನೀಡಿದ್ದರು. ಇದಾದ ಬಳಿಕ ಸೈಯದ್ ಆಕೆಗೆ ಕೈಕೊಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮದುವೆಗೋಸ್ಕರ ಬ್ರಾಹ್ಮಣ ಯುವತಿಯಾದ ಸೃಷ್ಟಿ ತ್ರಿಪಾಠಿಯನ್ನು ಸೈಯದ್‌ ಮತಾಂತರಿಸಿ, ಜೈನಬ್‌ ಎಂದು ಹೆಸರು ಬದಲಿಸಿದ್ದಾರೆ. ಇದೀಗ ವಂಚನೆಯಾದ ಬಳಿಕ ಆತನ ಮನೆಗೆ ಹೋಗಿ ವಿಚಾರಿಸಿದರೆ ಆತನ ಮನೆಯವರು ಕೂಡ ಮಗು ಬೇಡ, ಸೊಸೆಯೂ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ನ್ಯಾಯಕ್ಕಾಗಿ ಯುವತಿ ಜೈನಾಬ್‌, ವಕೀಲರ ಮೊರೆ ಹೋಗಿದ್ದಾರೆ.

Chinnu Pappu: 2 ಲಕ್ಷ ಫಾಲೋವರ್ಸ್‌ ಹೊಂದಿದ್ದ ಇನ್‌ಫ್ಲುಯೆನ್ಸರ್‌ ರೇಶ್ಮಾ ಆತ್ಮಹತ್ಯೆ

ಮುಸ್ಲಿಂ ಯುವಕನ ಜತೆ ಓಡಿ ಹೋಗಿ ಹಿಂದೂ ಯುವತಿ ಮದುವೆ; ಪೋಷಕರ ಕಣ್ಣೀರು

Vijayapura News (2)

ವಿಜಯಪುರ: ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿದ್ದ ಯುವತಿ, ಆತನ ಜತೆ ಮದುವೆಯಾಗಿ ವಾಪಸ್‌ ಬಂದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಅನ್ಯಧರ್ಮೀಯನನ್ನು ಮದುವೆ ಆಗಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಪೊಲೀಸ್ ಠಾಣೆಯ ಎದುರಿಗೆ ಕೂತು ಗೋಳಿಟ್ಟಿದ್ದಾರೆ.

ಮಗಳಿಗಾಗಿ ಆಕೆಯ ಪೋಷಕರು ಪೊಲೀಸ್ ಠಾಣೆ ಮುಂದೆ ಕಣ್ಣಿರು ಹಾಕಿದ್ದು, ಮನೆಗೆ ವಾಪಸ್‌ ಬಾ ಮಗಳೇ ಎಂದು ಗೋಗರೆದಿದ್ದಾರೆ. ಮೊಹಮದ್ ಸಲಿಂ ಸುತಾರ್ ಎಂಬ ಯುವಕನನ್ನು ಪ್ರೀತಿಸಿದ್ದ ಹುಡುಗಿ, ತಂದೆ ತಾಯಿಯನ್ನು ಎದುರುಹಾಕಿಕೊಂಡು ಆತನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆ ಮಗಳು ಕಾಣೆಯಾಗಿದ್ದಾಳೆಂದು ಫೆ. 2ರಂದು ಯುವತಿಯ ಪೋಷಕರು ವಿಜಯಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಇದೀಗ ಅದೇ ಠಾಣೆಗೆ ಸ್ವಯಂಪ್ರೇರಿತವಾಗಿ ಪ್ರಿಯಕರನೊಂದಿಗೆ ಬಂದ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ.

ಪೊಲೀಸ್ ವಾಹನದ ಮುಂದೆ ಅಡ್ಡ ಬಿದ್ದು ಗೋಳಾಡಿದ ತಂದೆ-ತಾಯಿ, ಮನೆಗೆ ವಾಪಸ್ ಬರುವಂತೆ ಮಗಳ ಬಳಿ ಅಂಗಲಾಚಿದ್ದಾರೆ. ಆದರೆ ಯುವತಿ ಮಾತ್ರ ಹೆತ್ತವರ ಕಣ್ಣೀರಿಗೂ ಕರಗದೆ, ನಾನು ನನ್ನ ಗಂಡನ ಜತೆಗೆ ಹೋಗುತ್ತೇನೆ, ನಿಮ್ಮ ಜತೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಯುವತಿಯೂ ಪ್ರಾಪ್ತ ವಯಸ್ಸಿನವಳಾದ್ದರಿಂದ ಪೊಲೀಸರು ಆಕೆಯನ್ನು ಪತಿಯ ಜತೆಗೇ ಕಳುಹಿಸಿಕೊಟ್ಟಿದ್ದಾರೆ.