ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sahitya Akademi Awards 2025: ಶಿವಲಿಂಗಪ್ಪ, ಆರ್‌.ದಿಲೀಪ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ ಮತ್ತು ಬಾಲ ಪುರಸ್ಕಾರ ಪ್ರಶಸ್ತಿ ಪ್ರಕಟವಾಗಿದೆ. ಯುವ ಪುರಸ್ಕಾರ ಆರ್.ದಿಲೀಪ್ ಕುಮಾರ್​​ ಅವರ ‘ಪಚ್ಚೆಯ ಜಗುಲಿ’ಗೆ ಕನ್ನಡ ಕೃತಿಗೆ ಲಭಿಸಿದೆ. ಬಾಲ ಪುರಸ್ಕಾರ ಪ್ರಶಸ್ತಿಗೆ ಮತ್ತೋರ್ವ ಕನ್ನಡದ ಲೇಖಕ ಕೆ.ಶಿವಲಿಂಗಪ್ಪ ಹಂದಿಹಾಳು ಪಾತ್ರರಾಗಿದ್ದಾರೆ.​

ಕನ್ನಡದ ಶಿವಲಿಂಗಪ್ಪ, ಆರ್‌.ದಿಲೀಪ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಆರ್.ದಿಲೀಪ್ ಕುಮಾರ್ ಮತ್ತು ಕೆ.ಶಿವಲಿಂಗಪ್ಪ ಹಂದಿಹಾಳು.

Profile Ramesh B Jun 19, 2025 9:11 PM

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯ (Sahitya Akademi Awards) 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ (Sahitya Akademi Yuva Puraskar) ಮತ್ತು ಬಾಲ ಪುರಸ್ಕಾರ (Bal Puraskar) ಪ್ರಶಸ್ತಿ ಪ್ರಕಟವಾಗಿದೆ. ಯುವ ಪುರಸ್ಕಾರ ಆರ್.ದಿಲೀಪ್ ಕುಮಾರ್​​ ಅವರ ‘ಪಚ್ಚೆಯ ಜಗುಲಿ’ಗೆ ಕನ್ನಡ ಕೃತಿಗೆ ಲಭಿಸಿದೆ. ಬಾಲ ಪುರಸ್ಕಾರ ಪ್ರಶಸ್ತಿಗೆ ಮತ್ತೋರ್ವ ಕನ್ನಡದ ಲೇಖಕ ಕೆ.ಶಿವಲಿಂಗಪ್ಪ ಹಂದಿಹಾಳು ಪಾತ್ರರಾಗಿದ್ದಾರೆ.​ ಅವರ ‘ನೋಟ್ ಬುಕ್’ ಸಣ್ಣ ಕಥೆಗಳ ಸಂಕಲನಕ್ಕೆ ಈ ಪ್ರಶಸ್ತಿ ಲಭಿಸಿದೆ. ಮಕ್ಕಳ ಸಣ್ಣ ಕಥೆಗಳ ಕೃತಿ ʼನೋಟ್​ ಬುಕ್ʼ 2021ರಲ್ಲಿ ಪ್ರಕಟವಾಗಿತ್ತು.

ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲೇ ತಿಳಿಸವುದಾಗಿ ಅಕಾಡೆಮಿ ಹೇಳಿದೆ.

ಈ ಸುದ್ದಿಯನ್ನೂ ಓದಿ: 2023-24ನೇ ಸಾಲಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಸಿದ್ದಪ್ಪನವರಿಗೆ ಪ್ರಶಸ್ತಿ ನೀಡಿ ಗೌರವ

ಆರ್.ದಿಲೀಪ್ ಕುಮಾರ್ ಹಿನ್ನೆಲೆ

1991ರಲ್ಲಿ ಮೈಸೂರಿನಲ್ಲಿ ಜನಿಸಿದ ಆರ್​.ದಿಲೀಪ್​ ಕುಮಾರ್​ ಸದ್ಯ ಚಾಮರಾಜನಗರದಲ್ಲಿ ವಾಸವಾಗಿದ್ದಾರೆ. ಇವರು ಪದವಿ ಶಿಕ್ಷಣವನ್ನು ಚಾಮರಾಜನಗರ ಸರ್ಕಾರಿ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಪದವಿಯನ್ನು ಚಾಮರಾಜನಗರ ಜೆಎಸ್​ಎಸ್​ ಕಾಲೇಜಿನಲ್ಲಿ ಪೂರೈಸಿದರು. 4 ವರ್ಷಗಳ ಕಾಲ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮಹಾಕವಿ ಪಂಪನ ಮಹಾಕಾವ್ಯಗಳನ್ನು ಕುರಿತು ಸರಣಿ ವಿಮರ್ಶಾ ಲೇಖನ ಬರೆದಿದ್ದಾರೆ. ʼಹಾರುವ ಹಂಸೆʼ ಎನ್ನುವ ಕವನ ಸಂಕಲವನ್ನೂ ಬರೆದಿದ್ದಾರೆ.

ಕೆ.ಶಿವಲಿಂಗಪ್ಪ ಹಿನ್ನೆಲೆ

ಇನ್ನು ಕೆ.ಶಿವಲಿಂಗಪ್ಪ ಹಂದಿಹಾಳು ಬಳ್ಳಾರಿ ಹಂದಿಹಾಳು ಗ್ರಾಮದವರು. ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ʼನಾನು ಮತ್ತು ಕನ್ನಡಕʼ (ಕವನ ಸಂಕಲನ), ʼಎಳೆಬಿಸಿಲುʼ (ಮಕ್ಕಳ ಸಾಹಿತ್ಯ), ʼಶಾವೋಲಿನ್‌ʼ (ಇಂಗ್ಲಿಷ್‌ ಮೂಲ ಮಕ್ಕಳ ಕಥೆಗಳು), ʼಆನಂದಾವಲೋಕನʼ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ʼಬಳ್ಳಾರಿಯ ಬೆಡಗುʼ (ಕಥಾ ಸಂಕಲನ), ʼದಿ ಯಂಗ್‌ ಸೈಂಟಿಸ್ಟ್‌ʼ (ಮಕ್ಕಳ ಕಾದಂಬರಿ) ಮತ್ತಿತರ ಕೃತಿ ರಚಿಸಿದ್ದಾರೆ.